ಸುಮಲತಾ ರವರಿಗೆ ಒಂದೂವರೆ ಲಕ್ಷ ಮತಗಳು ಬೋನಸ್- ಠೇವಣಿ ಕಳೆದುಕೊಳ್ಳುತ್ತಾರಾ ನಿಖಿಲ್??

ಸುಮಲತಾ ರವರಿಗೆ ಒಂದೂವರೆ ಲಕ್ಷ ಮತಗಳು ಬೋನಸ್- ಠೇವಣಿ ಕಳೆದುಕೊಳ್ಳುತ್ತಾರಾ ನಿಖಿಲ್??

ಬರೋಬ್ಬರಿ ಏಳು ಶಾಸಕರನ್ನು ಹೊಂದಿರುವ ಮಂಡ್ಯ ಜಿಲ್ಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ರವರಿಗೆ ಸೋಲನ್ನು ಕಾಣಿಸಲು ಸುಮಲತಾ ರವರು ಸಿದ್ಧರಾಗುವಂತೆ ಕಾಣುತ್ತಿದೆ. ಸ್ವತಹ ಮುಖ್ಯಮಂತ್ರಿಗಳ ಮಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಸೋಲನ್ನು ಕಾಣಿಸಲು ಸುಮಲತಾ ರವರು ಪಣತೊಟ್ಟು ಅಖಾಡಕ್ಕೆ ಇಳಿದಿದ್ದಾರೆ. ಈಗಾಗಲೇ ಲಕ್ಷಾಂತರ ಜನರ ಬೆಂಬಲವನ್ನು ಪಡೆದಿರುವ ಸುಮಲತಾ ಅಂಬರೀಶ್ ರವರಿಗೆ ಈಗ ಮತ್ತೊಂದು ಬಲ ಸೇರ್ಪಡೆಯಾಗಿದ್ದು, ನಿಖಿಲ್ ರವರಿಗೆ ದೊಡ್ಡ ಶಾಕ್ ಎದುರಾಗಿದೆ. ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮಕ್ಕೆ ಸೇರಿದ್ದ ಜನರು ಹಣದ ಆಸೆಗೆ ಸೇರಿದ್ದಾರೆ ಎಂದು ಈಗಾಗಲೇ ಮಾಧ್ಯಮಗಳು ಖಚಿತಪಡಿಸಿವೆ ಇಂತಹ ಸಮಯದಲ್ಲಿ ಈ ವಿದ್ಯಮಾನದ ಕುತೂಹಲಕ್ಕೆ ಕಾರಣವಾಗಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಲು ಹಲವಾರು ಕಾಂಗ್ರೆಸ್ ನ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಸುಮಲತಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇಷ್ಟು ಸಾಲದು ಎಂಬಂತೆ ಲಕ್ಷಾಂತರ ಅಂಬರೀಶ್ ಅಣ್ಣನವರ ಅಭಿಮಾನಿಗಳು, ಕನ್ನಡ ಪರ ಸಂಘಟನೆಗಳು, ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತಿರುವ ಹಲವಾರು ಜೆಡಿಎಸ್ ಕಾರ್ಯಕರ್ತರು ಹಾಗೂ ನಾಯಕರು ಮತ್ತು ಬಿಜೆಪಿ ಬೆಂಬಲಿಗರು ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ಘೋಷಿಸಿದ್ದಾರೆ.

ಈಗ ಸುಮಲತಾ ಅಂಬರೀಶ್ ಅವರ ಬೆಂಬಲಕ್ಕೆ ಮತ್ತೊಂದು ದೊಡ್ಡ ಸಂಘಟನೆ ನಿಲ್ಲಲು ನಿರ್ಧರಿಸಿದ್ದು ನಿಖಿಲ್ ಕುಮಾರಸ್ವಾಮಿ ರವರಿಗೆ ಶಾಕ್ ಎದುರಾಗಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಜನರು ವ್ಯವಸಾಯವನ್ನು ನಂಬಿ ಬದುಕುತ್ತಾರೆ, ರೈತರೇ ಬೆನ್ನೆಲುಬಾಗಿರುವ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಮತ ಬ್ಯಾಂಕ್ ಹೊಂದಿರುವುದು ರೈತರ ಸಂಘ. ಇದೀಗ ಈ ರೈತರ ಸಂಘ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಲು ನಿರ್ಧಾರ ಮಾಡಿ ಘೋಷಣೆಯನ್ನು ಹೊರಡಿಸಿದೆ.

ರೈತರ ನಾಯಕ ಪುಟ್ಟಣ್ಣಯ್ಯ ಅವರ ಪತ್ನಿ ಸುನೀತಾ ರನ್ನು ಭೇಟಿ ಮಾಡಿದ ಸುಮಲತಾ ರವರು ಬೆಂಬಲ ನೀಡುವಂತೆ ಕೇಳಿದರು, ಇದಕ್ಕೆ ಎಲ್ಲಾ ರೈತ ಸಂಘದ ಕಾರ್ಯಕರ್ತರು ಒಪ್ಪಿಗೆ ನೀಡಿದ್ದು ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ಅಧಿಕೃತ ಘೋಷಣೆ ಹೊರಬೀಳಲಿದೆ. ಜಿಲ್ಲೆಯಲ್ಲಿ ಒಂದುವರೆ ಲಕ್ಷಕ್ಕೂ ಹೆಚ್ಚು ಮತ ಬ್ಯಾಂಕ್ ಹೊಂದಿರುವ ರೈತ ಸಂಘವು ಸುಮಲತಾ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ನಿಖಿಲ್ ರವರು ಠೇವಣಿ ಗಳಿಸುವುದು ಸಹ ಅನುಮಾನವಾಗಿದೆ.  ಕುಮಾರಸ್ವಾಮಿ ರವರ ಎಲ್ಲ ತಂತ್ರಗಳು ವಿಫಲವಾಗುತ್ತಿದ್ದು, ಮುಂದೆ ಯಾವ್ ಹೆಜ್ಜೆ ಇಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