ಹತ್ತು ವರ್ಷಗಳ ಸೇನೆಯ ಕನಸನ್ನು ನನಸು ಮಾಡಿದ ನಿರ್ಮಲ ಸೀತಾರಾಮನ್, ಕೊನೆಗೂ ಭಾರತದ ತೆಕ್ಕೆಗೆ ಮತ್ತೊಂದು ಬ್ರಹ್ಮಸ್ತ್ರ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಭಾರತ ಹಾಗೂ ಪಾಕಿಸ್ತಾನದ ಗಡಿಯಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಗಡಿಯಲ್ಲಿ ಎರಡು ದೇಶಗಳು ತನ್ನ ಸೇನೆಯನ್ನು ಜಮಾವಣೆ ಮಾಡಿ ಎಂತಹ ಸನ್ನಿವೇಶಕ್ಕೂ ಸಿದ್ದರಾಗಿ ನಿಂತಿದ್ದಾರೆ, ಇದರಿಂದ ಭಯಭೀತಿಗೊಂಡಿರುವ ಪಾಕಿಸ್ತಾನವು ಮೊನ್ನೆಯಷ್ಟೇ ಯುದ್ಧ ನಡೆಯುವ ಸಾಧ್ಯತೆಗಳಿಗೆ ಆದ ಕಾರಣದಿಂದ ಚೀನಾ ದೇಶದ ಸಹಾಯ ಕೇಳಿ ಅತ್ಯಾಧುನಿಕ ಸುಭ್ಮೆರಿನಗಳನ್ನು ಕಳುಹಿಸಿಕೊಡುವಂತೆ ಬೇಡಿಕೆ ಇಟ್ಟಿತ್ತು, ಇದಕ್ಕೆ ಅಷ್ಟು ಎಂದಿದ್ದ ಚೀನಾ ದೇಶವು ಎಂತಹ ಸಮಯದಲ್ಲಿಯೂ ನಿಮ್ಮ ಬೆಂಬಲಕ್ಕೆ ನಾವು ಇದ್ದೇವೆ ಎಂಬ ಸಂದೇಶವನ್ನು ಸಾರಿ, ಜಲಾಂತರಗಾಮಿ ನೌಕೆ ಗಳನ್ನೂ ಸಿದ್ದಪಡಿಸಿ ನೀಡಲಾಗುತ್ತದೆ ಎಂದು ರಕ್ಷಣಾ ಒಪ್ಪಂದವನ್ನು ಮಾಡಿಕೊಂಡಿತ್ತು.

