ಬಿಗ್ ನ್ಯೂಸ್: ಯುದ್ಧಕ್ಕೆ ಸಿದ್ಧಗೊಂಡ ಪಾಪಿಗಳು, ಮಾಡುತ್ತಿರುವುದಾದರೂ ಏನು ಗೊತ್ತಾ??

ಭಾರತವು ಪುಲ್ವಾಮ ದಾಳಿಗೆ ಪ್ರತೀಕಾರ ತೀರಿಸಿಕೊಂಡ ನಂತರ ಭಾರತ ಹಾಗೂ ಪಾಕಿಸ್ತಾನದ ಗಡಿ ಅಕ್ಷರಸಹ ರಣ ರಂಗವಾಗಿ ಮಾರ್ಪಟ್ಟಿದೆ, ಭಾರತವನ್ನು ನೇರವಾಗಿ ಎದುರಿಸಲು ಶಕ್ತಿ ಇಲ್ಲದಿದ್ದರೂ ಸಹ ಪಾಕಿಸ್ತಾನ ತನ್ನ ಕುತಂತ್ರ ನೀತಿಯನ್ನು ಮಾತ್ರ ಬಿಡಲು ಸಿದ್ಧವಿಲ್ಲ, ಭಾರತದ ವಿರುದ್ಧ ಯುದ್ಧ ಗೆಲ್ಲುವ ತಾಕತ್ತ ಇಲ್ಲ ಎಂಬುದನ್ನು ಪಾಕಿಸ್ತಾನವು ಅರ್ಥ ಮಾಡಿಕೊಂಡಿದ್ದರು ಸಹ ಸುಖಾಸುಮ್ಮನೆ ಭಾರತದ ವಿರುದ್ಧ ಕಾಲ್ಕೆರೆದು ಜಗಳಕ್ಕೆ ಬರುತ್ತಿದೆ. ವಿಶ್ವದ ಮುಂದೆ ತಾನು ಶಾಂತಿ ಬಯಸುವುದಾಗಿ ನಾಟಕ ಮಾಡುತ್ತಿರುವ ಪಾಕಿಸ್ತಾನದ ಕುತಂತ್ರ ಇದೀಗ ಬಯಲಾಗಿದೆ. ಈ ಮೂಲಕ ಪಾಕಿಸ್ತಾನವು ಇನ್ನೂ ಬುದ್ಧಿ ಕಲಿತಿಲ್ಲ ಎಂಬುದು ಸ್ಪಷ್ಟವಾಗಿದೆ ಆದ ಕಾರಣದಿಂದ ಭಾರತವು ಯಾವ ಪ್ರತ್ಯುತ್ತರವನ್ನು ನೀಡಲಿದೆ ಎಂಬುದನ್ನು ಎಲ್ಲರೂ ಕಾದು ನೋಡುತ್ತಿದ್ದಾರೆ.

ಪಾಕಿಸ್ತಾನದೇಶ ತನ್ನ ಜನರಿಗೆ ಹಾಗೂ ತನ್ನ ಸೇನೆಗೆ ನೀಡುತ್ತಿರುವ ಆದೇಶಗಳನ್ನು ಗಮನಿಸಿದರೆ ಪಾಕಿಸ್ತಾನವು ಭಾರತದ ಜೊತೆ ಯುದ್ಧಕ್ಕೆ ಸಿದ್ಧವಾಗುತ್ತಿರುವ ಎಲ್ಲಾ ಲಕ್ಷಣಗಳು ಕಾಣಸಿಗುತ್ತವೆ. ಒಂದೆಡೆ ಭಾರತೀಯ ಗಡಿ ಪ್ರದೇಶದಲ್ಲಿ ವಾಸಿಸುವ ನಾಗರಿಕರ ಮೇಲೆ ದಾಳಿ ಮಾಡಿಕೊಂಡು ಭಾರತದ ದಿಕ್ಕು ತಪ್ಪಿಸಲು ಪಾಕಿಸ್ತಾನವು ಪ್ರಯತ್ನ ಕೊಡುತ್ತಿದೆ ಎಂಬ ಅನುಮಾನ ಎಲ್ಲರಲ್ಲೂ ಮೂಡಿದೆ. ಭಾರತೀಯ ಸೈನಿಕರ ಗಮನ ಮತ್ತೊಂದು ಕಡೆ ಸೆಳೆದು ತಾನು ದಾಳಿ ಮಾಡಲು ಎಲ್ಲ ರೀತಿಯಲ್ಲೂ ಸಜ್ಜಾಗುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

