ಉ. ಕರ್ನಾಟಕವನ್ನು ಮತ್ತೊಮ್ಮೆ ನಿರ್ಲಕ್ಷಿಸಿದ ಸಿಎಂ: ರೊಚ್ಚಿಗೆದ್ದ ಜನ ಯಾಕೆ ಗೊತ್ತಾ??

ದೋಸ್ತಿ ಸರ್ಕಾರವು ಈಗಾಗಲೇ ಹಲವು ಬಾರಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಣೆ ಮಾಡಿದೆ. ತಮಗೆ ಮತ ನೀಡದವರು ತಮ್ಮನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಮನಬಂದಂತೆ ತಮ್ಮ ತಮ್ಮ ಮೂರು ಜಿಲ್ಲೆಗಳಿಗೆ ಸಾವಿರಾರು ಕೋಟಿ ಯೋಜನೆಗಳನ್ನು ಜಾರಿ ಗೊಳಿಸಿರುವ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕವನ್ನು ಮರೆತಿದ್ದಾರೆ. ಉತ್ತರ ಕರ್ನಾಟಕದ ಜನರು ಇನ್ನೇನು ಅಭಿವೃದ್ಧಿಯ ಯೋಜನೆಗಳನ್ನು ಪ್ರಶ್ನಿಸುವ ಸಮಯದಲ್ಲಿ ಬೆಳಗಾವಿ ವಿಭಜನೆ ಮತ್ತು ವಿಟಿಯು ವಿಭಜನೆ ಎಂಬ ನಿರ್ಧಾರಗಳನ್ನು ಪ್ರಕಟಿಸಿ ಆ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮತ್ತೊಮ್ಮೆ ಉತ್ತರ ಕರ್ನಾಟಕವನ್ನು ಈಗ ಕುಮಾರಸ್ವಾಮಿ ಅವರು ನಿರ್ಲಕ್ಷಣೆ ಮಾಡಿರುವುದರಿಂದ ಉತ್ತರ ಕರ್ನಾಟಕದ ಜನರ ಕೆಂಗಣ್ಣಿಗೆ ಕುಮಾರಸ್ವಾಮಿ ಅವರು ಗುರಿಯಾಗಿದ್ದಾರೆ.

ಮೊದಲು ಹಂಪಿ ಉತ್ಸವಕ್ಕೆ ಹಣವಿಲ್ಲ ಎಂದು ಹೇಳಿಕೆ ನೀಡಿದ್ದ ದೋಸ್ತಿ ಸರ್ಕಾರವು ತದನಂತರ ಜನರ ಒತ್ತಾಯಕ್ಕೆ ಮಣಿದು ಹಂಪಿ ಉತ್ಸವ ನಡೆಸಲು ತೀರ್ಮಾನಿಸಿತ್ತು. ಆದರೆ ಕರ್ನಾಟಕದ ಪ್ರಮುಖ ಉತ್ಸವಗಳಲ್ಲಿ ಒಂದಾಗಿರುವ ಹಂಪಿ ಉತ್ಸವದಲ್ಲಿ ಕುಮಾರಸ್ವಾಮಿ ರವರು ಭಾಗವಹಿಸಿಲ್ಲ. ಬಹುಶಹ ವಿರೂಪಾಕ್ಷ ದೇವಾಲಯಕ್ಕೆ ಭೇಟಿ ನೀಡಿದ ರಾಜಕಾರಣಿಗಳು ಸೋಲನ್ನು ಕಾಣುತ್ತಾರೆ ಎಂಬ ಭಯದಿಂದ ಕುಮಾರಸ್ವಾಮಿ ಅವರು ಭೇಟಿ ನೀಡಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಮತ್ತೊಂದೆಡೆ ವಿರೋಧಪಕ್ಷಗಳು ಕುಮಾರಸ್ವಾಮಿ ಅವರು ಮತ್ತೊಮ್ಮೆ ಉತ್ತರ ಕರ್ನಾಟಕವನ್ನು ನಿರ್ಲಕ್ಷ ಮಾಡಿದ್ದಾರೆ ಎಂಬ ಆರೋಪವನ್ನು ಮಾಡಿದ್ದಾರೆ.

Post Author: Ravi Yadav