ಬಿಗ್ ನ್ಯೂಸ್- ಸಿದ್ದುವಿನ ಹಗರಣಗಳನ್ನು ಹೊರಹಾಕಿದ ಕಾಂಗ್ರೆಸ್ ನಾಯಕ. ಒಮ್ಮೆ ಓದಿ

ಮಾಜಿ ಮುಖ್ಯ ಮಂತ್ರಿಗಳಾಗಿದ್ದ ಸಿದ್ದರಾಮಯ್ಯರವರಿಗೆ ಒಂದಲ್ಲ ಒಂದು ವಿವಾದಗಳು ಎದುರಾಗುತ್ತಲೇ ಇರುತ್ತವೆ. ತಾವು ಕೈಗೆ ಕಟ್ಟುವ ವಾಚಿ ನಿಂದ ಹಿಡಿದು ಓಡಾಡುವ ಕಾರಿನ ವರೆಗೂ ಎಲ್ಲಾ ರೀತಿಯಲ್ಲೂ ಸಹ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾ ತಮ್ಮ ಅಧಿಕಾರದ ಅವಧಿಯನ್ನು ಮುಗಿಸಿದರು. ಅಧಿಕಾರದ ನಂತರವೂ ಸಹ ಇವರನ್ನು ವಿವಾದಗಳು ಕೈ ಬಿಡುತ್ತಿಲ್ಲ ಒಂದಲ್ಲ ಒಂದು ವಿಷಯಗಳಿಗೆ ಸುಖಾಸುಮ್ಮನೆ ವಿವಾದ ಮಾಡಿಕೊಳ್ಳುತ್ತಾರೆ.

ಈಗ ಅದೇ ಹಾದಿಯಲ್ಲಿ ಮತ್ತೊಂದು ವಿವಾದ ಇಡೀ ರಾಜ್ಯ ರಾಜಕಾರಣವನ್ನು ತಲ್ಲಣಗೊಳಿಸಿದೆ. ಆದರೆ ಈ ಬಾರಿ ಯಾವುದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ರವರ ಮೇಲೆ ಹಗರಣಗಳ ಸರಮಾಲೆಯನ್ನು ಹಾಕುತ್ತಿಲ್ಲ ಬದಲಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡ ಶಂಕರ್ ರವರು ಸಿದ್ದರಾಮಯ್ಯರವರ ಕರಾಳ ಮುಖವನ್ನು ತೆಗೆದ್ ಇಟ್ಟಿದ್ದಾರೆ. ಅಷ್ಟಕ್ಕೂ ವಿಷಯದ ಮೂಲವೇನು ಹಾಗೂ ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

ಸಿದ್ದರಾಮಯ್ಯರವರಿಗೆ ಮೊದಲಿನಿಂದಲೂ ಡಿನೋಟಿಫಿಕೇಶನ್ ಭೂತ ಕಾಡುತ್ತಿದೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಮಾತನಾಡಿದ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಮುಖಂಡ ಶಂಕರ್ ಮನವಳ್ಳಿ ರವರು, ಸಿದ್ದರಾಮಯ್ಯರವರು ಅಧಿಕಾರದಲ್ಲಿ ಇರುವ ವೇಳೆ ಅನೇಕ ಡಿನೋಟಿಫಿಕೇಶನ್ ಗಳು ನಡೆದಿವೆ. ಇದಕ್ಕೆಲ್ಲ ಕಾರಣ ಸಿದ್ದರಾಮಯ್ಯ ಅವರು ಇಂದಿಗೂ ಸಹ ಅವರು ಅಪರಾಧಿ ಸ್ಥಾನದಲ್ಲಿ ಇದ್ದಾರೆ ಆದಷ್ಟು ಬೇಗ ಸಿದ್ದರಾಮಯ್ಯನವರನ್ನು ಜೈಲಿಗೆ ಹಾಕಬೇಕು ಎಂದು ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ನಿಷ್ಠಾವಂತ ಕಾರ್ಯಕರ್ತರಿಗೆ ಈಗ ಬೆಲೆ ಇಲ್ಲ , ಸಂಪೂರ್ಣ ಸರ್ವಾಧಿಕಾರಿ ವ್ಯವಸ್ಥೆ ನಡೆಯುತ್ತಿದೆ. ಇನ್ನು ಸಿದ್ದರಾಮಯ್ಯರವರು ಡಿನೋಟಿಫಿಕೇಶನ್ ಪ್ರಕರಣ ಗಳಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಆದಷ್ಟು ಬೇಗ ಜೈಲಿಗೆ ಹೋಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಅಂದಹಾಗೆ ಇದು ಬಾಯಿ ತಪ್ಪಿ ಹೇಳಿರುವ ಮಾತಲ್ಲ ಬದಲಾಗಿ ನೇರವಾಗಿ ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದ್ದಾರೆ.

Post Author: Ravi Yadav