2+1=3 ಅವಿರೋಧವಾಗಿ ಮತ್ತೊಂದು ಕ್ಷೇತ್ರ ಗೆದ್ದು ಬೀಗಿದ ಬಿಜೆಪಿ- ನಮೋ ಅಲೆಗೆ ಕೊಚ್ಚಿಕೊಂಡು ಹೋಗುತ್ತಿವೆ ವಿಪಕ್ಷಗಳು

ನರೇಂದ್ರ ಮೋದಿ ರವರ ಅಲೆಗೆ ಎದುರೇ ಇಲ್ಲದಂತೆ ಆಗಿದೆ, ಬರೋಬ್ಬರಿ 20 ಕ್ಕೂ ಹೆಚ್ಚು ಪಕ್ಷಗಳು ಮೈತ್ರಿಯನ್ನು ಮಾಡಿಕೊಂಡು ನರೇಂದ್ರ ಮೋದಿ ಅವರನ್ನು ಎದುರಿಸಲು ಸಿದ್ಧವಾಗಿದ್ದಾರೆ, ಆದರೂ ಸಹ ಈ ಎಲ್ಲಾ ಪಕ್ಷಗಳು ನರೇಂದ್ರ ಮೋದಿಯವರ ಅಲೆಯನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂಬ ಮಾತು ಮೊದಲಿನಿಂದಲೂ ಕೇಳಿ ಬರುತ್ತಿದೆ. ಇದಕ್ಕೆ ಮತ್ತಷ್ಟು ಪೂರಕ ಎಂಬಂತೆ ಈಗಾಗಲೇ ಹಲವಾರು ಸಮೀಕ್ಷೆಗಳಲ್ಲಿ ನರೇಂದ್ರ ಮೋದಿರವರು ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ. ಈಗ ಅದೇ ಸಾಲಿಗೆ ಬಿಜೆಪಿ ಪಕ್ಷದ ಹಲವಾರು ನಾಯಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು ಭಾರತದಲ್ಲಿ ನರೇಂದ್ರ ಮೋದಿ ರವರ ಅಲೆ ಎಷ್ಟಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಕೆಲವೇ ಕೆಲವು ದಿನಗಳ ಹಿಂದಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎರಡು ಬಿಜೆಪಿ ಪಕ್ಷದ ಶಾಸಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಮೊದಲ ಹಂತದಲ್ಲಿ ನಡೆಯಬೇಕಿದ್ದ ಚುನಾವಣೆಯಲ್ಲಿ ಯಾವುದೇ ಪ್ರತಿಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸದ ಇದ್ದ ಕಾರಣ ಯಚುಲಿ ಹಾಗೂ ಅಲೋ ಕ್ಷೇತ್ರಗಳಿಂದ ಅಭ್ಯರ್ಥಿಗಳು ಗೆದ್ದು ಬೀಗಿದ್ದರು. ಇದರ ಸಾಲಿಗೆ ಮತ್ತೊಬ್ಬ ನಾಯಕ ಸೇರಿಕೊಂಡಿದ್ದು ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಪಕ್ಷದ ನಾಯಕ ದಿರಂಗ್ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಚುನಾವಣೆಗೂ ಮುನ್ನ ಬಿಜೆಪಿ ಪಕ್ಷವು ಮೂರು ಲೋಕಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಮತ್ತಷ್ಟು ಹುಮ್ಮಸ್ಸಿನಿಂದ ಮುನ್ನಡೆಯುತ್ತಿದೆ.

Post Author: Ravi Yadav