ಮಹತ್ವದ ಬೆಳವಣಿಗೆ: ಯಡಿಯೂರಪ್ಪ ಭೇಟಿಗೆ ನಿರ್ಧರಿಸಿದ ಸುಮಲತಾ ಕಾರಣವೇನು ಗೊತ್ತಾ?

ಮಂಡ್ಯ ಲೋಖಾಸಭಾ ಕ್ಷೇತ್ರವು ಈ ಹಿಂದೆ ಎಂದು ಮೂಡಿಸದ ಕುತೂಹಲವನ್ನು ಈ ಬಾರಿ ಮೂಡಿಸಿದೆ. ಇಷ್ಟು ದಿವಸ ಕೇವಲ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವಿನ ಕಾಳಗ ನಡೆಯುತ್ತಿದ್ದ ಜಾಗದಲ್ಲಿ ಈ ಬಾರಿ ಬಿಜೆಪಿ ಪಕ್ಷವು ಸಹ ಕಣದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ ಇದಕೆಲ್ಲ ಕಾರಣ ಸುಮಲತಾ ಅಂಬರೀಶ ರವರ ಸ್ಪರ್ಧೆ ಎಂದರೆ ತಪ್ಪಗಾಲಾರದು. ಪಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ದಿಸುತ್ತೇನೆ ಎಂದು ನಿರ್ಧಾರ ಮಾಡಿದ ಕ್ಷಣದಿಂದ ಬಿಜೆಪಿ ಪಕ್ಷಕ್ಕೆ ಗೆಲ್ಲುವ ಆಸೆ ಹೆಚ್ಚಾಗಿತ್ತು, ಇನ್ನು ಸುಮಲತಾ ರವರು ಬಿಜೆಪಿ ಪಕ್ಷಕ್ಕೆ ಸೇರಲು ಎಸ್ ಎಂ ಕೃಷ್ಣ ರವರ ಭೇಟಿಗೆ ನಿರ್ಧಸಿದ್ದಾರೆ ಎಂದ ತಕ್ಷಣ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದರೆ ಗೆಲುವು ಫಿಕ್ಸ್ ಎಂದೇ ಹೇಳಲಾಗುತ್ತಿತ್ತು. ಇದರಿಂದ ದೋಸ್ತಿ ಪಾಳಯದಲ್ಲಿ ಆತಂಕ ಹೆಚ್ಚಿಗಿದೆ, ಇದರ ಬೆನ್ನಲ್ಲೇ ಮಹತ್ವದ ಘಟನೆಗೆ ರಾಜ್ಯ ರಾಜಕಾರದ ಇಂದು ಸಾಕ್ಷಿಯಾಗಿದೆ.

ದೋಸ್ತಿಗಳು ಎಸ್ ಎಂ ಕೃಷ್ಣರವರನ್ನು ಸುಮಲತಾ ಭೇಟಿ ಮಾಡುತ್ತಿದ್ದಾರೆ ಎಂದ ತಕ್ಷಣ ಮೊದಲಿಂದಲೂ ಎರಡು ಕುಟುಂಬದವರು ಆಪ್ತರು ಆದ ಕಾರಣದಿಂದ ಪಕ್ಷೇತ್ತರ ಅಭ್ಯರ್ಥಿಯಾಗಿ ಸ್ಪರ್ದಿಸುವ ಚಿಂತನೆ ಹಾಗೂ ಬೆಂಬಲಕ್ಕೆ ಭೇಟಿ ಇರಬಹುದು ಎಂದು ಆಲೋಚನೆ ಮಾಡಿದ್ದರು. . ಆದರೆ ಮಹತ್ವದ ಬೆಳವಣಿಗೆಯಲ್ಲಿ ಎಸ್ ಎಂ ಕೃಷ್ಣ ರವರ ಭೇಟಿ ನಂತರ ನೇರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯೆಡಿಯೂರಪ್ಪ ರವರನ್ನು ಭೇಟಿಮಾಡಲು ಸುಮಲತಾ ರವರು ಕೋರಿದ್ದಾರೆ. ಈ ಮೂಲಕ ಬಿಜೆಪಿ ಸೇರ್ಪಡೆ ಬಗ್ಗೆ ಸಂಪೂರ್ಣ ಮಾತುಕತೆ ನಡೆಸಿ ಮುಹೂರ್ತ ಫಿಕ್ಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.ಇಂದು ೧೨ ಗಂಟೆಗೆ ರಾಜ್ಯಾಧ್ಯಕ್ಷ ಹಾಗೂ ಸುಮಲತಾ ರವರು ಭೇಟಿ ಮಾಡಲು ನಿರ್ಧರಿಸಿದ್ದಾರೆ

Post Author: Ravi Yadav