ಲೋಕಸಭಾ ಅಖಾಡಕ್ಕೆ ರಕ್ಷಣಾ ಸಚಿವೆ: ಕರ್ನಾಟಕದಿಂದ ಸ್ಪರ್ಧೆ !! ಯಾವ ಕ್ಷೇತ್ರ ಗೊತ್ತಾ??

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಎಂಬ ಹೆಸರು ಕೇಳಿದ ತಕ್ಷಣ ಪ್ರತಿಯೊಬ್ಬರಲ್ಲೂ ಇನ್ನಿಲ್ಲದ ಹುಮ್ಮಸ್ಸು ಮೂಡುತ್ತದೆ. ನಿರ್ಮಲ ಸೀತಾರಾಮನ್ ರವರು ರಕ್ಷಣಾ ಸಚಿವೆ ಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಕೆಲವು ಕುತಂತ್ರಿಗಳು ಇವರ ಕೈಯಲ್ಲಿ ದೇಶದ ರಕ್ಷಣೆ ಸಾಧ್ಯವಿಲ್ಲ ಎಂಬ ಮಾತನ್ನು ಆಡಿದ್ದರು ಆದರೆ ಯಾರೂ ಊಹಿಸದ ರೀತಿಯಲ್ಲಿ ದೇಶದ ರಕ್ಷಣಾ ವ್ಯವಸ್ಥೆಯನ್ನು ಬಹಳ ಅತ್ಯುತ್ತಮವಾಗಿ ಮುನ್ನಡೆಸಿ ಇಂದು ವಿಶ್ವಕ್ಕೆ ಮಾದರಿಯಾಗಿದ್ದಾರೆ.

ವಿರೋಧ ಪಕ್ಷಗಳ ಹಲವಾರು ಬೆಂಬಲಿಗರು ಹಾಗೂ ನಾಯಕರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರವರ ಆಡಳಿತ ಕಂಡು ಬೆರಗಾಗಿ, ಇವರ ಆಡಳಿತದ ಕುರಿತು ಯಾರು ಬೆಟ್ಟು ಮಾಡಿ ತೋರಿಸುವುದಿಲ್ಲ. ಅಷ್ಟರ ಮಟ್ಟಿಗೆ ವಿಶ್ವದಲ್ಲಿಯೇ ನಾಲ್ಕನೇ ಅತಿದೊಡ್ಡ ಸೇನೆ ಯನ್ನು ಹೊಂದಿರುವ ಭಾರತದ ರಕ್ಷಣಾ ವ್ಯವಸ್ಥೆಯನ್ನು ಬಹಳ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಕೆಲವೇ ಕೆಲವು ವರ್ಷಗಳ ಹಿಂದೆ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡಿದ್ದ ನಿರ್ಮಲಾ ಸೀತಾರಾಮನ್ ರವರು ಇಂದು ಭಾರತದ ರಕ್ಷಣಾ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆದರೆ ಮೊದಲಿನಿಂದಲೂ ಚುನಾವಣೆಯಲ್ಲಿ ಗೆದ್ದು ಬಂದಿಲ್ಲ ಎಂಬ ಹಲವಾರು ಟೀಕೆಗಳನ್ನು ನಿರ್ಮಲಾ ಸೀತಾರಾಮನ್ ರವರು ಎದುರಿಸಿದ್ದರು. ರಾಜ್ಯಸಭೆಗೆ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿದ್ದರೂ ಸಹ ಯಾವುದೇ ಜನಮತ ಇವರನ್ನು ರಕ್ಷಣಾ ಸಚಿವೆಯನ್ನಾಯಾಗಿ ಮಾಡಿಲ್ಲ ಎಂಬ ಟೀಕೆಗಳು ಕೇಳಿ ಬರುತ್ತಿದ್ದವು. ಇನ್ನು ಮುಂದೆ ಈ ಟೀಕೆಗಳಿಗೂ ಸಹ ಯಾವುದೇ ಬಲವಿರುವುದಿಲ್ಲ ಏಕೆಂದರೆ ಹೆಮ್ಮೆಯ ರಕ್ಷಣಾ ಸಚಿವೆ ಯಾಗಿರುವ ನಿರ್ಮಲಾ ಸೀತಾರಾಮನ್ ರವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ರಾಜ್ಯ ಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ರವರು ಕರ್ನಾಟಕ ದಿಂದ ಸ್ಪರ್ಧಿಸಿ ಗೆದ್ದು ಬೀಗಲು ಸಿದ್ಧರಾಗಿದ್ದಾರೆ.  ಈ ಮಾತು ಬಿಜೆಪಿ ಪಕ್ಷದಲ್ಲಿ ಕೇಳಿ ಬರುತ್ತಿದ್ದಂತೆ, ಕರ್ನಾಟಕದ ಹಲವು ಸಂಸದರು ಹಾಗೂ ಬಿಜೆಪಿ ನಾಯಕರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರವರನ್ನು ಕರ್ನಾಟಕದಿಂದ ಕಣಕ್ಕಿಳಿಸಲು ನಮ್ಮ ಆಕ್ಷೇಪವಿಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹರವರು ಸಹ ಇದಕ್ಕೆ ಬೆಂಬಲ ಸೂಚಿಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಅಷ್ಟಕ್ಕೂ ಅವರು ಸ್ಪರ್ಧಿಸುವುದಾದರೆ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಗೊತ್ತಾ??

