ಟೆಕ್ಕಿಗಳ ಮಾತಿನ ಏಟು, ಮೋದಿ ಅಲೆ ಕಂಡು ಸುಸ್ತಾದ ರಾಹುಲ್. ಎಲ್ಲೆಲ್ಲೂ ಮೋದಿ ..

ರಾಹುಲ್ ಗಾಂಧಿ ಅವರಿಗೆ ಮೊದಲಿನಿಂದಲೂ ನರೇಂದ್ರ ಮೋದಿರವರು ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ ಎಂಬುದು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಇಡೀ ದೇಶದಲ್ಲಿ ನರೇಂದ್ರ ಮೋದಿ ಅವರ ಅಲೆ ಇಂದು ಅಲೆಯಾಗಿ ಉಳಿದುಕೊಂಡಿಲ್ಲ ಬದಲಾಗಿ ಸುನಾಮಿಯಾಗಿದೆ. ಇದಕ್ಕೆ ನಿಮಗೆ ಸಾಕಷ್ಟು ನಿದರ್ಶನಗಳು ಸಿಕ್ಕಿದೆ. ಇದೀಗ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿರುವ ರಾಹುಲ್ ಗಾಂಧಿ ರವರು ಬೆಂಗಳೂರಿನ ಟೆಕ್ಕಿಗಳ ಜೊತೆ ಸಂವಾದ ನಕ್ಕೆ ಆಗಮಿಸಿದಾಗ ಭಾರಿ ಮುಜುಗರ ವಾದ ಘಟನೆ ನಡೆದಿದೆ.ಘಟನೆಯನ್ನು ನೋಡಲಾರದೆ ಪೊಲೀಸರು ಸ್ವತಃ ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ರಾಹುಲ್ ಗಾಂಧಿ ರವರು ಭಾರತದಿಂದ ದುಬಾಯಿ ವರೆಗೂ ಹೋದರೂ ಸಹ ಮೋದಿ ರವರ ಕಾಟ ತಪ್ಪಿರಲಿಲ್ಲ ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಮಾನ್ಯತಾ ಟೆಕ್ ಪಾರ್ಕ್ ನನ್ನ ಜೊತೆ ಸಂವಾದ ನಡೆಸಲು ರಾಹುಲ್ ಗಾಂಧಿ ರವರು ಇಂದು ಸಂಜೆ ಆಗಮಿಸಿದ್ದರು. ಇದೇ ವೇಳೆಯಲ್ಲಿ ಬಾರಿ ಸಂಖ್ಯೆಯಲ್ಲಿ ಸೇರಿದ್ದ ಟೆಕ್ಕಿ ಗಳಲ್ಲಿ ಎಲ್ಲರೂ ನರೇಂದ್ರ ಮೋದಿ ರವರ ಭಕ್ತರಾಗಿದ್ದರು. ರಾಹುಲ್ ಗಾಂಧಿ ರವರು ಆಗಮಿಸುತ್ತಿದ್ದಂತೆ ಮೋದಿ ಮೋದಿ ಎಂಬ ಘೋಷಣೆಗಳು ಕೇಳ ತೊಡಗಿದವು. ಇದರಿಂದ ರಾಹುಲ್ ಗಾಂಧಿ ಮುಜುಗರ ಉಂಟಾಗಿತ್ತು. ಇದೆ ವೇಳೆ ಸ್ಥಳದಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮಾನ್ಯತಾ ಟೆಕ್ ಪಾರ್ಕ್ ನ ಟೆಕ್ಕಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಟೆಕ್ಕಿಗಳನ್ನು ಚದುರಿಸಿದ್ದಾರೆ.

Post Author: Ravi Yadav