ಜೆಡಿಎಸ್ ಗೆ ಮರ್ಮಾಘಾತ- ಬಯಲಾಯಿತು ಗುಪ್ತಚರ ವರದಿ, ಜೆಡಿಎಸ್ ಪಕ್ಷದ ಅಂತ್ಯ ಸನಿಹ

ಇಡೀ ದೇಶದಲ್ಲಿ ಮೋದಿ ಅಲಿಯು ಸುನಾಮಿಯಾಗಿ ಪರಿವರ್ತನೆಗೊಂಡು ಭರ್ಜರಿ ಬಹುಮತದತ್ತ ಕಾಲಿಟ್ಟಿದೆ, ನರೇಂದ್ರ ಮೋದಿಯವರ ಅಲೆಯನ್ನು ತಡೆಯಲು ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಪಕ್ಷದ ಜೊತೆ ಚುನಾವಣಾಪೂರ್ವ ಮೈತ್ರಿಯನ್ನು ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತೀವೆ. ಆದರೆ ಯಾವ ರಾಜ್ಯದಲ್ಲಿಯೂ ಸಹ ಮೈತ್ರಿಯಿಂದ ಪ್ರಾದೇಶಿಕ ಪಕ್ಷಗಳಿಗಾಗಲಿ ಅಥವಾ ಕಾಂಗ್ರೆಸ್ ಪಕ್ಷಗಳಿಗಾಗಲಿ ಲಾಭವಿಲ್ಲ, ಈ ದೋಸ್ತಿಗಳ ಸಂಪೂರ್ಣ ಲಾಭವನ್ನು ಮಾತ್ರ ಬಿಜೆಪಿ ಪಕ್ಷ ಪಡೆದುಕೊಳ್ಳುತ್ತಿದೆ. ಪ್ರತಿಯೊಂದು ರಾಜ್ಯದಲ್ಲಿಯೂ ಇದೇ ರೀತಿಯ ಸನ್ನಿವೇಶಗಳು ನಿರ್ಮಾಣವಾಗಿವೆ.

ಅಕ್ಷರ ಸಹ ಇದೇ ರೀತಿಯ ಸನ್ನಿವೇಶ ಇದೀಗ ಕರ್ನಾಟಕದಲ್ಲಿ ನಿರ್ಮಾಣವಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡು ಕಣಕ್ಕಿಳಿಯಲು ನಿರ್ಧರಿಸಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ದೋಸ್ತಿಗಳ ಸಂಪೂರ್ಣ ಲಾಭ ಮಾತ್ರ ಬಿಜೆಪಿ ಪಕ್ಷಕ್ಕೆ ಆಗಲಿದೆ ಎಂಬುದು ಮೊದಲಿನಿಂದ ಕೇಳಿ ಬರುತ್ತಿರುವ ಮಾತು. ಇದಕ್ಕೆ ಮತ್ತಷ್ಟು ಪೂರಕ ಎಂಬಂತೆ ಇದೀಗ ಸಿಎಂ ಕುಮಾರಸ್ವಾಮಿ ರವರಿಗೆ ಗುಪ್ತಚರ ಇಲಾಖೆಯು ಮಾಹಿತಿ ನೀಡಿದ್ದು, ಜೆಡಿಎಸ್ ಪಕ್ಷದ ಅಂತ್ಯ ಸನಿಹ ವಾಗಿದೆ ಎಂಬ ಅರಿವು ಕುಮಾರಸ್ವಾಮಿ ರವರಿಗೆ ಸಿಲುಕಿದೆ.

ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿರುವ ಕಾರಣ ಕೇವಲ ನಾಯಕರು ಮಾತ್ರ ಮಾಧ್ಯಮಗಳ ಮುಂದೆ ಸಂತೋಷವಾಗಿದ್ದಾರೆ. ಆದರೆ ಇಷ್ಟು ವರ್ಷ ಬದ್ಧ ವೈರಿಗಳಂತೆ ಕಾದಾಡಿಕೊಂಡು ತಮ್ಮ ವಿರೋಧ ಪಕ್ಷಗಳ ಕಾರ್ಯಕರ್ತರನ್ನು ಸೋಲಿಸಲು ಪ್ರತಿಕ್ಷಣವೂ ತಮ್ಮದೇ ಆದ ಯೋಜನೆಗಳನ್ನು ರೂಪಿಸಿ ಪಕ್ಷಕ್ಕಾಗಿ ದುಡಿಯುತ್ತಿದ್ದ ಕಾರ್ಯಕರ್ತರ ಮನಸ್ಸನ್ನು ಯಾವ ನಾಯಕರು ಅರ್ಥಮಾಡಿಕೊಂಡಿಲ್ಲ ಬದಲಾಗಿ, ಕೇವಲ ತಮ್ಮ ಲಾಭಕ್ಕಾಗಿ ಮೈತ್ರಿಯನ್ನು ಮಾಡಿಕೊಂಡಿದ್ದಾರೆ.

