ಹಂಪಿ ಉತ್ಸವದಲ್ಲಿ ಡಿಕೆಶಿ ಉಗ್ರಪ್ಪ ಗೆ ಭಾರಿ ಮುಖಭಂಗ: ಗೆದ್ದರು ತಪ್ಪಲಿಲ್ಲ ಮೋದಿ ಕಾಟ

ಮುಂದಿನ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ನರೇಂದ್ರ ಮೋದಿರವರ ಹವಾ ಮತ್ತಷ್ಟು ಹೆಚ್ಚಾಗುತ್ತಾ ಸಾಗುತ್ತಿದೆ. ಕಳೆದ ಬಾರಿ ನರೇಂದ್ರ ಮೋದಿ ಅವರ ಅಲೆ ಗೆ ಕಾಂಗ್ರೆಸ್ ಪಕ್ಷವನ್ನು ಎರಡು ಅಂಕಿಗಳ ಸ್ಥಾನಗಳಿಗೆ ಸೀಮಿತಗೊಂಡಿತ್ತು. ಈ ಬಾರಿ ನರೇಂದ್ರ ಮೋದಿ ರವರ ಅಲೆಯು ಸುನಾಮಿಯಾಗಿ ಪರಿವರ್ತನೆಗೊಂಡಿರುವ ಕಾರಣ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಿದರೆ ಖಂಡಿತವಾಗಿಯೂ ಸೋಲುವುದು ಖಚಿತ ಎಂಬುದನ್ನು ಅರಿತುಕೊಂಡು, ತಾನೊಂದು ರಾಷ್ಟ್ರೀಯ ಪಕ್ಷ ಎಂಬುದನ್ನು ಮರೆತು ಪ್ರಾದೇಶಿಕ ಪಕ್ಷಗಳ ಕಾಲು ಹಿಡಿದಿದೆ.

ಬರೋಬ್ಬರಿ 20 ಕ್ಕೂ ಹೆಚ್ಚು ಪ್ರಾದೇಶಿಕ ಪಕ್ಷಗಳ ಜೊತೆ ಚುನಾವಣಾಪೂರ್ವ ಮೈತ್ರಿಯನ್ನು ಮಾಡಿಕೊಂಡು ಬಿಜೆಪಿಯನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಪ್ರಯತ್ನಪಡುತ್ತಿರುವ ಸಂದರ್ಭದಲ್ಲಿ ಪ್ರತಿ ಬಾರಿಯೂ ಕಾಂಗ್ರೆಸ್ ಪಕ್ಷಕ್ಕೆ ಇನ್ನಿಲ್ಲದ ಮುಜುಗರ ಗಳು ಉಂಟಾಗುತ್ತಿವೆ. ಹಲವಾರು ಸಮೀಕ್ಷೆಗಳು ಬಿಜೆಪಿ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಆದರೆ ಸ್ಪಷ್ಟ ಬಹುಮತ ಸಾಧ್ಯವಿಲ್ಲ ಎಂಬ ಫಲಿತಾಂಶಗಳನ್ನು ಹೊರ ಹಾಕುತ್ತಿದ್ದರು ಸಹ ನರೇಂದ್ರ ಮೋದಿರವರ ಹವಾ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ದೇಶದ ಶೇಕಡ 84ರ ಸೂಚನಾ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ನೋಡಲು ಇಷ್ಟ ಪಡುತ್ತಿದ್ದಾರೆ ಎಂಬ ಮಾಹಿತಿಯೂ ಇತ್ತೀಚೆಗಷ್ಟೇ ಹೊರಬಿದ್ದಿದೆ.

