ಭಾರತದ ವಿರುದ್ಧ ಪ್ರತೀಕಾರಕ್ಕೆ ಬಂದ ಗೂಢಚಾರಿ ಫಿನಿಶ್: ಮತ್ತೊಂದು ಬೇಟೆಯಾಡಿದ ಸೇನೆ

ಭಾರತೀಯ ವಾಯು ಸೇನೆಯ ಬಲಿಷ್ಠ ಯುದ್ಧವಿಮಾನ ವಾದ ಮಿರಾಜ್ 2000 ನಡೆಸಿದ ವಾಯು ದಾಳಿಗೆ ಶತ್ರು ರಾಷ್ಟ್ರವಾದ ಪಾಕಿಸ್ತಾನವು ನಡುಗಿ ಹೋಗಿದೆ. ಹಲವಾರು ವರ್ಷಗಳ ನಂತರ ಯಾರೂ ಊಹಿಸದ ರೀತಿಯಲ್ಲಿ ತಡರಾತ್ರಿ ಪಾಕ್ ಆಕ್ರಮಿತ ಕಾಶ್ಮೀರದ ಗಡಿ ದಾಟಿ ಉಗ್ರರ ತಾಣಗಳನ್ನು ಗುರಿಯನ್ನಾಗಿಸಿ ನೂರಾರು ಉಗ್ರರ ಬೇಟೆಯಾಡಿ ಭಾರತೀಯ ಸೇನೆಯು ತನ್ನ ತಾಕತ್ತನ್ನು ಇಡೀ ವಿಶ್ವಕ್ಕೆ ಪ್ರದರ್ಶಿಸಿತ್ತು.

ಪಾಕಿಸ್ತಾನದ ಕೈಯಲ್ಲಿ ಏನು ಸಾಧ್ಯವಾಗದೆ ಇದ್ದರೂ ಸದಾ ಭಾರತದ ಜೊತೆ ಕಾಲು ಕೆರೆದು ಜಗಳಕ್ಕೆ ಬರುವ ಪಾಕಿಸ್ತಾನಕ್ಕೆ ನರೇಂದ್ರ ಮೋದಿ ರವರ ಕೆಲವೇ ಕೆಲವು ನಿರ್ಧಾರಗಳು ತಕ್ಕ ಉತ್ತರವನ್ನು ನೀಡಿದ್ದವು. ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಕಾರಣ ಸರಿಯಾದ ಸಮಯಕ್ಕೆ ಕಾದು ಕುಳಿತಿದ್ದ ಸೇನೆಯು ಇದ್ದಕ್ಕಿದ್ದ ಹಾಗೆ ಯಾರೂ ಊಹಿಸದ ರೀತಿಯಲ್ಲಿ ಪಾಕಿಸ್ತಾನದ ಉಗ್ರರನ್ನು ಫಿನಿಷ್ ಮಾಡಿ ವಾಪಸ್ ಆಗಿತ್ತು.

ಇದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತಷ್ಟೂ ಮುಖಭಂಗ ಎದುರಾಗಿತ್ತು. ಸದಾ ಭಾರತದ ವಿರುದ್ಧ ಕತ್ತಿ ಮಸೆಯುವ ಪಾಕಿಸ್ತಾನದ ಪೌರುಷ ಕೇವಲ ಹೇಳಿಕೆಗಳಲ್ಲಿ ಮಾತ್ರ ಇರುತ್ತದೆ ಎಂಬುದು ಎಲ್ಲರಿಗೂ ಈಗ ಅರ್ಥವಾಗಿರುತ್ತದೆ. ಭಾರತದಲ್ಲಿಯೇ ಕುಳಿತು ಪಾಕಿಸ್ತಾನದಲ್ಲಿರುವ ರೆಡಾರ್ ಗಳನ್ನು ನಿಷ್ಕ್ರಿಯಗೊಳಿಸಿ ಭಾರತೀಯ ವಾಯುಪಡೆಯು ಗಡಿ ದಾಟಿ ಉಗ್ರರ ದಮನ ಮಾಡಿ ವಾಪಸ್ ಆಗಿತ್ತು.