ಮೊದಲು ಕೇರಳದ ತಿರುವಂತನಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಶಶಿ ತರೂರ್ ರವರ ಎದುರಾಳಿಯಾಗಿ ನಿರ್ಮಲಾ ಸೀತಾರಾಮನ್ ರ್ ಅವರನ್ನು ಕಣಕ್ಕಿಳಿಸಲು ರಣತಂತ್ರ ರೂಪಿಸಲಾಗಿತ್ತು ಆದರೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಒಬ್ಬರು ಖ್ಯಾತನಾಮರ ಅವಶ್ಯಕತೆ ಇರುವ ಕಾರಣ ನಿರ್ಮಲಾ ಸೀತಾರಾಮನ್ ರವರು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಸ್ಪರ್ಧಿಸಬೇಕು ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಈಗಾಗಲೆ 2 ಕ್ಷೇತ್ರಗಳನ್ನು ಆಯ್ಕೆ ಮಾಡಿದಂತೆ ಕಾಣುತ್ತದೆ.

ಈ ಬಾರಿ ಹಲವಾರು ಹಿರಿಯ ನಾಯಕರ ಸ್ಥಾನಪಲ್ಲಟ ಖಚಿತವಾಗಿದ್ದು, ಮುಂಚೂಣಿಯಲ್ಲಿ ಸದಾನಂದ ಗೌಡರ ಹೆಸರು ಕೇಳಿ ಬರುತ್ತಿದೆ. ಸದಾನಂದ ಗೌಡರಿಗೆ ಕರಾವಳಿ ಭಾಗದಲ್ಲಿ ಟಿಕೆಟ್ ನೀಡುವ ಎಲ್ಲಾ ಮುನ್ಸೂಚನೆಗಳು ಈಗಾಗಲೇ ಸಿಕ್ಕಿವೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಪ್ರಸ್ತುತ ಸಂಸದರಾಗಿ ಕಾರ್ಯನಿರ್ವಹಿಸುತ್ತಿರುವ ಸದಾನಂದ ಗೌಡರವರು ಪಕ್ಷದ ಮತ್ತಷ್ಟು ಬಲವರ್ಧನೆಗಾಗಿ ಕರಾವಳಿ ಭಾಗದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಇನ್ನು ನಮ್ಮೆಲ್ಲರ ನೆಚ್ಚಿನ ಅನಂತ್ ಕುಮಾರ್ ಅವರ ನಿಧನದಿಂದ ತೆರವಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ನಿರ್ಮಲಾ ಸೀತಾರಾಮನ್ ರವರು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಆದರೆ ಈ ಎರಡು ಕ್ಷೇತ್ರಗಳಲ್ಲಿ ಯಾವ ಕ್ಷೇತ್ರದಿಂದ ನಿರ್ಮಲಾ ಸೀತಾರಾಮನ್ ರವರು ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಎಲ್ಲಾ ನಿರ್ಣಯ ಈಗ ಬಿಎಸ್ ಯಡಿಯೂರಪ್ಪನವರ ಕೈಯಲ್ಲಿ ಇದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಒಂದು ವೇಳೆ ನಿರ್ಮಲಾ ಸೀತಾರಾಮನ್ ರವರು ಬೆಂಗಳೂರಿಂದ ಸ್ಪರ್ಧಿಸಿದಲ್ಲಿ, ಕನ್ನಡಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಲಿದ್ದಾರೆ ಎಂಬ ವಿಶ್ವಾಸ ಎಲ್ಲರಲ್ಲೂ ಮನೆ ಮಾಡಿದೆ.

Post Author: Ravi Yadav