ಸುಮ್ಮನಿದ್ದ ಶಾಸಕರನ್ನು ಕೆಣಕಿದ ಸ್ಪೀಕರ್. ಮೈತ್ರಿಗೆ ಮತ್ತೊಂದು ಕಂಟಕ

ಮೈತ್ರಿಗೆ ಈಗಾಗಲೇ ಹಲವಾರು ಕಂಟಕಗಳು ಎದುರರಾಗಿದ್ದವು ಆದರೆ ಕೊನೆಗೂ ಮೈತ್ರಿ ಸರ್ಕಾರವು ಹೇಗೋ ತನ್ನ ಶಾಸಕರನ್ನು ಹಿಡಿದಿಟ್ಟುಕೊಂಡು ತನ್ನ ಸರ್ಕಾರದ ಆಯಸ್ಸನ್ನು ಎಚ್ಚಿಸಿಕೊಡಿತ್ತು, ಆದರೆ ಇತ್ತೀಚಿಗೆ ಶಾಸಕರಾದ ಉಮೇಶ್ ಜಾಧವ್ ರವರು ರಾಜೀನಾಮೆ ನೀಡಿವೆ ಮೂಲಕ ಮೈತ್ರಿಗೆ ಮೊದಲ ಶಾಕ್ ನೀಡಿದ್ದರು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದ್ದ ಕಾರಣ ಯಾರು ಅಷ್ಟಾಗಿ ತಲೆ ಕೆಡಿಸೋಕೊಂಡಿರಲಿಲ್ಲ. ಹಾಗೂ ಮೈತ್ರಿ ಸರ್ಕಾರಇನ್ನು ಸುಭ್ರದ್ರವಾಗಿದೆ ಎಂದುಕೊಂಡು ಸುಮ್ಮನಾಗಿದ್ದರು. ಇನ್ನು ಉಮೇಶ ಜಾಧವ್ ರವರು ರಾಜೀನಾಮೆ ಅಂಗೀಕಾರಕ್ಕೆ ಮುನ್ನವೇ ನೇರವಾಗಿ ಬಿ ಜೆ ಪಿ ಸೇರಿ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇಷ್ಟೆಲ್ಲ ವಿದ್ಯಮಾನಗಳ ನಂತರ ರಾಜ್ಯ ರಾಜಕಾರಾಣ ಮತ್ತಷ್ಟು ರಂಗೇರಿತ್ತು. ಆದರೂ ಮೈತ್ರಿಗೆ ಮಾತ್ರ ಯಾವುದೇ ಭಂಗವಿಲ್ಲದೆ ಸರ್ಕಾರ ಸುಭ್ರದ್ರವಾಗಿರುವ ಸೂಚನೆ ನೀಡಿತ್ತು, ಆದರೆ ಈಗ ಸ್ವತಃ ಸ್ಪೀಕರ್ ರಮೇಶ್ ಕುಮಾರ್ ರವರು ರೆಬೆಲ್ ಶಾಸಕರಿಗೆ ಶಾಕ್ ನೀಡಲು ಹೋಗಿ ಸುಮ್ಮನಿದ್ದ ಶಾಸಕರನ್ನು ಕೆಣಕಿ ಮೈತ್ರಿಯಾ ಬುಡಕ್ಕೆ ತಂದಿದ್ದಾರೆ.

ಹೌದು, ಸ್ಪೀಕರ್ ರವರು ಕೆಲವ ಉಮೇಶ ಜಾಧವ್ ರವರ ರಾಜೀನಾಮೆ ಯನ್ನು ಅಂಗೀಕಾರ ಮಾಡದೆ ಅವರಿಗೆ ನೋಟಿಸ್ ಕಲಿಸುವ ಜೊತೆಗೆ ಮೊದಲಿಂದಲೂ ಪಕ್ಷ ಬಿಡುವ ಚಿಂತನೆಯಲ್ಲಿ ತೊಡಗಿದ್ದ ರೆಬೆಲ್ ಶಾಸಕರಾದ ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕಮಟಹಳ್ಳಿಗೆ ನೋಟಿಸ್ ಕಳುಹಿಸಲಾಗಿದೆ.ಈಗಾಗಲೇ ಕೆರಳಿರುವ ರೆಬೆಲ್ ಶಾಸಕರು ಈ ಹಿಂದೆಯೂ ಸಹ ಪಕ್ಷ ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಇಷ್ಟೆಲ್ಲ ಆದರೂ ಸಹ ಅವರಿಗೆ ನೋಟಿಸ್ ಕಳುಹಿಸಿರುವುದು ಬಾರಿ ಚರ್ಚೆ ಗೆ ಗ್ರಾಸವಾಗಿದೆ. ಒಂದು ವೇಳೆ ಈ ನೋಟಿಸ್ ಗೆ ಶಾಸಕರು ಉತ್ತರ ನೀಡದೆ ಕಡೆಗಣಿಸಿದ್ದಲ್ಲಿ ಎಲ್ಲ ಶಾಸಕರನ್ನು ಅನರ್ಹತೆ ಗೊಳಿಸುವ ಸಾಧ್ಯತೆ ಹೆಚ್ಚಾಗಿವೆ. ಒಂದು ವೇಳೆ ಅದೇ ನಡೆದಲ್ಲಿ ಬಾರಿ ಸಂಖ್ಯೆಯಲ್ಲಿ ಜಾರಕಿಹೊಳಿರವರ ಬೆಂಬಲಿಗರ ಶಾಸಕರು ಬಿ ಜೆಪಿ ಸೇರಲಿದ್ದಾರೆ.

Post Author: Ravi Yadav