ಮಿರಾಜ್ ನಷ್ಟೇ ಪ್ರಮುಖ ಪಾತ್ರ ವಹಿಸಿದ ಸೇನೆಯ ಅಸ್ತ್ರಗಳು ಯಾವುವು ಗೊತ್ತಾ??

ಕೇವಲ 24 ಗಂಟೆಗಳ ಹಿಂದೆ ಭಾರತೀಯರ ರಕ್ತ ಕುದಿಯುತ್ತಿತ್ತು. ಪುಲ್ವಾಮಾ ದಾಳಿಯ ಪ್ರತೀಕಾರವನ್ನು ಭಾರತ ಎಂದು ತೀರಿಸಿಕೊಳ್ಳುತ್ತದೆ ಎಂದು ಇಡೀ ದೇಶದ ಜನತೆ ಕಾದು ಕುಳಿತಿದ್ದರು ( ಕೆಲವು ದೇಶದ್ರೋಹಿಗಳನ್ನು ಹೊರತುಪಡಿಸಿ). ಯಾವ ಸಮಯದಲ್ಲಿ ಏನು ಆಗುತ್ತದೆ ಎಂಬುದು ಯಾರಿಗೂ ಅರಿವಿರಲಿಲ್ಲ. ದಾಳಿ ನಡೆಸುವ ಯೋಜನೆಯು ಸಹ ಎಲ್ಲಿಯೂ ಬಹಿರಂಗಗೊಂಡಿರಲಿಲ್ಲ ಅಷ್ಟೇ ಯಾಕೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡುವ ಪೈಲೆಟ್ ಗಳಿಗೂ ಸಹ ವಿಷಯ ತಿಳಿದಿರಲಿಲ್ಲ.

ಆದರೆ ಇದ್ದಕ್ಕಿದ್ದ ಹಾಗೆ ರಾತ್ರಿ 3:30 ರಲ್ಲಿ ಸೇನೆಯು ದಾಳಿಗೆ ಮುಗಿಬೀಳುತ್ತದೆ. ಕೇವಲ 21 ನಿಮಿಷದಲ್ಲಿ ತನಗೆ ನೀಡಲಾಗಿದ್ದ ಟಾರ್ಗೆಟ್ ಗಳನ್ನು ಭಾರತೀಯ ವಾಯುಪಡೆ ಬಹಳ ಸುಲಭವಾಗಿ ಮುಗಿಸಿಕೊಂಡು ಯಾವುದೇ ಪ್ರತಿದಾಳಿಯನ್ನು ನೋಡದೆ ವಾಪಸಾಗುತ್ತಾರೆ. ನೇರವಾಗಿ ಉಗ್ರರ ಅಡಗುತಾಣ ಗಳ ಮೇಲೆ ದಾಳಿ ಮಾಡಿ ಮುನ್ನೂರಕ್ಕೂ ಹೆಚ್ಚು ಉಗ್ರರನ್ನು ನರಕಕ್ಕೆ ಕಳುಹಿಸಿ ಜೋಶ್ ನಲ್ಲಿ ವಾಪಸ್ಸು ಬಂದಿದ್ದಾರೆ.

ಉಗ್ರರನ್ನು ನರಕಕ್ಕೆ ಕಳುಹಿಸುವುದರಲ್ಲಿ ಮಿರಾಜ್ 2000 ವಿಮಾನ ಗಳ ಪಾತ್ರ ಏನೆಂಬುದು ನಿಮಗೆ ಈಗಾಗಲೇ ಅರ್ಥವಾಗಿದೆ. ಏನು ನಡೆಯುತ್ತಿದೆ ಎಂಬುದು ಉಗ್ರರಿಗೆ ಅರಿವಾಗುವಷ್ಟರಲ್ಲಿ ಮಿರಾಜ್ ಯುದ್ಧ ವಿಮಾನಗಳು ಅವರನ್ನು ನೇರವಾಗಿ ನರಕಕ್ಕೆ ಕಳುಹಿಸಿತ್ತು.ಆದರೆ ಮಿರಾಜ್ ನಷ್ಟೇ ಪ್ರಮುಖ ಪಾತ್ರ ವಹಿಸಿದ ಸೇನೆಯ ಅಸ್ತ್ರಗಳು ಯಾವುವು ಗೊತ್ತಾ? ನಿಮಗೆ ಎರಡು ನಿಮಿಷ ಸಮಯವಿದ್ದರೆ ಸಂಪೂರ್ಣ ಓದಿ ಬಿಡಿ.

ಭಾರತೀಯ ಸೈನ್ಯ ಮುಂಜಾನೆಯ ಸಮಯದಲ್ಲಿ ದಾಳಿ ಮಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರೆ ಭಾರತೀಯ ವಾಯುಪಡೆಗೆ ಸಹಾಯ ಮಾಡಿದ್ದು ಎರಡು ಪ್ರಮುಖ ಡ್ರೋನ್ ಗಳು ಎಂದರೆ ನೀವು ನಂಬಲೇಬೇಕು. ಮೊದಲು ಉಗ್ರರ ಆಡುವ ತಾಣಗಳ ಮಾಹಿತಿಯನ್ನು ಕಲೆಹಾಕಿ ಭಾರತೀಯ ವಾಯುಪಡೆಗೆ ಸಂಪೂರ್ಣ ಸಹಾಯ ಮಾಡಿದ ಈ ಡ್ರೋನ್ ಗಳು ದಾಳಿ ನಡೆಯುವಾಗ ಯಾವ ರೀತಿ ಸಹಾಯ ಮಾಡಿದವು ಗೊತ್ತಾ??