ಇದರಿಂದ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ಭಿನ್ನಮತಗಳು ಭುಗಿಲೆದ್ದಿದೆ. ಇನ್ನು ಭಿನ್ನತೆಗಳಿಗೆ ಹೋಲಿಸಿ ಕೊಂಡಲ್ಲಿ ಬೇರೆ ಕ್ಷೇತ್ರಗಳಿಗಿಂತ ಜೆಡಿಎಸ್ ಪಕ್ಷದ ಪ್ರಮುಖ ಕ್ಷೇತ್ರಗಳಾದ ತುಮಕೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಯಲ್ಲಿ ಹೆಚ್ಚು ಭಿನ್ನಾಭಿಪ್ರಾಯಗಳು ಕಂಡುಬಂದಿವೆ. ಇದೇ ವಿಷಯವನ್ನು ಕುಮಾರಸ್ವಾಮಿ ರವರು ತಾವು ಗುಪ್ತಚರ ಇಲಾಖೆಯಿಂದ ಖಚಿತಪಡಿಸಿಕೊಂಡು ಚಿಂತೆಯಲ್ಲಿ ತೊಡಗಿ ದ್ದಾರೆ ಎನ್ನಲಾಗಿದೆ. ಗುಪ್ತಚರ ಇಲಾಖೆಯ ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟಿರುವ ಕ್ಷೇತ್ರಗಳಲ್ಲಿ ಕೆಲವೇ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಪಕ್ಷದಿಂದ ಸಣ್ಣಮಟ್ಟದ ಬೆಂಬಲ ಸಿಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಆದರೆ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಕಿಂಚಿತ್ತು ನೆರವು ಸಿಗುವುದಿಲ್ಲ ಎಂದು ಗುಪ್ತಚರ ಇಲಾಖೆಯು ಬಹಿರಂಗಪಡಿಸಿದೆ. ತುಮಕೂರಿನಲ್ಲಿ ಪ್ರಮುಖವಾಗಿ ಮುದ್ದಹನುಮೇಗೌಡರು ಕೇವಲ ನಾಮಪತ್ರವನ್ನು ವಾಪಸ್ ತೆಗೆದುಕೊಂಡಿದ್ದಾರೆ ಅಷ್ಟೇ ಆದರೆ ಸಂಪೂರ್ಣ ಬೆಂಬಲವನ್ನು ನೀಡಲು ಸಿದ್ದರಿಲ್ಲ ಎಂಬ ವಿಷಯವನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಇನ್ನು ಮಂಡ್ಯ ಜಿಲ್ಲೆಯ ಪರಿಸ್ಥಿತಿ ಈಗಾಗಲೇ ನಿಮಗೆ ಎಲ್ಲರಿಗೂ ತಿಳಿದಿದೆ, ಆದರೆ ಇಷ್ಟು ದಿವಸ ಕಾಂಗ್ರೆಸ್ ಪಕ್ಷದ ನಾಯಕರು ಮಾತ್ರ ಸುಮಲತಾ ರವರಿಗೆ ಬೆಂಬಲ ನೀಡುತ್ತಾರೆ ಎಂಬ ಮಾಹಿತಿ ಕೇಳಿ ಬಂದಿತ್ತು ಆದರೆ ಇದೀಗ ಅಂಬರೀಶ್ ಅವರ ಅಭಿಮಾನಿಗಳಾದ ಕೆಲವು ಜೆಡಿಎಸ್ ಕಾರ್ಯಕರ್ತರು ಹಾಗೂ ನಾಯಕರು ಸಹ ಸುಮಲತಾ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಮಾಹಿತಿ ಗುಪ್ತಚರ ಇಲಾಖೆಯಿಂದ ಹೊರಬಿದ್ದಿದೆ.

ಇನ್ನು ಹಾಸನ ಜಿಲ್ಲೆಗೆ ಮಾಹಿತಿಯನ್ನು ನೋಡಿದರೆ ಕೈ ಕಾರ್ಯಕರ್ತರು ಮಾನಸಿಕವಾಗಿ ಜೆಡಿಎಸ್ ಪಕ್ಷದ ಪರವಾಗಿ ಕೆಲಸ ಮಾಡಲು ಸಿದ್ಧರಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದ್ದು, ರೇವಣ್ಣ ರವರನ್ನು ಬದ್ಧ ಶತ್ರುಗಳಾಗಿ ನೋಡಿದ್ದ ಕಾಂಗ್ರೆಸ್ ಕಾರ್ಯಕರ್ತರು ಇದುವರೆಗೂ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರ ಬೆಂಬಲಕ್ಕೆ ನಿಂತಿಲ್ಲ ಎಂಬ ಅಂಶ ಹೊರಬಿದ್ದಿದೆ. ಈ ಎಲ್ಲ ಯೋಜನೆಗಳಿಂದ ಸಿಎಂ ಕುಮಾರಸ್ವಾಮಿ ರವರಿಗೆ ಹೊಸ ತಲೆ ನೋವು ಶುರುವಾಗಿದ್ದು ಗೆಲುವಿನ ಆಸೆ ಇಟ್ಟುಕೊಂಡಿದ್ದ ಮೂರು ಕ್ಷೇತ್ರಗಳನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ ಈ ಮೂಲಕ ಜೆಡಿಎಸ್ ಪಕ್ಷವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರ ಗೆಲ್ಲುವುದು ಸಹ ಅನುಮಾನವಾಗಿದೆ.

Post Author: Ravi Yadav