ಭಾರತ-ಪಾಕ್ ಕಾಳಗದಲ್ಲಿ ಇಸ್ರೇಲ್ ದೇಶವನ್ನು ಎಳೆದು ತಂದ ಪಾಕ್, ಪಾಕಿಸ್ತಾನದ ಅಂತ್ಯ ಸನಿಹ??

ಪಾಕಿಸ್ತಾನ ದೇಶವು ತನ್ನ ಕೈಯಲ್ಲಿ ಭಾರತ ದೇಶವನ್ನು ಎದುರಿಸಲು ಸಾಧ್ಯವಿಲ್ಲ ಎಂಬುದನ್ನು ತಿಳಿದಿದ್ದರೂ ಸಹ ಸುಖಾಸುಮ್ಮನೆ ಭಾರತದ ಜೊತೆ ಕಾಲ್ಕೆರೆದು ಜಗಳಕ್ಕೆ ಬರುತ್ತದೆ. ಇದೀಗ ಭಾರತೀಯ ಸೇನೆಯ ಬೆಂಬಲಕ್ಕೆ ನಿಂತಿರುವ ಭಾರತದ ಮಿತ್ರ ರಾಷ್ಟ್ರ ಇಸ್ರೇಲ್ ದೇಶವನ್ನು ಕೆಣಕಲು ಪಾಕಿಸ್ತಾನವು ಸಿದ್ಧವಾಗಿ ನಿಂತಿದೆ. ಅಭಿ ನಂದನ್ ಅವರನ್ನು ಬಂಧಿಸುವ ಮುನ್ನ ಇಬ್ಬರು ಭಾರತೀಯ ಪೈಲೆಟ್ ಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ವಿಶ್ವದ ಮುಂದೆ ಸುಳ್ಳು ಹೇಳಿ ತದನಂತರ ಒಬ್ಬ ಪೈಲೆಟ್ ಎಂದು ಸತ್ಯ ಒಪ್ಪಿಕೊಂಡಿದ್ದ ಪಾಕಿಸ್ತಾನ ಈಗ ಅದೇ ರೀತಿ ಇಸ್ರೇಲ್ ದೇಶವನ್ನು ಕೆಣಕಿದೆ. ಮೊದಲಿನಿಂದಲೂ ಪಾಕಿಸ್ತಾನದ ಮೇಲೆ ಕಿಡಿ ಕಾರುವ ಇಸ್ರೇಲ್ ದೇಶವು ಒಂದು ವೇಳೆ ಪಾಕಿಸ್ತಾನ ಕೇವಲ ಕೆಲವೇ ಕೆಲವು ಗಂಟೆಗಳಲ್ಲಿ ಸರ್ವನಾಶವಾಗುತ್ತದೆ.

ಪಾಕಿಸ್ತಾನದ ಮಾಜಿ ರಾಯಭಾರಿ ಹಾಗೂ ರಕ್ಷಣಾ ವಿಶ್ಲೇಷಕ ಜಾಫರ್ ಹಿಲಾಲಿ ರವರು ಪಾಕಿಸ್ತಾನದ ಮಾಧ್ಯಮಗಳಿಗೆ ನೀಡಿದ ಸಂದರ್ಶನವೊಂದರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಇಸ್ರೇಲ್ ದೇಶವು ಕೂಡ ಭಾಗಿಯಾಗಿದೆ ಹಾಗೂ ಈ ಸಂಘರ್ಷದಲ್ಲಿ ಅಭಿನಂದನ್ ರವರನ್ನು ಬಂಧಿಸುವಾಗ ಇಸ್ರೇಲ್ ಪೈಲೆಟ್ ಅವರನ್ನು ಸಹ ನಾವು ಬಂದಿದ್ದೇವೆ ಎಂದು ಹೇಳಿದ್ದಾರೆ. ಇಸ್ರೇಲ್ ದೇಶವು ಸದಾ ಉಗ್ರಗಾಮಿಗಳನ್ನು ಸದೆಬಡಿಯಲು ಕಾದು ಕುಳಿತಿರುತ್ತದೆ. ಭಾರತ ದೇಶದ ಮೇಲೆ ದಾಳಿ ಮಾಡಿದಾಗ ಇಸ್ರೇಲ್ ದೇಶವು ಭಾರತದ ಬೆಂಬಲಕ್ಕೆ ನಿಂತು ಯುದ್ಧ ಮಾಡಿ ಬೆಂಬಲಕ್ಕೆ ನಾವಿದ್ದೇವೆ ಎಂಬ ಘೋಷಣೆಯನ್ನು ಸಹ ಮಾಡಿತ್ತು ಇಂತಹ ಸಮಯದಲ್ಲಿ ಪಾಕಿಸ್ತಾನದ ಈ ಹೇಳಿಕೆ ಇಸ್ರೇಲಿಗರ ತಲೆ ಕೆಡಿಸಿದರೆ ಖಂಡಿತವಾಗಿಯೂ ಪಾಕಿಸ್ತಾನ ದೇಶದ ಅಂತ್ಯ ಸನಿಹ ವಾಗಿದೆ ಎಂದರ್ಥ.

Post Author: Ravi Yadav