ರಾಗ ಗೆ ಕೈ ಕೊಟ್ಟು ಬಿ ಎಸ್ ವೈ ಕೈ ಹಿಡಿಯಲು ಸಿದ್ದವಾದ ಹಿರಿಯ ಕಾಂಗ್ರೆಸ್ ಮಾಜಿ ಸಚಿವ

ರಾಗ ಗೆ ಕೈ ಕೊಟ್ಟು ಬಿ ಎಸ್ ವೈ ಕೈ ಹಿಡಿಯಲು ಸಿದ್ದವಾದ ಹಿರಿಯ ಕಾಂಗ್ರೆಸ್ ಮಾಜಿ ಸಚಿವ

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷಾಂತರಗಳು ಹೆಚ್ಚಾಗಿವೆ ಅದರಲ್ಲಿಯೂ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಕಾಂಗ್ರೆಸ್ ಪಕ್ಷವು ಹಲವಾರು ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿಯನ್ನು ಮಾಡಿಕೊಂಡಿರುವ ಕಾರಣ ಸೀಟು ಹಂಚಿಕೆಯ ವಿಷಯದಲ್ಲಿ ಹಲವಾರು ನಾಯಕರನ್ನು ಎದುರು ಹಾಕಿಕೊಂಡಿದೆ. ಇದರಿಂದ ಮುನಿಸಿಕೊಂಡಿರುವ ಅದೆಷ್ಟೋ ನಾಯಕರು ದೇಶದಲ್ಲೆಡೆ ಬಿಜೆಪಿ ಪಕ್ಷಕ್ಕೆ ಸೇರುತ್ತಿದ್ದಾರೆ. ಇನ್ನು ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ರವರ ವಿರುದ್ಧ ಹಲವಾರು ಟೀಕೆಗಳು ಕೇಳಿಬಂದಿವೆ. ಇನ್ನು ಈ ಟೀಕೆಗಳು ಮತ್ತಷ್ಟು ಮುಂದುವರೆದಿದ್ದು ಹಲವಾರು ನಾಯಕರು ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಪ್ರಶ್ನಿಸುತ್ತಿದ್ದಾರೆ.

ರಾಹುಲ್ ಗಾಂಧಿ ಅವರುಗ ಪ್ರಧಾನಿ ಸ್ಥಾನಕ್ಕೆ ಸೂಕ್ತವಲ್ಲ ಎಂದು ಹಲೋ ಹಿರಿಯ ಕಾಂಗ್ರೆಸ್ ನಾಯಕರು ಈಗಾಗಲೇ ಧ್ವನಿ ಎತ್ತಿದ್ದಾರೆ.ಆದರೂ ಸಹ ಕಾಂಗ್ರೆಸ್ ಪಕ್ಷದ ಉಳಿದ ನಾಯಕರ ಬೆಂಬಲವನ್ನು ಗಿಟ್ಟಿಸಿಕೊಂಡಿರುವ ರಾಹುಲ್ ಗಾಂಧಿ ಅವರು ತಾನೇ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇದರಿಂದ ಅದೆಷ್ಟೋ ಹಿರಿಯ ನಾಯಕರು ನೇರವಾಗಿ ರಾಹುಲ್ ರವರ ವಿರುದ್ಧ ವಾಗ್ದಾಳಿ ನಡೆಸಿ ಪಕ್ಷವನ್ನು ತೊರೆದಿದ್ದಾರೆ. ಈಗ ಅದೇ ಸಾಲಿಗೆ ಮತ್ತೊಬ್ಬರು ಕರ್ನಾಟಕದ ಕಾಂಗ್ರೆಸ್ ನ ಮಾಜಿ ಸಚಿವ ಈ ಸಾಲಿಗೆ ಸೇರಲಿದ್ದಾರೆ ಹಾಗೂ ಬಿಜೆಪಿ ಪಕ್ಷ ಸೇರುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಪಕ್ಷಕ್ಕೆ ಮತ್ತಷ್ಟು ಬಲ ತುಂಬಲಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವರಾದ ಡಾಕ್ಟರ್ ಎ ಬಿ ಮಾಲಕರೆಡ್ಡಿ ರವರು ನೇರವಾಗಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ರವರ ವಿರುದ್ಧ ಸಿಡಿದೆದ್ದಿದ್ದಾರೆ.ರಾಹುಲ್ ಗಾಂಧಿ ರವರ ನಾಯಕತ್ವವನ್ನು ಯಾರು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಅವರಿಗಿನ್ನೂ ಪ್ರಧಾನಿಯಾಗುವ ಪ್ರಬುದ್ಧತೆ ಇಲ್ಲ ಇನ್ನು ಖರ್ಗೆಯ ವಿಚಾರ ತೆಗೆದುಕೊಂಡರೆ ಅವರ ನಾಯಕತ್ವದಲ್ಲಿ ಕೆಲಸ ಮಾಡಲು ಯಾವ ನಾಯಕನು ಒಪ್ಪುವುದಿಲ್ಲ ಆದ್ದರಿಂದ ನಾನು ಪಕ್ಷ ತೊರೆಯುತ್ತಿದ್ದೇನೆ ಎಂದು ಘೋಷಿಸಿದ್ದಾರೆ.

ಇನ್ನು ಈ ಘೋಷಣೆ ಮಾಡಿದ ಬಳಿಕ ಕರ್ನಾಟಕ ರಾಜ್ಯದ ಬಿಜೆಪಿ ಅಧ್ಯಕ್ಷರಾಗಿರುವ ಬಿ ಎಸ್ ಯಡಿಯೂರಪ್ಪ ನವರನ್ನು ಭೇಟಿ ಮಾಡಿ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದ್ದಾರೆ ಹಾಗೂ ಈ ಮೂಲಕ ತಾನು ಬಿಜೆಪಿ ಪಕ್ಷಕ್ಕೆ ಸೇರುವ ಮಹದಾಸೆಯನ್ನು ಹೊಂದಿದ್ದೇನೆ ಎಂಬ ಸ್ಪಷ್ಟ ಸಂದೇಶವನ್ನು ಸಾರಿದ್ದಾರೆ. ಬಹುಶಹ ಇನ್ನು ಕೇವಲ ಕೆಲವೇ ಕೆಲವು ಗಂಟೆಗಳಲ್ಲಿ ಮಾಲಕರೆಡ್ಡಿ ರವರು ಬಿಜೆಪಿ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ್ತಷ್ಟು ಬಲ ತುಂಬಲಿದ್ದಾರೆ.