ಇಷ್ಟೇ ಅಲ್ಲದೆ ಈಗಾಗಲೇ ದಿನೇ ದಿನೇ ಬಲಿಷ್ಠವಾಗುತ್ತಿರುವ ಭಾರತೀಯ ಸೇನೆಯನ್ನು ಎದುರು ಹಾಕಿ ಕೊಳ್ಳುವ ಧೈರ್ಯ ಭಾರತ ದೇಶದ ವಿರೋಧಿ ರಾಷ್ಟ್ರಗಳಿಗೆ ಇಲ್ಲ, ಚೀನಾ ದೇಶಕ್ಕೆ ಸಾಮರ್ಥ್ಯ ಇದ್ದರು ಸಹ ಭಾರತ ವಿರುದ್ಧ ಹೊರಡುವ ಮನ್ನಸ್ಸು ಇಲ್ಲ ಬದಲಾಗಿ ಮೊದಲಿಂದಲೂ ಕೇವಲ ಕುಂತತ್ರ ನೀತಿಯನ್ನು ಮಾತ್ರ ಅನುಸರಿಸುತ್ತ ಬಂದಿದೆ. ಇನ್ನು ಭಾರತದ ಭೌಗೋಳಿಕ ಸ್ಥಾನವನ್ನು ನೋಡಿದರೆ ಭಾರತ ದೇಶವನ್ನು ಸಮುದ್ರ ಮಾಗ್ರವಾಗಿ ದಾಳಿ ಮಾಡುವುದು ಬೇರೆ ಮಾರ್ಗಗಳಿಗೆ ಹೋಲಿಸುಕೊಂಡರೆ ಸುಲಭ ಆದ ಕಾರಣದಿಂದ ನೆರೆಯ ರಾಷ್ಟ್ರಗಳು ಜಲಾಂತರಗಾಮಿ ಹಾಗೂ ನೌಕಾ ಪಡೆಯ ಮೇಲೆ ಬಾರಿ ಊಡಿಕೆಯನ್ನು ಮಾಡುತ್ತಿವೆ ಆದ ಕಾರಣ ಭಾರತೀಯ ಸೇನೆಯ ತೆಕ್ಕೆ ಮತ್ತೊಂದು ಬ್ರಹ್ಮಸ್ತ್ರ ಸೇರಿಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಬರೋಬ್ಬರಿ ೨.೪ ಶತಕೋಟಿ ಡಾಲರ್ ಮೌಲ್ಯದ ಮಹತ್ವದ ಒಪ್ಪಂದಲ್ಲೇ ವಿಶ್ವದ ಬಲಾಢ್ಯ ದೇಶಗಳ ಸಾಲಿನಲ್ಲಿ ಕಾಣ ಸಿಗುವ ಭಾರತ ಹಾಗೂ ಅಮೇರಿಕ ದೇಶಗಳು ಸಹಿ ಹಾಕಿವೆ. ಬರೋಬ್ಬರಿ 24 ಬಹು ಪಾತ್ರದ ಎಂಎಚ್-60 ರೋಮಿಯೋ ಸೀಹಾಕ್ ಹೆಲಿಕಾಪ್ಟರ್‍ಗಳನ್ನು ಭಾರತ ದೇಶಕ್ಕೆ ಸಿದ್ದಪಡಿಸಿ ಕೊಡುವುದಾಗಿ ಅಮೇರಿಕ ದೇಶವು ಒಪ್ಪಿಕೊಂಡಿದೆ. ವೈರಿ ರಾಷ್ಟ್ರಗಳ ಜಲಾಂತರ್ಗಾಮಿ(ಸಬ್‍ಮರೀನ್) ಗಳನ್ನೂ ಕ್ಷಣ ಮಾತ್ರದಲ್ಲಿ ಉಡಾಯಿಸಬಲ್ಲ ಈ ಯುದ್ಧ ವಿಮಾನಗಳಿಗಾಗಿ ಭಾರತ ಸೇನೆಯು ಬರೋಬ್ಬರಿ ಹತ್ತು ವರ್ಷಗಳಿಂದ ಬೇಡಿಕೆಯಿಟ್ಟಿತ್ತು.

ಈದೀಗ ನರೇಂದ್ರ ಮೋದಿರವರ ಸರ್ಕಾರ ಸೇನೆಯ ಕನಸನ್ನು ಈಡೇರಿಸಿದ್ದು ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಭಾರತೀಯ ಸೇನೆಯು ಈ ಹೆಲಿಕಾಪ್ಟರ್ಗಳನ್ನು ಬಳಸಿಕೊಂಡು ವೈರಿಗಳನ್ನು ಭೇಟೆಯಾಡಲಿವೆ. ಸಬ್‍ಮರೀನ್‍ಗಳನ್ನು ಬೇಟೆಯಾಡಲು ಮತ್ತು ಸಮರನೌಕೆಗಳನ್ನು ಹೊಡೆದುರುಳಿಸಲು ವಿನ್ಯಾಸಗೊಳಿಸಿರುವ ರೋಮಿಯೋ ಸೀಹಾಕ್ ಎಂಎಚ್-೬೦ ಹೆಲಿಕಾಪ್ಟರ್‍ಗಳನ್ನು ಸಮುದ್ರದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಬಳಸಬಹುದಾಗಿದೆ.

Post Author: Ravi Yadav