ಇದಕ್ಕೆ ಪೂರಕ ಎಂಬಂತೆ ಪಾಕಿಸ್ತಾನ ದೇಶವು ತನ್ನ ದೇಶದ ವಾಯುಪಡೆಗೆ ಯುದ್ಧಕ್ಕೆ ಸಜ್ಜಾ ಗಿರು ವಂತೆ ಆದೇಶ ಹೊರಡಿಸಿದೆ. ಸರ್ವರೀತಿಯಲ್ಲೂ ಸಹ ಪಾಕಿಸ್ತಾನ ವಾಯುಪಡೆಯ ಸಿದ್ಧವಾಗಿರುವಂತೆ ಯೋಧರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಇನ್ನು ಭಾರತದ ಗಡಿಯೊಳಗೆ ಡ್ರೋನ್ಗಳನ್ನು ನುಗ್ಗಿಸುವ ಹುಚ್ಚು ಸಾಹಸ ಮಾಡುತ್ತಿರುವ ಪಾಕಿಸ್ತಾನವು ಭಾರತದ ಚಲನವಲನಗಳನ್ನು ಗಮನಿಸಲು ಡ್ರೋನ್ ಗಳನ್ನು ಬಳಸಿಕೊಂಡು ಹೊಸ ಯೋಜನೆ ರೂಪಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಅದಕ್ಕೆ ಪೂರಕ ಎಂಬಂತೆ ಇಂದು ಪಾಕಿಸ್ತಾನದ ರೋಲ್ ಒಂದು ರಾಜಸ್ಥಾನದ ಗಡಿ ಪ್ರವೇಶಿಸಲು ಪ್ರಯತ್ನ ಪಟ್ಟಿತು, ಅದನ್ನು ತಕ್ಷಣವೇ ಭಾರತೀಯ ವಾಯುಪಡೆಯು ಹೊಡೆದು ಉರುಳಿಸಿತು.

ಇಷ್ಟೆಲ್ಲಾ ಆದ ನಂತರ ಯುದ್ಧಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿಕೊಳ್ಳುತ್ತಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ, ಯುದ್ಧದ ಸಮಯದಲ್ಲಿ ವಿದ್ಯುತ್ ಅತಿ ಮುಖ್ಯವಾಗಿ ಬೇಕಾಗಿರುವ ಕಾರಣ ಯಾವುದೇ ಮನೆಯಲ್ಲಿಯೂ ಯುಪಿಎಸ್ ಬಳಸದಂತೆ ಹೊಸ ಆದೇಶವನ್ನು ಹೊರಡಿಸಿದೆ. ಕಾರಣವನ್ನು ನೀಡದೇ ಹಲವಾರು ಜಿಲ್ಲೆಗಳಲ್ಲಿ ಯುಪಿಎಸ್ ಬಳಸದಂತೆ ಜನರಿಗೆ ತಾಕೀತು ಮಾಡಲಾಗಿತ್ತು ಸರ್ಕಾರ ವಿದ್ಯುತ್ ಕೊಟ್ಟರೆ ಮಾತ್ರ ಉಪಯೋಗಿಸಿ ಯುಪಿಎಸ್ ಅನ್ನು ದಯವಿಟ್ಟು ಬಳಸಬೇಡಿ ಎಂದು ಆದೇಶಿಸಿದೆ. ಈ ಆದೇಶ ಪತ್ರ ಇದೀಗ ಭಾರತೀಯ ಮೀಡಿಯಾಗಳಿಗೆ ಲೀಕ್ ಆಗಿದ್ದು, ಭಾರೀ ಸಂಚಲನವನ್ನು ಸೃಷ್ಟಿಸಿದೆ.

ಪಾಕಿಸ್ತಾನವು ಶಾಂತಿ ಬಯಸುತ್ತಿದ್ದೆ ಎಂದು ಬೊಬ್ಬೆ ಹೊಡೆಯುವ ಇಮ್ರಾನ್ ಖಾನ್ ರವರು ಈ ಎಲ್ಲ ಆದೇಶಗಳನ್ನು ಯಾಕೆ ಆಡಿಸುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಹೀಗೆ ಎಲ್ಲ ವಿದ್ಯಮಾನಗಳಿಂದ ಪಾಕಿಸ್ತಾನವು ಯುದ್ಧ ಅಥವಾ ಭಾರತದ ಮೇಲೆ ಸರ್ಜಿಕಲ್ ಸ್ಟ್ರೈಕ್ ದಾಳಿ ನಡೆಸಲು ಪ್ರಯತ್ನಪಡುತ್ತಿದೆ ಎಂಬುದು ಸ್ಪಷ್ಟವಾಗಿದೆ ಆದರೆ ಮತ್ತೊಂದು ಕಡೆ ಭಾರತೀಯ ಸೇನೆಯು ಸಹ ಸರ್ವಸನ್ನದ್ಧವಾಗಿದ್ದು ಎಂತಹ ದಾಳಿಯನ್ನು ಎದುರಿಸಬಲ್ಲ ತಾಕತ್ತು ಹೊಂದಿದೆ. ಪಾಕಿಸ್ತಾನದ ಈ ನಡೆಯಿಂದ ಗಡಿ ಮತ್ತಷ್ಟು ಉದ್ವಿಗ್ನ ವಾಗಿದ್ದು ಮುಂದೆ ಏನು ಆಗುತ್ತದೆ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ.