ಸೈನಿಕರನ್ನು ಕಟ್ಟಿ ಹಾಕಲು ನಿರ್ಧರಿಸಿದ ಕಾಂಗ್ರೆಸ್, ದೇಶದೆಲ್ಲೆಡೆ ಬಾರಿ ಆಕ್ರೋಶ

ಭಾರತ ದೇಶದ ಕಿರೀಟದಂತೆ ಇರುವ ಜಮ್ಮು ಹಾಗೂ ಕಾಶ್ಮೀರದ ಪರಿಸ್ಥಿಯ ಬಗ್ಗೆ ಬಹುಶ ನಿಮಗೆ ತಿಳಿಸಬೇಕಾದ ಅವಶ್ಯಕತೆ ಇಲ್ಲ ಎನ್ನಿಸುತ್ತದೆ, ಅಲ್ಲಿ ನಮ್ಮ ದೇಶದ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕೆ ಇಟ್ಟು ಉಗ್ರರ ಉಪಟಳವನ್ನು ಹತ್ತಿಕ್ಕಲು ಪ್ರಯತ್ನ ಪಡುತ್ತಿದ್ದಾರೆ, ಇತ್ತ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಹ ಸೇನೆಗೆ ತನ್ನ ಮೈತ್ರಿ ಪಕ್ಷ ಅಡ್ಡಲಾಗಿದೆ ಎಂದು ತಿಳಿದುಕೊಂಡು ದೇಶ ಭದ್ರತೆಯ ವಿಷಯದಲ್ಲಿ ರಾಜಿಯಾಗಬಾರದು ಎಂದು ತನ್ನ ಸರ್ಕಾರವನ್ನು ತಾನೇ ಉರುಳಿಸಿಕೊಂಡು ರಾಷ್ತ್ರಪತಿಯ ಆಡಳಿತದ ಮೂಲಕ ಸೇನೆಗೆ ಸಂಪೂರ್ಣ ಬಲ ನೀಡಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಮಾಡಲು ಪ್ರಯತ್ನ ಪಡುತ್ತಿದೆ.

ಇತ್ತೀಚಿಗೆ ಪುಲ್ವಾಮಾ ದಾಳಿಯ ನಂತರ ಮತ್ತಷ್ಟು ಚುರುಕುಗೊಂಡು ಸೇನೆಗೆ ಎಲ್ಲ ರೀತಿಯಲ್ಲೂ ಸಂಪೂರ್ಣ ಸ್ವತಂತ್ರ ನೀಡಿ ಉಗ್ರರನ್ನು ಮಟ್ಟ ಹಾಕಿ ದೇಶ ಭದ್ರತೆಯೇ ವಿಚಾರದಲ್ಲಿ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿರುವ ನರೇಂದ್ರ ಮೋದಿ ರವರ ಕಾರ್ಯಯೋಜನೆ ಫಲಕೊಡುವ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಸೇನೆಯನ್ನು ಕಟ್ಟಿ ಹಾಕುತ್ತೇವೆ ಎಂದು ಘೋಷಣೆ ಮಾಡಿದೆ. ವಿಷಯದ ಮೂಲ ಹಾಗೂ ವಿವರಗಳಿಗಾಗಿ ಕೆಳಗಡೆ ಓದಿ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ನೆನ್ನೆಯಷ್ಟೇ ಕಾಂಗ್ರೆಸ್ ಪಕ್ಷವು ಮುಂದಿನ ಲೋಖಾಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟಿಕೊಂಡು ತನ್ನ ಪ್ರಣಾಳಿಕೆಯನ್ನು ಘೋಷಣೆ ಮಾಡಿದೆ, ಇಡೀ ದೇಶದೆಲ್ಲೆಡೆ ವಿವಾದಕ್ಕೆ ಕಾರಣವಾಗಿರುವ ಈ ಪ್ರಣಾಳಿಕೆಯನ್ನು ಕಂಡ ಪ್ರತಿಯೊಬ್ಬ ದೇಶ ಭಕ್ತನು ಸಹ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹೌದು ಎಲ್ಲರ ಕೆಂಗಣ್ಣಿಗೆ ಗುರಿಯಾಗುವಂತೆ ಕಾಂಗ್ರೆಸ್ ಪಕ್ಷವು ಸೈನಿಕರಿಗೆ ನೀಡಿರುವ ಸ್ವಾತಂತ್ರವನ್ನು ಕಿತ್ತುಕೊಳ್ಳುತ್ತೇವೆ ಎಂದು ಘೋಷಣೆ ಮಾಡಿದೆ.

ದೇಶವನ್ನು ಸಂರಕ್ಷಿಸುವ ಸೇನೆಯನ್ನು ಕಟ್ಟಿಹಾಕುತ್ತೇವೆ ಎಂದು ಘೋಷಣೆ ಮಾಡಿರುವ ಕಾರಣ ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷದ ನಡೆಗೆ ಬಾರಿ ವಿರೋಧ ಕೇಳಿಬಂದಿದ್ದು, ಯಾವ ದೇಶದ್ರೋಹಿಗಳ ಮನವೊಲಿಸಲು ಈ ರೀತಿಯ ಯೋಜನೆಗಳನ್ನು ಮಾಡಿದ್ದೀರಾ ಎಂದು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ, ಅಷ್ಟೇ ಅಲ್ಲದೆ ಮೊದಲೇ ಘೋಷಿಸಿದಂತೆ ದೇಶ ದ್ರೋಹ ಎಂಬ ಕಾನೂನನ್ನು ತೆಗೆದು ಹಾಕಿ ದೇಶ ವಿರುದ್ಧ ನೀಡುವ ಹೇಳಿಕೆಗಳಿಗೆ ಹಾಗೂ ಕುತಂತ್ರಗಳಿಗೆ ಕಾನೂನು ಅಡ್ಡ ಬರುವುದಿಲ್ಲ ಎಂಬ ಅಂಶವನ್ನು ಸಹ ಸೇರಿಸಲಾಗಿದೆ .

Post Author: Ravi Yadav