ಬಿಜೆಪಿ ಪಟ್ಟಿ ಬಿಡುಗಡೆ: ಹೀಗಿದ್ದಾರೆ ನೋಡಿ ನಿಮ್ಮ ಕ್ಷೇತ್ರದ ಸ್ಪರ್ಧಿಗಳು

ಭಾರೀ ಕುತೂಹಲ ಕೆರಳಿಸಿದ್ದ ಮುಂದಿನ ಲೋಕಸಭಾ ಚುನಾವಣೆಯ ಕರ್ನಾಟಕದ ಸ್ಪರ್ಧಿಗಳ ಪಟ್ಟಿಯನ್ನು ಇಂದು ಬಿಜೆಪಿ ಪಕ್ಷದ ಹೈಕಮಾಂಡ್ ಬಿಡುಗಡೆ ಮಾಡಿದೆ. ಕರ್ನಾಟಕದ 28 ಕ್ಷೇತ್ರಗಳಲ್ಲಿ ಮೊದಲ ಪಟ್ಟಿಯಲ್ಲಿ 21 ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಬಿಜೆಪಿ ಪಕ್ಷ ಅಂದುಕೊಂಡಂತೆ ಹಾಲಿ ಸಂಸದರಿಗೆ ಟಿಕೆಟ್ ನೀಡಿದೆ. ಇನ್ನು ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಮಾಡಿಲ್ಲ ಇನ್ನು ಕೆಲವೇ ಕೆಲವು ದಿನಗಳಲ್ಲಿ ಉಳಿದ ಸ್ಥಾನಗಳು ಅಭ್ಯರ್ಥಿಗಳನ್ನು ಘೋಷಿಸಲಿದ್ದಾರೆ. ನಿಮ್ಮ ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ತಿಳಿಯಲು ಕೆಳಗಡೆ ಓದಿ.

ಚಾಮರಾಜನಗರ – ವಿ.ಶ್ರೀನಿವಾಸ ಪ್ರಸಾದ್,ಚಿಕ್ಕಬಳ್ಳಾಪುರ – ಬಿ.ಎನ್.ಬಚ್ಚೇಗೌಡ, ಮೈಸೂರು-ಕೊಡಗು : ಪ್ರತಾಪ್ ಸಿಂಹ,ಬೆಂಗಳೂರು ಉತ್ತರ : ಡಿ.ವಿ.ಸದಾನಂದ ಗೌಡ, ಬೆಂಗಳೂರು ಕೇಂದ್ರ : ಪಿ.ಸಿ.ಮೋಹನ್, ಹಾಸನ – ಎಂ.ಮಂಜು,ದಕ್ಷಿಣ ಕನ್ನಡ – ನಳೀನ್ ಕುಮಾರ್ ಕಟೀಲ್,  ಚಿತ್ರದುರ್ಗ – ಎ.ನಾರಾಯಣಸ್ವಾಮಿ,ತುಮಕೂರು – ಜಿ.ಎಸ್.ಬಸವರಾಜ್, ಉತ್ತರ ಕನ್ನಡ – ಅನಂತ್ ಕುಮಾರ್ ಹೆಗಡೆ, ದಾವಣಗೆರೆ – ಜಿ.ಎಂ.ಸಿದ್ದೇಶ್ವರ್, ಶಿವಮೊಗ್ಗ – ಬಿ.ವೈ.ರಾಘವೇಂದ್ರ, ಉಡುಪಿ-ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ, ಬಳ್ಳಾರಿ – ದೇವೇಂದ್ರಪ್ಪ, ಹಾವೇರಿ – ಶಿವಕುಮಾರ್ ಉದಾಸಿ, ಧಾರವಾಡ – ಪ್ರಹ್ಲಾದ್ ಜೋಶಿ,  ಬೀದರ್ – ಭಗವಂತ ಖೂಬಾ,ಬೆಳಗಾವಿ – ಸುರೇಶ್ ಅಂಗಡಿ, ಬಾಗಲಕೋಟೆ – ಪಿ.ಸಿ.ಗದ್ದಿಗೌಡರ್,ವಿಜಯಪುರ – ರಮೇಶ್ ಜಿಗಜಿಣಗಿ ,ಕಲಬುರಗಿ – ಡಾ.ಉಮೇಶ್ ಜಾಧವ್.

ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಚಿಕ್ಕೋಡಿ, ಕೋಲಾರ, ರಾಯಚೂರು, ಕೊಪ್ಪಳ, ಮಂಡ್ಯ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.

Post Author: Ravi Yadav