ಜೆಡಿಎಸ್ ಸಭೆಯ ನಿರ್ಧಾರ ಕೇಳಿದ ಸಿದ್ದು ಗೆ ಶಾಕ್, ಪ್ರತಾಪ್ ಸಿಂಹ ಭರ್ಜರಿ ಗೆಲುವು ಖಚಿತ?

ದೋಸ್ತಿಗಳ ನಾಯಕರು ಮೇಲ್ನೋಟಕ್ಕೆ ಚುನಾವಣಾ ಪೂರ್ವ ಮೈತ್ರಿ ಎಂದು ಕೇವಲ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಾರೆ ಆದರೆ ಯಾವ ಕ್ಷೇತ್ರದಲ್ಲಿ ನೋಡಿದರೂ ಭಿನ್ನಮತಗಳು ಗುಟ್ಟಾಗಿ ಉಳಿದುಕೊಂಡಿಲ್ಲ. ಕೇವಲ ದೋಸ್ತಿಗಳ ಮೈತ್ರಿ ಹೇಳಿಕೆಗಳಿಗಷ್ಟೇ ಸೀಮಿತವಾಗಿದೆ. ಆದರೆ ಇದರ ಸಂಪೂರ್ಣ ಲಾಭ ಮಾತ್ರ ಬಿಜೆಪಿ ಪಕ್ಷಕ್ಕೆ ಸಿಗುತ್ತಿದೆ ಯಾಕೆಂದರೆ ಒಂದು ಪಕ್ಷದ ಅಭ್ಯರ್ಥಿ ಸ್ಪರ್ದಿಸದೆ ಇರುವ ಕಾರಣ ಮತಗಳ ಶೇಕವಾರು ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವ ಎಲ್ಲ ಸೂಚನೆಗಳು ಕಾಣ ಸಿಗುತ್ತಿವೆ.

ಮಂಡ್ಯ ಹಾಗೂ ತುಮಕೂರ್ ಜಿಲ್ಲೆಯ ಭಿನ್ನಮತವಂತೂ ರಾಷ್ತ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ, ಯಾಕೆಂದರೆ ಸ್ವತಹ ರಾಹುಲ್ ಗಾಂಧಿ ಹಾಗೂ ಸಿದ್ದು ರವರು ಪ್ರಯತ್ನ ಪಟ್ಟರು ಸಹ ಭಿನ್ನಮತ ಗಳು ಶಮನಗೊಂಡಿಲ್ಲ, ಈದೀಗ ಈ ಸಾಲಿಗೆ ಮತ್ತೊಂದು ಕ್ಷೇತ್ರ ಸೇರಿಕೊಂಡಿದ್ದು ಈಗಾಗಲೇ ಕ್ಷೇತ್ರದ ಸಮರ್ಗ ಅಭ್ಭಿವೃದ್ಧಿಯಿಂದ ಗೆಲುವಿನ ಸೂಚನೆ ನೀಡಿದ್ದ ಪ್ರಥಮ್ ಸಿಂಹ ರವರು ಬಹಳ ಸುಲಭವಾಗಿ ಗೆದ್ದು ಬೀಗುವ ಎಲ್ಲ ಸಾಧ್ಯತೆಗಳಿವೆ. ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬ ಗಾದೆಗೆ ಇಲ್ಲಿ ಸ್ವಲ್ಪ ಬದಲಾವಣೆ ತಂದು ಇಬ್ಬರ ದೋಸ್ತಿ ಮತ್ತೊಬ್ಬರಿಗೆ ಲಾಭ ಎಂಬಂತೆ ಕಾಣ ಸಿಗುತ್ತಿದೆ.

ಈದೀಗ ಮಾಜಿ ಮಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಬಹಳ ಸುಲಭವಾಗಿ ಹೀನಾಯವಾಗಿ ಸೋಲಿಸಿದ್ದ ಜಿ ಟಿ ದೇವೇಗೌಡ ರವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಕೈ ಕೊಟ್ಟಿದ್ದಾರೆ. ಮೊನ್ನೆಯಷ್ಟೇ ಇದ್ದಕ್ಕಿದ್ದ ಹಾಗೆ ಕಾಣಿಸಿಕೊಂಡು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಸಂಪೂರ್ಣ ಬೆಂಬಲ ಕೊಡುತ್ತೇನೆ ಅಂದಿದ್ದ ದೇವೇಗೌಡರು ಈಗ ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಟ್ಟಿದ್ದಾರೆ. ಇಂದು ನಡೆದ ಜೆಡಿಎಸ್ ಕಾರ್ಯಕರ್ತ ಸಭೆಗೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿ ಟಿ ದೇವೇಗೌಡರು ಷಾಕಿಂಗ್ ಸುದ್ದಿ ಹೊರಹಾಕಿದ್ದಾರೆ.

ದೋಸ್ತಿಗಳ ಮೈತ್ರಿಯಿಂದ ಕೇವಲ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯಕರ್ತರ ಮನಸ್ಸು ಒಡೆದುಹೋಗಿದೆ, ಯಾವ ಕಾರಣಕ್ಕೂ ಮೈತ್ರಿಯನ್ನು ಒಪ್ಪಲು ಕಾರ್ಯ ಕರ್ತರು ಒಪ್ಪಲು ಸಿದ್ದರಿಲ್ಲ, ಒಂದು ವೇಳೆ ಸಿದ್ದರಾಮಯ್ಯ ನವರ ಬೆಂಬಲಿತ ಅಭ್ಯರ್ಥಿ ಸೋತರೆ ಅದಕ್ಕೂ ನನಗೂ ಹಾಗೂ ನಾನಾಗಲಿ, ಸಾ.ರಾ. ಮಹೇಶ್​ ಆಗಲಿ ಹೊಣೆಯಲ್ಲ ಅಂತ ಹೇಳಿದರು.ಅಷ್ಟೇ ಅಲ್ಲದೆ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿಯೂ ಸಹ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದು ಕಾರ್ಯಕರ್ತರು ತಮ್ಮ ನಿರ್ಧಾರವನ್ನು ತಿಳಿಸಿ ಹೊರನಡೆದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದು ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಶಾಕ್ ಎದುರಾಗಿದೆ.

Post Author: Ravi Yadav