ವಾಯು ದಾಳಿ ಬೆನ್ನಲ್ಲೇ ಮತ್ತೊಂದು ಬ್ರಹ್ಮಾಸ್ತ್ರ: ಪಾಕಿಸ್ತಾನಕ್ಕೆ ನಡುಕ.

ಖಂಡಿತವಾಗಿಯೂ ಈ ಲೇಖನವನ್ನು ಓದಿದ ನಂತರ ಪಾಕಿಸ್ತಾನದ ಪರಿಸ್ಥಿತಿ ಕಂಡು ನಿಮಗೆ ನಗು ಬರುತ್ತದೆ. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ನೀಡಿದೆ. ತನ್ನ ಕುತಂತ್ರ ನೀತಿಗಳಿಂದ ಉಗ್ರರನ್ನು ಬೆಂಬಲಿಸಿ ಪೋಷಿಸುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ವಾಯುಪಡೆಯು ಸರಿಯಾದ ಉತ್ತರವನ್ನು ನೀಡುವ ಮೂಲಕ ಇನ್ನೊಮ್ಮೆ ಕೆಮ್ಮಿದರೆ ಹೆಡೆಮುರಿ ಕಟ್ಟುವುದು ಖಚಿತ ಎಂಬ ಸಂದೇಶವನ್ನು ರವಾನಿಸಿದೆ.

ಭಾರತೀಯ ಯುದ್ಧ ವಿಮಾನಗಳ ಆರ್ಭಟ ಕಂಡು ಪಾಕಿಸ್ತಾನದ ಯುದ್ಧ ವಿಮಾನಗಳು ತೆಪ್ಪಗಾಗಿದ್ದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಭಾರತೀಯ ಯುದ್ಧ ವಿಮಾನಗಳ ಗುಂಪನ್ನು ಕಂಡ ಪಾಕಿಸ್ತಾನದ ವಾಯುಪಡೆಯು ಬೇರೆ ದಾರಿಯಿಲ್ಲದೆ ಯುದ್ಧಭೂಮಿಯಿಂದ ಸೋಲನ್ನು ಒಪ್ಪಿಕೊಂಡು ವಾಪಸ್ ಆಗಿದ್ದವು. ಕೇವಲ ಕೆಲವೇ ಕೆಲವು ಯುದ್ಧ ವಿಮಾನಗಳನ್ನು ಈ ದಾಳಿಯಲ್ಲಿ ಬಳಸಲಾಗಿತ್ತು. ಅಂದರೆ ಭಾರತೀಯ ಸೇನೆಯ ಸಂಪೂರ್ಣ ವಾಯುಪಡೆಯ ಶಕ್ತಿ ಎಷ್ಟಿರಬಹುದು ಎಂದು ನೀವೇ ಊಹಿಸಿಕೊಳ್ಳಿ.

ಇಷ್ಟು ಸಾಲದು ಎಂಬಂತೆ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸುವ ಮತ್ತೊಂದು ಸುದ್ದಿ ಹೊರಬಿದ್ದಿದೆ. ಪುಲ್ವಾಮಾ ದಾಳಿ ನಡೆದ ಬೆನ್ನಲ್ಲೇ ಪಾಕಿಸ್ತಾನವು ಯುದ್ಧಕ್ಕೆ ಸಿದ್ಧ ಎಂಬ ಎಚ್ಚರಿಕೆಯಿಂದ ನೀಡುತ್ತಿರುವ ಸಂದರ್ಭದಲ್ಲಿ ಭಾರತೀಯ ಸೇನೆಗೆ ಮತ್ತೊಂದು ಬ್ರಹ್ಮಾಸ್ತ್ರ ಸೇರ್ಪಡೆಗೊಳ್ಳುಲಿದೆ. ಸ್ವದೇಶಿ ನಿರ್ಮಿತ ಅತ್ಯಾಧುನಿಕ ಕ್ಷಿಪಣಿ ಗಳು ಭಾರತೀಯ ಸೇನೆ ಸೇರಲು ಸಿದ್ಧವಾಗಿವೆ. ಈ ಕ್ಷಿಪಣಿಗಳು ಸೇನೆಗೆ ಸೇರ್ಪಡೆ ಗೊಂಡ ಮರು ಕ್ಷಣದಿಂದ ಪಾಕ್ ಯುದ್ಧ ವಿಮಾನಗಳು ಗಡಿಯ ಬಳಿ ಬಂದರು ಸಹ ವಾಪಾಸ್ ಹೋಗುವುದಿಲ್ಲ

ಭಾರತೀಯ ಹೆಮ್ಮೆಯ ಡಿಆರ್ ಡಿಓ ಸಂಸ್ಥೆಯು ದಾಳಿ ನಡೆದ ಬೆನ್ನಲ್ಲೇ 2 ಕ್ಷಿಪಣಿಗಳ ಪರೀಕ್ಷಾರ್ಥ ಯಶಸ್ವಿ ಹಾರಾಟ ನಡೆಸಿದೆ. ಒಡಿಸ್ಸಾದ ಬಾಲಸೂರ್ ನ ಕಡಲ ತೀರದಲ್ಲಿ ವೇಗವಾಗಿ ಗಾಳಿಯಲ್ಲಿ ವೈರಿಯ ಯುದ್ಧ ವಿಮಾನವನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವ ಎರಡು ಅತ್ಯಾಧುನಿಕ ಕ್ಷಿಪಣಿಗಳನ್ನು ಪರೀಕ್ಷೆ ನಡೆಸಲಾಗಿದೆ. ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಈ ಅತ್ಯಾಧುನಿಕ ಕ್ಷಿಪಣಿ ಗಳು ಮುಗಿಸಿ ಬಿಟ್ಟಿರುತ್ತವೆ. ಸೇನೆಗೆ ಎಲ್ಲ ರೀತಿಯಲ್ಲೂ ಸಂಪೂರ್ಣ ಸಹಕಾರಿಯಾಗಿರುವ ಕೇಂದ್ರ ಸರ್ಕಾರಕ್ಕೆ ನಮ್ಮ ಪರವಾಗಿ ಧನ್ಯವಾದಗಳು. ಸ್ಪೆಷಲ್ ಥ್ಯಾಂಕ್ಸ್ ಟು ನಿರ್ಮಲ ಮೇಡಂ