ಬಿಗ್ ಬ್ರೇಕಿಂಗ್: ಮತ್ತೊಮ್ಮೆ ದಾಳಿಗೆ ಪ್ರಯತ್ನಿಸಿದ ಪಾಪಿಗಳು, ಅಖಾಡಕ್ಕೆ ಇಳಿದ ಮುಖೋಯ್ 320 ಮಾಡಿದ್ದೇನು ಗೊತ್ತಾ?

ಅಭಿನಂದನ್ ಅವರನ್ನು ಬಿಡುಗಡೆಗೊಳಿಸಿ ಶಾಂತಿ ಮಾತುಕತೆಯಿಂದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ ಎಂದು ಹೇಳಿಕೆ ನೀಡಿದ ಪಾಕಿಸ್ತಾನವು ಕೊನೆಗೂ ತನ್ನ ಕುತಂತ್ರ ಬುದ್ದಿ ಯನ್ನು ತೋರಿಸಿ ಬಿಟ್ಟಿದೆ. ಕೇವಲ ಕೆಲವೇ ಕೆಲವು ದಿನಗಳಲ್ಲಿ ತನ್ನ ಕುತಂತ್ರ ಬುದ್ದಿಯಿಂದ ಮತ್ತೊಮ್ಮೆ ಭಾರತದ ಬೆನ್ನಿಗೆ ಚೂರಿ ಹಾಕುವಂತಹ ಕೆಲಸ ಮಾಡಿದೆ. ಆದರೆ ಪಾಕಿಸ್ತಾನವು ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವಿಲ್ಲದೆ ಮಾಡುತ್ತಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ ಒಂದು ವೇಳೆ ಭಾರತವು ಜೋರಾಗಿ ಕೆಮ್ಮಿದರೂ ಸಾಕು ಪಾಕಿಸ್ತಾನವು ಸರ್ವನಾಶ ಆಗುವುದು ಕಟ್ಟಿಟ್ಟ ಬುತ್ತಿ ಇಂತಹ ಸಮಯದಲ್ಲಿ ಸಹ ಪಾಕಿಸ್ತಾನವು ತನ್ನ ಕುತಂತ್ರ ಬುದ್ದಿ ಯನ್ನು ಮಾತ್ರ ಬಿಡಲು ಸಿದ್ಧವಿಲ್ಲ.

ಗಡಿಯಲ್ಲಿ ಈಗಾಗಲೇ ಹೈ ಅಲರ್ಟ್ ಘೋಷಿ ಸಿ ಕಾದು ಕುಳಿತಿರುವ ಭಾರತೀಯ ವಾಯುಪಡೆಯು ಮೊನ್ನೆಯಷ್ಟೇ ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನೀಡಿತ್ತು, ಅಭಿನಂದನ್ ಬಿಡುಗಡೆಗೊಳಿಸಲು ಗಡಿಯಿಂದ ಸೇನೆಯನ್ನು ವಾಪಸ್ ತೆಗೆದುಕೊಳ್ಳುವ ಶರತ್ತು ವಿಧಿಸಲು ಪ್ರಯತ್ನಿಸಿದ ಪಾಕಿಸ್ತಾನದ ಕುತಂತ್ರ ಬುದ್ದಿ ಯನ್ನು ಅಂದೇ ನರೇಂದ್ರ ಮೋದಿ ಅವರು ಅರಿತಿದ್ದರು. ಆದ ಕಾರಣದಿಂದ ಸೇನೆಯನ್ನು ವಾಪಸ್ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ, ಒಂದು ವೇಳೆ ಅಭಿನಂದನ್ ರವರಿಗೆ ಏನಾದರೂ ತೊಂದರೆಯಾದಲ್ಲಿ ಪಾಕಿಸ್ತಾನದ ಅಂತ್ಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದ್ದರು, ಪಾಕಿಸ್ತಾನವು ಬೇರೆ ದಾರಿಯಿಲ್ಲದೆ ಸುಮ್ಮನೆ ಮಾತನಾಡದೆ ಅಭಿನಂದನ್ ರವರನ್ನು ಬಿಡುಗಡೆಗೊಳಿಸಿತ್ತು.

