ದೇಶದ್ರೋಹಿಗಳಿಗೆ ಭರ್ಜರಿ ಗುಡ್ ನ್ಯೂಸ್: ಈ ಪಾರ್ಟಿ ಅಧಿಕಾರಕ್ಕೆ ಬಂದರೆ ಏನು ಮಾಡುತ್ತಂತೆ ಗೊತ್ತಾ??

ಎಚ್ಚರ ಬಂಧುಗಳೇ ದೇಶ ಅಪಾಯದಲ್ಲಿದೆ ದಯವಿಟ್ಟು ಎರಡು ನಿಮಿಷ ಸಂಪೂರ್ಣ ಓದಿ. ದೇಶವನ್ನು ರಕ್ಷಿಸುವ ಬದಲು ದೇಶದ್ರೋಹಿಗಳ ಪರವಾಗಿ ನಿಂತು ಕೊಂಡು ಅವರಿಗೆ ತೊಡಕಾಗಿರುವ ಕಾನೂನನ್ನು ತೆಗೆದು ಹಾಕುತ್ತೇವೆ ಎಂದು ರಾಷ್ಟ್ರೀಯ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ದಯವಿಟ್ಟು ಒಮ್ಮೆ ಓದಿ ಎಲ್ಲರಿಗೂ ಸತ್ಯದ ಅರಿವು ಮೂಡಿಸಿ (ದಾಖಲೆ ಸಮೇತ)

ಎಲ್ಲ ದೇಶಗಳಲ್ಲಿಯೂ ಸಹ ದೇಶ ದ್ರೋಹ ಅಪರಾಧ ಕಾನೂನು ಇರುತ್ತದೆ, ಅದರಂತೆಯೇ ಭಾರತದಲ್ಲಿಯೂ ಸಹ ದೇಶ ವಿರೋಧಿ ಕೂಗು ಕೂಗಿದರೆ ಅಥವಾ ದೇಶದ ವಿರುದ್ಧ ಮಾತನಾಡಿದರೆ ರಾಜದ್ರೋಹ ಎಂಬ ಕಾನೂನಿನ ಅಡಿಯಲ್ಲಿ ಅಂತವರನ್ನು ಶಿಕ್ಷೆಗೆ ಒಳಪಡಿಸಲಾಗುತ್ತದೆ. ಒಂದು ವೇಳೆ ಈ ರಾಜದ್ರೋಹ ಕಾನೂನು ಇಲ್ಲವಾದಲ್ಲಿ ಹಲವಾರು ದೇಶ ವಿರೋಧಿಗಳು ದೇಶದ ಭದ್ರತೆಯ ಜೊತೆ ಆಟವಾಡುತ್ತಾರೆ. ಯಾವುದೇ ದೇಶ ವಿರೋಧಿ ಹೇಳಿಕೆ ನೀಡಿದ್ದಲ್ಲಿ ಅಥವಾ ಅಧಿಕಾರದಲ್ಲಿ ಇರುವ ಸಂಸ್ಥೆಗಳ ಮೇಲೆ ಸವಾರಿ ಮಾಡಿದ್ದಲ್ಲಿ‌, ಕಾನೂನನ್ನು ದುರ್ಬಳಕೆ ಮಾಡಿಕೊಂಡಲ್ಲಿ ಇನ್ನೂ ಹತ್ತು ಹಲವಾರು ಸಂದರ್ಭಗಳಲ್ಲಿ ರಾಜದ್ರೋಹ ಎಂಬ ಕಾನೂನಿನ ಅಡಿಯಲ್ಲಿ ತಪ್ಪು ಮಾಡಿದವರನ್ನು ಶಿಕ್ಷೆಗೆ ಒಳಪಡಿಸಲಾಗುತ್ತದೆ.

ಕಳೆದ ಹಲವಾರು ವರ್ಷಗಳಿಂದ ಭಾರತದಲ್ಲಿ ಈ ಕಾನೂನು ಇದ್ದರೂ ಸಹ ಕೆಲವು ಅವಿವೇಕಿಗಳು ದೇಶ ವಿರೋಧಿ ಹೇಳಿಕೆಗಳನ್ನು ನೀಡಿದರು. ಅದರಲ್ಲಿ ಪ್ರಮುಖವಾಗಿ ತಾನೊಬ್ಬ ಬಹಳ ಬುದ್ಧಿವಂತ ವಿದ್ಯಾರ್ಥಿ ಎಂದು ಬಡಾಯಿ ಕೊಚ್ಚಿಕೊಳ್ಳುವ ತುಕಡೆ ಗ್ಯಾಂಗಿನ ಪ್ರಮುಖ ದೇಶದ್ರೋಹಿ ಕನ್ನಯ್ಯ ಈಗಾಗಲೇ ದೇಶ ವಿರೋಧಿ ಹೇಳಿಕೆ ನೀಡಿದ ನಂತರ ಜಾಮೀನಿನ ಮೇಲೆ ಹೊರಬಂದು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದಾರೆ. ಆದರೆ ಈತನಿಗೆ ತಾನು ದೇಶ ವಿರೋಧಿ ಹೇಳಿಕೆ ನೀಡಿದ್ದೇನೆ ಎಂಬುದು ಅರಿವಿದ್ದರೂ ಸಹ ಆತ ಅದರಲ್ಲಿ ತಪ್ಪಿಲ್ಲ ಎಂದು ಹಲವಾರು ಬಾರಿ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾನೆ.