ಐ ಇನ್ ದ ಸ್ಕೈ ಎಂದೇ ಖ್ಯಾತವಾಗಿರುವ ಸ್ವದೇಶಿ ನಿರ್ಮಿತ ನೇತ್ರಾ ಹಾಗೂ ಇಸ್ರೇಲ್ ನಿರ್ಮಿತ ಇರಾನ್ ಎಂಬ ಡ್ರೋನ್ ಗಳ ನೆರವಿನಿಂದ ಭಾರತೀಯ ವಾಯುಪಡೆಯು ಯಶಸ್ವಿಯಾಗಿ ಮತ್ತು ಯಾವುದೇ ಪ್ರತಿದಾಳಿಗೆ ಅವಕಾಶವಿಲ್ಲದಂತೆ ತನ್ನ ಕೆಲಸ ಮುಗಿಸಿಕೊಂಡು ವಾಪಸ್ಸಾಗಿದೆ.

ನೇತ್ರ ಎಂಬ ಸ್ವದೇಶಿ ನಿರ್ಮಿತ ಡ್ರೋನ್ ಇತರ ದೇಶಗಳ ಯುದ್ಧ ವಿಮಾನಗಳ ಮೇಲೆ ಹದ್ದಿನ ಕಣ್ಣಿಟ್ಟಿರುತ್ತದೆ ಯಾವುದೇ ಚಲನವಲನ ಕಂಡುಬಂದರೂ ಸಹ ಕ್ಷಣ ಮಾತ್ರದಲ್ಲಿ ಸೂಚನೆ ರವಾನಿಸಿ, ರಾಡಾರ್ ಗಳನ್ನು ಎಚ್ಚರಿಸಿ ಪ್ರತಿ ದಾಳಿಯಾಗುವ ಯಾವುದೇ ಸಂಭಾವ್ಯತೆ ಇದ್ದರೆ ಬಹುಬೇಗನೇ ಎಚ್ಚೆತ್ತುಕೊಂಡು ಸಿದ್ದರಾಗಲು ಸಹಾಯ ಮಾಡುತ್ತದೆ.

ಇನ್ನು ಭಾರತದ ಆಪ್ತ ರಾಷ್ಟ್ರಗಳಲ್ಲಿ ಪ್ರಮುಖವೆನಿಸಿಕೊಂಡಿರುವ ಇಸ್ರೇಲ್ ನಿರ್ಮಿತ ಹೆರಾನ್ ಎಂಬ ಡ್ರೋನ್ ಭಾರತೀಯ ವಾಯುಪಡೆಯ ಸಹಾಯಕ್ಕೆ ನಿಂತಿತ್ತು. ಯಾವುದೇ ರಾಡಾರ್ ಗಳ ಕಣ್ಣಿಗೆ ಬೀಳದ ಹಾಗೆ ಕೆಲಸ ನಿರ್ವಹಿಸುವ ಈ ಡ್ರೋನ್ ಮಧ್ಯಮ ಎತ್ತರದಲ್ಲಿ ಹಾರುತ್ತದೆ ಹಾಗೂ ಮಾನವರಹಿತ ವೈಮಾನಿಕ ವಾಹನದಂತೆ ಕೆಲಸ ನಿರ್ವಹಿಸುವ ಈ ಡ್ರೋನ್ 10.5 ಕಿಲೋ ಮೀಟರ್ ಎತ್ತರದವರೆಗೂ ಹಾರಬಲ್ಲದು ಹಾಗೂ ಸತತವಾಗಿ 52 ಗಂಟೆಗಳ ಕಾಲ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಒಂದು ವೇಳೆ ಭೂಮಿಯಿಂದ ಸಂಪರ್ಕ ಕಡಿ ತಗೊಂಡರೆ ತಾನಾಗಿಯೇ ಭೂಮಿಗೆ ಇಳಿಯುವ ಸಾಮರ್ಥ್ಯವನ್ನು ಹೊಂದಿದೆ ಹಾಗೂ ಎಲ್ಲಾ ರೀತಿಯ ವಾತಾವರಣ ದಲ್ಲಿಯೂ ಸಹ ಕೆಲಸ ಮಾಡುವ ತಾಕತ್ತು ಹೆರಾನ್ ಡ್ರೋನ್ ಗೆ ಇದೆ.

ಈ ಎರಡು ಡ್ರೋನ್ ಗಳ ನೆರವಿನಿಂದ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿಸಿಕೊಂಡು ಮಿರಾಜ್ ಯುದ್ಧ ವಿಮಾನಗಳು ಮೊದಲೇ ಖಚಿತಪಡಿಸಿದ ಟಾರ್ಗೆಟ್ ಗಳ ಮೇಲೆ ದಾಳಿ ಮಾಡಿ ವಾಪಸ್ಸಾಗಿವೆ. ಒಟ್ಟಿನಲ್ಲಿ ಈ ದಾಳಿಯಲ್ಲಿ ಪ್ರತಿಯೊಂದು ಚಿಕ್ಕ ಚಿಕ್ಕ ಅಂಶಗಳು ಸಹ ಬಹಳ ಮಹತ್ವವನ್ನು ಪಡೆದುಕೊಂಡಿರುತ್ತವೆ. ಅದರಲ್ಲಿ ಈ ಎರಡು ಡ್ರೋನ್ ಗಳ ಪಾತ್ರಗಳು ಸಹ ಬಹಳ ಪ್ರಮುಖವೆನಿಸುತ್ತದೆ. ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಕರುನಾಡ ವಾಣಿ ಪೇಜನ್ನು ಲೈಕ್ ಮಾಡುವ ಮೂಲಕ ಫಾಲೋ ಮಾಡಿ.

Post Author: Ravi Yadav