ಇಷ್ಟೆಲ್ಲಾ ವಿದ್ಯಮಾನಗಳು ತಡರಾತ್ರಿ ನಡೆದ ನಂತರ ಪಾಕಿಸ್ತಾನವು ಮುಂಜಾನೆಯಿಂದ ಈಗಾಗಲೇ ತನ್ನ ಹಲವು ಮುಖಗಳನ್ನು ತೋರಿಸಿದೆ. ಮೊದಲು ದಾಳಿಯ ನಡೆದಿಲ್ಲ ಎಂದ ಪಾಕಿಸ್ತಾನ ತದನಂತರ ದಾಳಿ ನಡೆದಿದೆ, ಆದರೆ ಅದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಿಕೆ ನೀಡಿತ್ತು. ಅದಾದ ಕೆಲವೇ ಗಂಟೆಗಳಲ್ಲಿ ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಭಾರತದ ವಿರುದ್ಧ ಕೇಸನ್ನು ದಾಖಲಿಸುವ ಉತ್ಸಾಹವನ್ನು ತೋರಿತ್ತು.

ಆದರೆ ಭಾರತವೂ ಇದಕ್ಕೆ ಸೊಪ್ಪು ಹಾಕದ ಕಾರಣ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತೇನೆ ಎಂದು ಸಭೆಗಳ ಮೇಲೆ ಸಭೆಗಳನ್ನು ನಡೆಸಿದ ಇಮ್ರಾನ್ ಖಾನ್ ರವರು ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ದುಸ್ಸಾಹಸವನ್ನು ಮಾಡಲು ಹೊರಟಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಆದರೆ ಪ್ರತೀಕಾರಕ್ಕೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ.ಪ್ರತೀಕಾರದ ಯೋಜನೆಗೆ ಸೇನೆಯು ಅಡ್ಡಗಾಲು ಹಾಕಿದೆ ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ಇದ್ದಕ್ಕಿದ್ದ ಹಾಗೆ ಮಾನವ ರಹಿತ ಗೂಢಚಾರಿ ಡ್ರೋನ್ ಭಾರತದ ಗಡಿ ದಾಟಿ ಗುಜರಾತ್ ರಾಜ್ಯದ ಕಛ್ ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ಮಾಹಿತಿ ಹೊರಬಿದ್ದಿದೆ. ಗುಜರಾತಿನ ಕಛ್ ಪ್ರದೇಶಕ್ಕೆ ನುಗ್ಗಿದ ಪಾಕಿಸ್ತಾನದ ಡ್ರೋನ್ ಅನ್ನು ಭಾರತೀಯ ಸೇನೆಯು ಕೆಲವೇ ಕೆಲವು ನಿಮಿಷಗಳಲ್ಲಿ ಹೊಡೆದುರುಳಿಸಿದೆ. ಪಾಕ್ ನ ಬೇಹುಗಾರಿಕೆ ಡ್ರೋನ್ ಇದು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು ಬಹುಶಹ ಭಾರತದ ಚಲನವಲನಗಳನ್ನು ಗಮನಿಸಲು ಇದನ್ನು ಕಳುಹಿಸಿರಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ.

ಆದರೆ ಡ್ರೋನ್ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಭಾರತೀಯ ಸೇನೆ ನಿಖರ ಗುರಿ ಇಟ್ಟು ಹೊಡೆದು ಉರುಳಿಸಿದ್ದಾರೆ. ತದನಂತರ ತನಿಖೆ ಮುಂದುವರೆದಿದ್ದು ಪಾಕಿಸ್ತಾನ ಯಾವ ಕಾರಣಕ್ಕಾಗಿ ಡ್ರೋನ್ ಅನ್ನು ಕಳಿಸಿದೆ ಎಂಬ ಮಾಹಿತಿಯನ್ನು ಹೊರ ತೆರೆಯಲು ಪ್ರಯತ್ನಪಡುತ್ತಿದೆ.