ಇಷ್ಟೆಲ್ಲಾ ಕಾನೂನು ಇದ್ದರೂ ಸಹ ಇಷ್ಟು ದೈರ್ಯವಾಗಿ ಒಂದು ದೇಶದ ಒಳಗೆ ಬದುಕಿ ಅದೇ ದೇಶದ ವಿರುದ್ಧ ಮಾತನಾಡುವ ಧೈರ್ಯ ಈತನಿಗೆ ರಾಜಕಾರಣಿಗಳು ತುಂಬಿದ್ದಾರೆ ಎಂದರೆ ನೀವು ನಂಬಲೇಬೇಕು. ಅದೇ ಒಂದು ವೇಳೆ ಈ ಕಾನೂನು ಜಾರಿಯಲ್ಲಿ ಇಲ್ಲದಿದ್ದರೆ ಏನಾಗುತ್ತದೆ ಎಂಬುದು ನಿಮ್ಮ ಊಹೆಗೆ ಬಿಡುತ್ತಿದ್ದೇವೆ. ಎಲ್ಲಾ ಪಕ್ಷಗಳು ದೇಶವನ್ನು ಬಹಳ ಭದ್ರತೆಯಿಂದ ಕಾಪಾಡುತ್ತೇವೆ ಎಂದು ತಮ್ಮ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿದನ್ನು ನೋಡಿದ್ದೇವೆ ಆದರೆ ಇಲ್ಲೊಂದು ಪಕ್ಷ ತಾನು ಅಧಿಕಾರಕ್ಕೆ ಬಂದರೆ ರಾಜದ್ರೋಹ ಕಾನೂನನ್ನು ಹೈ ಬಿಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ.

ಹೌದು ಈ ಹಿಂದೆಯೂ ಸಹ ಹಲವಾರು ಬಾರಿ ಕನ್ನಯ್ಯ ರವರ ಬೆಂಬಲಕ್ಕೆ ನಿಂತಿದ್ದ ಕಾಂಗ್ರೆಸ್ ಪಕ್ಷವು ತಾನು ಒಂದು ವೇಳೆ ಅಧಿಕಾರಕ್ಕೆ ಬಂದರೆ ದೇಶದ್ರೋಹದ ಕೂಗು ಹಾಕುವವರಿಗೆ ಕಂಟಕವಾಗಿರುವ ರಾಜದ್ರೋಹ ಅಪರಾಧ ಕಾನೂನನ್ನು ಹರಿದು ಕಸದ ಬುಟ್ಟಿಗೆ ಹಾಕಲಾಗುತ್ತದೆ ಎಂದು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಅಧಿಕೃತವಾಗಿ ಹೇಳಿಕೆ ಇನ್ನೂ ಹೊರಬಿದ್ದಿಲ್ಲ ಇನ್ನು ಕೆಲವೇ ಕೆಲವು ದಿನಗಳಲ್ಲಿ ಇದು ಸಹ ಹೊರಬೀಳಲಿದೆ ಇಂದು ದೇಶದ ಪ್ರತಿಷ್ಠಿತ ಸಂಸ್ಥೆಯಾಗಿರುವ ಒನ್ ಇಂಡಿಯಾ ಪ್ರಕಟಿಸಿದೆ. ದೇಶದ್ರೋಹಿಗಳ ಓಲೈಕೆಗೆ ಕಾಂಗ್ರೆಸ್ ಪಕ್ಷವು ಮುಂದಾಗಿರುವುದು ಭಾರೀ ಸಂಚಲನವನ್ನು ಸೃಷ್ಟಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಪಕ್ಷವು ರಾಜದ್ರೋಹ ಕಾನೂನನ್ನು ತೆಗೆದು ಹಾಕಲು ಚಿಂತನೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ದೇಶದ ಭದ್ರತೆಯ ಜೊತೆ ಚೆಲ್ಲಾಟವಾಡುತ್ತಿದೆ, ಭಾರತವನ್ನು ವಿಭಜಿಸುತ್ತೇವೆ ಎಂದು ಹೇಳಿಕೆ ನೀಡಿದ್ದ ಅವಿವೇಕಿಗಳಿಗೆ ನೇರ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದೆ.

Post Author: Ravi Yadav