ಆದರೆ ತಾನು ಶಾಂತಿ ಬಯಸುತ್ತಿರುವುದಾಗಿ ವಿಶ್ವದ ಮುಂದೆ ತನ್ನನ್ನು ತಾನು ಶಾಂತಿ ದೂತ ಎಂದು ತೋರಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದ ಪಾಕಿಸ್ತಾನವು ಭಾರತದ ಬೆನ್ನಿಗೆ ಚೂರಿ ಹಾಕಲು ಮತ್ತೊಮ್ಮೆ ಪ್ರಯತ್ನಿಸಿದೆ. ಕಳೆದ ವಾಯುಪಡೆಯ ದಾಳಿಯ ನಂತರ ಭಾರತದ ಮೇಲೆ ನಿಗಾವಹಿಸಲು ಕಳುಹಿಸಿದ್ದ ಡ್ರೋನ್ ನನ್ನು ಭಾರತೀಯ ವಾಯುಪಡೆ ಅಂದೇ ಉರುಳಿಸಿತು, ಆದರೆ ಇಷ್ಟಕ್ಕೆ ಸುಮ್ಮನಾಗದ ಪಾಕಿಸ್ತಾನವು ಮತ್ತೊಮ್ಮೆ ಈಗ ಮತ್ತೊಂದು ಡ್ರೋನ್ ನನ್ನು ರಾಜಸ್ಥಾನದಲ್ಲಿ ಭಾರತ ಹಾಗೂ ಪಾಕಿಸ್ತಾನದ ಗಡಿ ಭಾಗದ ಬಿಕಾನೇರ್ ಪ್ರದೇಶದ ಮೇಲೆ ನಿಗಾ ವಹಿಸಲು ಕಳುಹಿಸಿದೆ.

ಆದರೆ ಈಗಾಗಲೇ ಕೇಂದ್ರ ಸರ್ಕಾರದ ಆದೇಶದಂತೆ ಯಾವುದೇ ದಾಳಿಯನ್ನು ಎದುರಿಸಲು ಸಿದ್ಧವಾಗಿರುವ ಭಾರತೀಯ ವಾಯುಪಡೆಯು, ರೇಡರ್ ಗಳ ಮೂಲಕ ಎಲ್ಲಾ ವಸ್ತುಗಳ ಚಲನವಲನಗಳನ್ನು ಗಮನಿಸುತ್ತಿತ್ತು, ಡ್ರೋನ್ ಹಾರಾಟ ದ ಬಗ್ಗೆ ತಿಳಿದ ಕೂಡಲೇ ಭಾರತೀಯ ವಾಯುಪಡೆಯ ಸುಖೋಯ್ ಯುದ್ಧ ವಿಮಾನ ಕ್ಷಣ ಮಾತ್ರದಲ್ಲಿ ಆಗಸಕ್ಕೆ ಜಿಗಿದು ಪಾಕಿಸ್ತಾನದ ಡ್ರೋನ್ ನನ್ನು ಹೊಡೆದುರುಳಿಸಿದೆ. ಸುಖೋಯ್ 30 ಎಂಕೆ ಐ ಯುದ್ಧ ವಿಮಾನವೂ ಕ್ಷಣಮಾತ್ರದಲ್ಲಿ ಆಗಸಕ್ಕೆ ಜಿಗಿದು ಡ್ರೋನ್ ಹೊಡೆದುರುಳಿಸಿ ವಾಪಸಾಗಿದೆ.

ಇದರಿಂದ ಗಡಿ ಮತ್ತಷ್ಟು ಬಿಗಡಾಯಿಸಿದ್ದು, ಪಾಕಿಸ್ತಾನ ದೇಶವು ತನ್ನ ಕುತಂತ್ರ ನೀತಿಯನ್ನು ಇಲ್ಲಿಗೆ ಬಿಟ್ಟು ಭಯೋತ್ಪಾದಕರ ಅಂತ್ಯದ ಕಡೆ ಗಮನ ಹರಿಸಿ ದಲ್ಲಿ ತನ್ನ ಅಂತ್ಯ ವನ್ನು ಕೊಂಚ ಮುಂದಕ್ಕೆ ಹಾಕಬಹುದು. ಒಂದು ವೇಳೆ ಭಯೋತ್ಪಾದಕರನ್ನು ಜೊತೆಯಾಗಿ ಪೋಷಿಸಲು ಭಾರತದ ವಿರುದ್ಧ ಕತ್ತಿ ಮಸೆಯಲು ಪ್ರಯತ್ನಿಸಿದರೆ, ಪಾಕಿಸ್ತಾನದ ಅಂತ್ಯ ಕಟ್ಟಿಟ್ಟ ಬುತ್ತಿ ಹಾಗೂ ಎಲ್ಲಾ ಭಾರತೀಯರ ಆಸೆಯಂತೆ ಮುಂದಿನ ಶಾಲಾ ಮಕ್ಕಳ ಪ್ರಶ್ನೆ ಪತ್ರಿಕೆಗಳಲ್ಲಿ ಪಾಕಿಸ್ತಾನದ ಅಂತ್ಯಕ್ಕೆ ಕಾರಣವೇನು ಎಂಬ ಪ್ರಶ್ನೆ ಇರುತ್ತದೆ ಅದಕ್ಕೆ ನಮ್ಮ ಮಕ್ಕಳು ಸಹ ಸರಿಯಾದ ಉತ್ತರವನ್ನು ನೀಡುತ್ತಾರೆ.

Post Author: Ravi Yadav