ಬಿಗ್ ಬ್ರೇಕಿಂಗ್: ಭಾರತೀಯ ಸೇನೆ ಮೇಲೆ ಬಾರಿ ಗುಂಡಿನ ಸುರಿಮಳೆ, ಗಡಿ ಮತ್ತಷ್ಟು ಉದ್ವಿಗ್ನ

ಪುಲ್ವಾಮಾ ದಾಳಿಗೆ ಭಾರತೀಯ ವಾಯುಪಡೆಯು ತಕ್ಕ ಪ್ರತ್ಯುತ್ತರವನ್ನೂ ನೀಡಿದೆ. ಹಲವಾರು ದಶಕಗಳ ನಂತರ ಇದೇ ಮೊಟ್ಟಮೊದಲ ಬಾರಿಗೆ ಪಾಕ್ ಆಕ್ರಮಿತ ಗಡಿಯನ್ನು ದಾಟಿದ ಭಾರತೀಯ ವಾಯುಪಡೆ ಒಂದೇ ಒಂದು ಪ್ರತಿರೋಧದ ದಾಳಿ ಇಲ್ಲದೆ ತನ್ನ ತಾಕತ್ತು ಏನೆಂಬುದನ್ನು ಈಗಾಗಲೇ ಪಾಕಿಸ್ತಾನಕ್ಕೆ ಅರ್ಥವಾಗುವಂತೆ ಉತ್ತರ ನೀಡಿದೆ.

ಆದರೆ ಕುತಂತ್ರಿ ಬುದ್ಧಿಯನ್ನು ಬಿಡದ ಪಾಕಿಸ್ತಾನವು ನೇರವಾಗಿ ಯುದ್ಧಕ್ಕೆ ಮುಂದೆಬಾರದೇ ಮತ್ತೊಮ್ಮೆ ಭಾರತೀಯರನ್ನು ಕೆಣಕುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ತಕ್ಕ ಉತ್ತರವನ್ನು ನೀಡಿದರೂ ಸಹ ಈ ಬಾರಿ ಮತ್ತೊಮ್ಮೆ ಪಾಕಿಸ್ತಾನ ಕಾಲುಕೆರೆದುಕೊಂಡು ಜಗಳಕ್ಕೆ ಬರುತ್ತಿದೆ. ಇದು ಇದೇ ರೀತಿ ಮುಂದುವರೆದಲ್ಲಿ ಪಾಕಿಸ್ತಾನದ ಅಂತ್ಯ ಕಾಣುವುದರಲ್ಲಿ ಅನುಮಾನವೇ ಇಲ್ಲ.

ಗಡಿಯಲ್ಲಿ ಮತ್ತೊಮ್ಮೆ ಪಾಕಿಸ್ತಾನದ ಸೇನಾ ಪಡೆಗಳು ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಐವತ್ತಕ್ಕಿಂತಲೂ ಹೆಚ್ಚು ಸ್ಥಳಗಳಲ್ಲಿ ಮೋಟಾರ್ ಗಳನ್ನು ಬಳಸಿಕೊಂಡು ಭಾರತೀಯ ಸೇನೆಯ ಮೇಲೆ ದಾಳಿ ಮಾಡಿದೆ. ಸಣ್ಣ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸುವ ಮೂಲಕ ಕದನ ವಿರಾಮ ಉಲ್ಲಂಘನೆ ಮಾಡಿದೆ.

ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವ ಕಾರಣ ಪಾಕಿಸ್ತಾನದಿಂದ ಅಪ್ರಚೋದಿತ ದಾಳಿ ಬಂದ ತಕ್ಷಣ ಭಾರತೀಯ ಸೇನೆಯು ಸಹ ತಕ್ಕ ಪ್ರತ್ಯುತ್ತರವನ್ನು ನೀಡುತ್ತಿದೆ. 55 ನಾಗರಿಕ ಸಣ್ಣ ಹಳ್ಳಿಗಳನ್ನು ಗುರಿಯಾಗಿರಿಸಿ ಪಾಕಿಸ್ತಾನ ಸೇನೆ ಯು ಕದನ ವಿರಾಮ ಉಲ್ಲಂಘಿಸಿದೆ. ಭಾರತ ತಕ್ಕ ಪ್ರತ್ಯುತ್ತರ ನೀಡಿದ ಕಾರಣ ಬೇರೆ ದಾರಿಯಿಲ್ಲದೆ ಸುಮ್ಮನಾಗಿದೆ.

Post Author: Ravi Yadav