ಬಿಗ್ ಬ್ರೇಕಿಂಗ್: ಭಾರತೀಯ ವಾಯುಪಡೆ ಅಟ್ಯಾಕ್ ಮಾಡಿದಾಗ ಪಾಕಿಸ್ತಾನ ವಾಯುಪಡೆ ಏನು ಮಾಡಿತು ಗೊತ್ತಾ??

ಇಂದು ಇಡೀ ದೇಶವೇ ಭಾರತೀಯ ಸೇನೆಯ ತಾಕತ್ತು ಕಂಡು ಕೊಂಡಾಡುತ್ತಿದೆ. ಭಾರತೀಯ ವಾಯುಪಡೆಯು ರಾತ್ರೋರಾತ್ರಿ ಪಾಕ್ ಆಕ್ರಮಿತ ಕಾಶ್ಮೀರದ ಗಡಿ ದಾಟಿ ಮುನ್ನೂರಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿ ವಾಪಸ್ ಆಗಿದ್ದಾರೆ. ಪಾಕಿಸ್ತಾನವು ಯಾವುದೇ ದಾಳಿಯನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ ವಾದರೂ ದಾಳಿ ನಡೆದಿದ್ದು ಸತ್ಯ ಎಂಬುದು ಈಗಾಗಲೇ ಇಡೀ ವಿಶ್ವಕ್ಕೆ ಅರ್ಥವಾಗಿದೆ.

ಆದರೆ ಈ ಹೊಸ ಸುದ್ದಿಯನ್ನು ಕೇಳಿದರೆ ದಾಳಿ ನಡೆದಾಗ ಎಷ್ಟು ಸಂತೋಷವಾಗಿತ್ತೋ ಅಷ್ಟೇ ಸಂತಸ ಮತ್ತೊಮ್ಮೆ ನಿಮ್ಮ ಮುಖದಲ್ಲಿ ಮೂಡಲಿದೆ. ಇದರ ಮೂಲಕ ಭಾರತೀಯ ವಾಯುಪಡೆಯ ತಾಕತ್ತು ನೀವು ಮುಂಜಾನೆಯಿಂದ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿದೆ ಎಂಬುದು ನಿಮಗೆ ಅರ್ಥವಾಗಲಿದೆ, ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ನಿಮಗೆಲ್ಲರಿಗೂ ಈಗಾಗಲೇ ಒಂದು ಪ್ರಶ್ನೆ ಕಾಡುತ್ತಿರಬಹುದು ಭಾರತೀಯ ವಾಯುಪಡೆಯು ದಾಳಿ ಮಾಡಿದಾಗ ಪಾಕಿಸ್ತಾನದ ರೆಡಾರ್ ಗಳನ್ನು ಭಾರತೀಯ ಸೇನೆಯು ನಿಷ್ಕ್ರಿಯಗೊಳಿಸಿತ್ತು ಆದರೆ, ಗಡಿಯಲ್ಲಿ ಜಮಾವಣೆ ಗೊಂಡಿದ್ದ ಪಾಕಿಸ್ತಾನದ ಯುದ್ಧ ವಿಮಾನಗಳು ಏನು ಮಾಡುತ್ತಿದ್ದವು ಎಂಬ ಪ್ರಶ್ನೆ ನಿಮ್ಮೆಲ್ಲರಲ್ಲೂ ಈಗಾಗಲೇ ಮೂಡಿರುತ್ತದೆ. ಅದಕ್ಕೆ ಉತ್ತರವನ್ನು ಪ್ರತಿಷ್ಠಿತ ನ್ಯೂ ಸಂಸ್ಥೆಯಾದ ANU ನ್ಯೂಸ್ ಬಹಿರಂಗಪಡಿಸಿದೆ.

ಭಾರತೀಯ ವಾಯುಪಡೆಯು ದಾಳಿ ಮಾಡಿದಾಗ ಗಡಿಯಲ್ಲಿ ಕಾದು ಕುಳಿತಿದ್ದ ಪಾಕಿಸ್ತಾನದ ಎಫ್-16 ಯುದ್ಧ ವಿಮಾನಗಳು ಮಿರಾಜ್ ಫೈಟರ್ ಜೆಟ್ಗಳ ಮೇಲೆ ದಾಳಿ ಮಾಡಲು ಮುಂದಾದವು. ಆದರೆ ಭಾರತೀಯ ಮಿರಾಜ್ 2000 ಯುದ್ಧ ವಿಮಾನಗಳ ತಾಕತ್ತು ತಿಳಿದಿದ್ದ ಪಾಕಿಸ್ತಾನದ ವಾಯುಪಡೆ ಭಾರತೀಯ ಯುದ್ಧ ವಿಮಾನಗಳ ಗುಂಪನ್ನು ಕಂಡು ಎದುರಿಸಲು ಸಾಧ್ಯವಾಗುವುದಿಲ್ಲ ಎಂದು ಸೋಲನ್ನು ಒಪ್ಪಿಕೊಂಡು ವಾಪಸಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ರೀತಿಯ ವಿಷಯಗಳನ್ನು ಕೇಳಿದರೆ ಭಾರತೀಯ ಸೇನೆಯ ತಾಕತ್ತು ಏನು ಎಂಬುದು ಮತ್ತೊಮ್ಮೆ ನಮಗೆ ಅರ್ಥವಾಗಿದೆ. ಗಡಿಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡುವ ಮೂಲಕ ಫಾಲೋ ಮಾಡಿ.