ಇಂತಹ ಸಮಯದಲ್ಲಿ ನರೇಂದ್ರ ಮೋದಿ ಅವರ ಹವಾ ಎಷ್ಟರಮಟ್ಟಿಗೆ ಕರ್ನಾಟಕದಲ್ಲಿ ಇದೆ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದ್ದು, ಈ ಬಾರಿ ಡಿಕೆ ಶಿವಕುಮಾರ್ ಹಾಗೂ ಉಗ್ರಪ್ಪ ರವರಿಗೆ ಮೋದಿ ರವರ ಕಾಟ ತಾಕಿದೆ. ಕಾಂಗ್ರೆಸ್ ಪಕ್ಷದ ಸಂಸದ ನಾಗಿರುವ ಉಗ್ರಪ್ಪ ರವರಿಗೆ ತಮ್ಮ ಸ್ವಕ್ಷೇತ್ರದಲ್ಲಿ ಮೋದಿ ರವರ ಕಾಟ ಎದುರಾಗಿದ್ದು, ಡಿಕೆ ಶಿವಕುಮಾರ್ ಅವರು ಜೊತೆಗಿರುವ ಕಾರಣ ಇಬ್ಬರ ವರ್ಚಸ್ಸು ಸೇರಿದರು ಸಹ ನರೇಂದ್ರ ಮೋದಿ ರವರ ವರ್ಚಸ್ಸಿಗೆ ಯಾವುದೇ ಧಕ್ಕೆಯಾಗಿಲ್ಲ ಹಾಗೂ ಮತ್ತಷ್ಟು ಮುಂದುವರೆದಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಕಳೆದ ಕೆಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಮೋದಿ ರವರ ಟ್ರೆಂಡ್ ಕರ್ನಾಟಕದಲ್ಲಿ ನಡೆಯುತ್ತಿರುವ ಹಂಪಿ ಉತ್ಸವ ದಲ್ಲಿಯೂ ಸಹ ಮುಂದುವರೆದಿದೆ. ಡಿಕೆ ಶಿವಕುಮಾರ್ ಅವರು ಹಾಗೂ ಉಗ್ರಪ್ಪ ನವರು ಕಳೆದ ಬಳ್ಳಾರಿ ಉಪ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಮೊದಲ ಬಾರಿಗೆ ಒಟ್ಟಾಗಿ ಬಳ್ಳಾರಿಗೆ ಭೇಟಿ ನೀಡಿದ್ದಾರೆ. ಈ ಬಾರಿ ಹಂಪಿ ಉತ್ಸವದಲ್ಲಿ ಭಾಗವಹಿಸಿರುವ ಉಗ್ರಪ್ಪ ಹಾಗೂ ಡಿಕೆಶಿ ರವರ ಜೋಡಿಗೆ ಮೋದಿ ಕಾಟ ತಟ್ಟಿದೆ.

ಬಳ್ಳಾರಿಯಿಂದ ಸಂಸದರಾಗಿರುವ ಕಾಂಗ್ರೆಸ್ ಪಕ್ಷದ ಉಗ್ರಪ್ಪ ನವರು ಭಾಷಣ ಮಾಡುತ್ತಿದ್ದಾಗ, ನೆರೆದಿದ್ದ ಜನರು ಇದ್ದಕ್ಕಿದ್ದ ಹಾಗೆ ನರೇಂದ್ರ ಮೋದಿ ರವರ ಪರ ಘೋಷಣೆಗಳನ್ನು ಕೂಗಲಾರಂಭಿಸಿದರು. ಮೋದಿ ಮೋದಿ ಎಂಬ ಘೋಷಣೆಗಳು ಕೇಳುತ್ತಿದ್ದಂತೆ ಭಾಷಣ ಮಾಡುತ್ತಿದ್ದ ಉಗ್ರಪ್ಪ ಅವರು ಭಾರಿ ಮುಜುಗರಕ್ಕೆ ಉಂಟಾಗಿದ್ದಾರೆ. ಜೊತೆಗೆ ಡಿಕೆ ಶಿವಕುಮಾರ್ ಅವರು ಸಹ ಇದ್ದರು ಎಂಬ ಮಾಹಿತಿ ಹೊರ ಬಿದ್ದಿದೆ. ತನ್ನ ಕ್ಷೇತ್ರದಲ್ಲಿ ತಾನು ಗೆಲುವು ದಾಖಲಿಸಿದರು ಸಹ ಮೋದಿ ಅವರ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ ಎಂಬುದು ಉಗ್ರಪ್ಪ ರವರಿಗೆ ಈಗ ಅರಿವಾಗಿದೆ.

Post Author: Ravi Yadav