ಗಡಿಯಲ್ಲಿ ಆರಂಭವಾದ ಗುಂಡುಗಳ ಸುರಿಮಳೆ: ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ ಭಾರತೀಯ ಸೇನೆ

ಪಾಕಿಸ್ತಾನವು ಭಾರತವನ್ನು ಯುದ್ಧಕ್ಕೆ ಪ್ರಚೋದಿಸಿ ಸುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ. ಪುಲ್ವಾಮ ದಾಳಿಯ ನಂತರ ಗಡಿಯಲ್ಲಿ ಈಗಾಗಲೇ ಹೈ ಅಲರ್ಟ್ ಘೋಷಿ ಸಿ ಭಾರತದಿಂದ ದಾಳಿಯನ್ನು ಎದುರು ನೋಡುತ್ತಿರುವ ಪಾಪಿಸ್ತಾನದ ಕುತಂತ್ರ ನೀತಿ ನಿಲ್ಲುತ್ತಿಲ್ಲ. ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿರುವುದರಿಂದ ಹಲವಾರು ದೇಶಗಳು ಈಗಾಗಲೇ ಇದರ ಬಗ್ಗೆ ಆತಂಕವನ್ನು ಹೊರಹಾಕಿದೆ. ನಿನ್ನೆಯಷ್ಟೇ ಅಮೆರಿಕದ ಅಧ್ಯಕ್ಷರು ಸಹ ಈ ರೀತಿಯ ವಾತಾವರಣಗಳು ಸೃಷ್ಟಿಯಾಗಬಾರದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಇಷ್ಟೆಲ್ಲಾ ನಡೆಯುತ್ತಿದ್ದರೂ ಪಾಕಿಸ್ತಾನಕ್ಕೆ ತನ್ನ ಕುತಂತ್ರ ಬುದ್ಧಿಯನ್ನು ಬಿಡಲು ಸಾಧ್ಯವಾಗುತ್ತಿಲ್ಲ.

ಸದಾ ಭಾರತದ ಜೊತೆ ಕಾಲು ಕೆರೆದು ಜಗಳಕ್ಕೆ ನಿಲ್ಲುವ ಪಾಕಿಸ್ತಾನಿಯರು ಯಾವ ಘನ ಕಾರ್ಯ ಕ್ಕಾಗಿ ಈ ರೀತಿಯ ಕೆಲಸ ಮಾಡುತ್ತಿದ್ದಾರೆ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಭಾರತವನ್ನು ಯುದ್ಧಕ್ಕೆ ಪ್ರಚೋದಿಸುವ ಮುನ್ನ ತಮ್ಮ ತಾಕತ್ತು ಏನೆಂದು ತಿಳಿದುಕೊಳ್ಳಬೇಕು. ಒಂದು ವೇಳೆ ಭಾರತೀಯ ಸೇನೆಯು ಪಾಕಿಸ್ತಾನದ ಮೇಲೆ ಮುಗಿಬಿದ್ದ ಲ್ಲಿ ಪಾಕಿಸ್ತಾನ ಇತಿಹಾಸದ ಪುಟ ಸೇರುವುದು ಖಚಿತ. ಈಗ ಮತ್ತೊಮ್ಮೆ ಗಡಿಯಲ್ಲಿ ಗುಂಡುಗಳ ಸುರಿಮಳೆ ಆರಂಭವಾಗಿದ್ದು ಯುದ್ಧದ ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ

ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ಪುಲ್ವಾಮಾ ದಾಳಿಯ ನಂತರ ಪಾಕಿಸ್ತಾನವು ಸತತ ಐದನೇ ದಿನ ತನ್ನ ಅಪ್ರಚೋದಿತ ದಾಳಿಯನ್ನು ಮುಂದುವರೆಸಿದೆ. ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿರುವ ಕಾರಣ ಪಾಕಿಸ್ತಾನವು ಯುದ್ಧಕ್ಕೆ ಸನ್ನದ್ಧವಾಗಿ ನಿಂತಿದೆ, ಇದೇ ಕಾರಣದಿಂದ ಪಾಕಿಸ್ತಾನ ದೇಶವು ಭಾರತದ ಚೆಕ್ ಪೋಸ್ಟ್ ಗಳ ಮೇಲೆ ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ಗುಂಡುಗಳನ್ನು ಹಾರಿಸಿದೆ.

ಭಾರತದ ಉತ್ತರ ನೋಡಿ ಶಾಕ್ ಆದ ಪಾಕಿಸ್ತಾನ !!

ಗಡಿಯಲ್ಲಿ ನೌಶೇರಾ ಮತ್ತು ರಜೌರಿ ಸೆಕ್ಟರ್ ಗಳ ಬಳಿ ಪಾಕಿಸ್ತಾನದ ಅಪ್ರಚೋದಿತ ದಾಳಿ ಗೆ ಭಾರತೀಯ ಸೇನೆಯು ತಕ್ಕ ಉತ್ತರವನ್ನು ನೀಡಿದ್ದು ಪಾಕಿಸ್ತಾನದ ಚೆಕ್ ಪೋಸ್ಟ್ ಗಳ ಮೇಲೆ ಭಾರಿ ಗುಂಡುಗಳ ಸುರಿಮಳೆಯನ್ನೇ ಸುರಿಸಿದೆ. ಭಾರತದ ಗುಂಡುಗಳ ಸದ್ದು ಪಾಕಿಸ್ತಾನವನ್ನು ನಡುಗಿ ಸಿದ್ದು, ಭಾರತ ಪ್ರತ್ಯುತ್ತರ ನೀಡಿದ ರೀತಿ ನೋಡಿ ಪಾಕಿಸ್ತಾನವು ತನ್ನ ಅಪ್ರಚೋದಿತ ದಾಳಿಯನ್ನು ನಿಲ್ಲಿಸಿ ಹಿಂದೆ ಸರಿದಿದೆ.

Post Author: Ravi Yadav