ಸುಮಲತಾ ಅವರನ್ನು ಬೆಂಬಲಿಸಲು ಖುದ್ದು ಅಖಾಡಕ್ಕಿಳಿದ ಶ್ರೀರಾಮುಲು? ಮಾಡುತ್ತಿರುವುದಾದರೂ ಏನು ಗೊತ್ತಾ?

ಮಂಡ್ಯ ಜಿಲ್ಲೆಯಲ್ಲಿ ದಿನೇ ದಿನೇ ಸುಮಲತಾ ರವರಿಗೆ ಬೆಂಬಲ ಹೆಚ್ಚಾಗುತ್ತಿದೆ, ಮೈತ್ರಿ ಮಾಡಿಕೊಂಡಿದ್ದರೂ ಸಹ ಹಲವಾರು ಕಾಂಗ್ರೆಸ್ ಮುಖಂಡರು ಹಾಗೂ ಕುಟುಂಬ ರಾಜಕಾರಣದ ವಿರುದ್ಧ ತಿರುಗಿ ಬಿದ್ದಿರುವ ಜೆಡಿಎಸ್ ಮುಖಂಡರು ಸುಮಲತಾ ಅಂಬರೀಶ್ ಅವರ ಬೆಂಬಲಕ್ಕೆ ನಿಂತಿರುವ ಕಾರಣ ನಿಖಿಲ್ ಕುಮಾರಸ್ವಾಮಿ ರವರ ಕೆಲವು ಕಗ್ಗಂಟಾಗಿದೆ. ಈತನ್ಮಧ್ಯೆ ಬಿಜೆಪಿ ಪಕ್ಷವೂ ಸಹ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದೆ.ಇನ್ನು ಮೊದಲಿನಿಂದಲೂ ಎಸ್ ಎಂ ಕೃಷ್ಣ ರವರು ಸುಮಲತಾ ಅಂಬರೀಶ್ ರವರ ಪರ ಪ್ರಚಾರ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು ಇದಕ್ಕೆ ಪೂರಕ ಎಂಬಂತೆ ಬಿಜೆಪಿ ಪಕ್ಷದ ರಾಜ್ಯ ಅಧ್ಯಕ್ಷರಾಗಿರುವ ಯಡಿಯೂರಪ್ಪ ನವರು ಸಹ ಸುಮಲತಾ ಅಂಬರೀಶ್ ರವರ ಪರ ಪ್ರಚಾರ ಮಾಡುವುದಾಗಿ ಘೋಷಣೆ ಮಾಡಿಕೊಂಡಿದ್ದರು.

ಚಿತ್ರರಂಗದ, ರಾಜಕೀಯ ನಾಯಕರು ಸೇರಿದಂತೆ ಹಲವಾರು ರೈತರ ಸಂಘಗಳ ಬೆಂಬಲ ಪಡೆದು ಕೊಂಡಿರುವ ಸುಮಲತಾ ಅಂಬರೀಶ್ ರವರು ಸುಲಭವಾಗಿ ಗೆದ್ದು ಬೀಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈತನ್ಮಧ್ಯೆ ಬಿಜೆಪಿ ಪಕ್ಷದ ಶಾಸಕ ಶ್ರೀರಾಮುಲು ರವರು ಅಖಾಡಕ್ಕೆ ಇಳಿಯಲಿದ್ದಾರೆ ಎಂಬ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ. ಕರ್ನಾಟಕದಲ್ಲಿ ತಮ್ಮದೇ ಆದ ವರ್ಚಸ್ಸನ್ನು ಪಡೆದುಕೊಂಡಿರುವ ಶ್ರೀರಾಮುಲು ರವರು ನೇರವಾಗಿ ಅಖಾಡಕ್ಕೆ ಇಳಿದು ಸುಮಲತಾ ಅಂಬರೀಶ್ ರವರ ಪರ ಪ್ರಚಾರ ನಡೆಸಲಿದ್ದಾರೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ಪಕ್ಷದಿಂದ ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ , ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ಮಾಹಿತಿ ಹೊರಬೀಳುವ ಸಾಧ್ಯತೆ ಹೆಚ್ಚಾಗಿದ್ದು ಒಂದು ವೇಳೆ ಅದೇ ನಡೆದಲ್ಲಿ ಮುಖ್ಯಮಂತ್ರಿಗಳ ಮಗನ ಗೆಲುವು ಮತ್ತಷ್ಟು ಕಷ್ಟವಾಗಲಿದೆ ಎಂಬುದು ರಾಜಕೀಯ ಪಂಡಿತರ ವಾದವಾಗಿದೆ.

Post Author: Ravi Yadav