ಕರ್ನಾಟಕಕ್ಕೆ ಬುಲೆಟ್ ಟ್ರೈನ್ ಘೋಷಿಸಿದ ಪಿಯೂಷ್ ಗೋಯಲ್: ಯಾವ ಯಾವ ಜಿಲ್ಲೆಗಳಿಗೆ ಗೊತ್ತಾ??

ಭಾರತವು ರೈಲ್ವೆ ಇಲಾಖೆಯಲ್ಲಿ 60 ವರ್ಷಗಳಿಂದ ಮಾಡಿರದ ಸಾಧನೆಯನ್ನು ಕೇವಲ ನರೇಂದ್ರ ಮೋದಿರವರ ಸರ್ಕಾರ ಐದು ವರ್ಷಗಳಲ್ಲಿ ಮಾಡಿ ಮುಗಿಸುತ್ತದೆ. ಹಿಂದೆಂದೂ ಕಾಣದಂತಹ ಅಭಿವೃದ್ಧಿ ಕಾಣುತ್ತಿರುವ ರೈಲ್ವೆ ಇಲಾಖೆಯು ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ಭರ್ಜರಿ ಹೈ ಸ್ಪೀಡ್ ರೈಲು ಗಳನ್ನು ಉತ್ಪಾದನೆ ಗೊಳಿಸುತ್ತಿದೆ ಹಾಗೂ ಕಡಿಮೆ ದರದಲ್ಲಿ ಜನರಿಗೆ ಅನುಕೂಲವಾಗುವಂತೆ ದರವನ್ನು ನಿಗದಿಗೊಳಿಸಲಾಗಿದೆ.

ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ ಕೆಲವು ದಿನಗಳ ಹಿಂದಷ್ಟೇ ಕರ್ನಾಟಕಕ್ಕೆ ಬಂದಿದ್ದ ಪಿಯುಶ್ ಗೋಯಲ್ ರವರು ಬೆಂಗಳೂರು ಸಬರ್ಬನ್ ರೈಲಿನ ಯೋಜನೆಗೆ ಅಸ್ತು ಎಂದು ಮಂಗಳೂರಿಗರಿಗೆ ಹೈ ಸ್ಪೀಡ್ ಟ್ರೈನ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಇನ್ನೂ ಹತ್ತು ಹಲವಾರು ಯೋಜನೆಗಳು ಈಗಾಗಲೇ ಕರ್ನಾಟಕ ರಾಜ್ಯಕ್ಕೆ ಉಡುಗೊರೆಯನ್ನಾಗಿ ಪಿಯುಶ್ ಗೋಯಲ್ ರವರು ನೀಡಿದ್ದಾರೆ.

ಈಗ ಮತ್ತೊಮ್ಮೆ ಕರ್ನಾಟಕಕ್ಕೆ ಬೃಹತ್ ಉಡುಗೊರೆ ನೀಡಿರುವ ಪಿಯುಷ್ ಗೊಯಲ್ ರವರಿಗೆ ಕನ್ನಡಿಗರು ಮತ್ತೊಮ್ಮೆ ಧನ್ಯವಾದ ತಿಳಿಸುವ ಕಾಲ ಬಂದಿದೆ.ಅಷ್ಟಕ್ಕೂ ಆ ಬೃಹತ್ ಉಡುಗೊರೆ ಯಾವುದು ಗೊತ್ತಾ? ಮತ್ತು ಯಾವ ಯಾವ ಜಿಲ್ಲೆಗಳಿಗೆ ಈ ಉಡುಗೊರೆ ದೊರಕಲಿದೆ ಗೊತ್ತಾ?

ಅಹಮದಾಬಾದ್ ಹಾಗೂ ಮುಂಬೈ ನಡುವೆ ಬುಲೆಟ್ ಮಾರ್ಗದ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಇದರ ಮುಂದುವರೆದ ಭಾಗವಾಗಿ ಇಡೀ ದೇಶದಲ್ಲಿ ಇನ್ನು ಆರು ಬುಲೆಟ್ ರೈಲಿನ ಮಾರ್ಗಗಳಿಗೆ ರೈಲ್ವೆ ಇಲಾಖೆ ಅಸ್ತು ಎಂದಿದೆ. ಅದರಲ್ಲಿ ಕರ್ನಾಟಕದ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ ಪಿಯುಷ್ ಗೋಯಲ್ ರವರು ಮೈಸೂರು – ಬೆಂಗಳೂರು – ಚೆನ್ನೈ ಮಾರ್ಗ ಸೇರಿಸಿದ್ದಾರೆ. ಈ ಮೂಲಕ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಈ ಮೂರು ಜಿಲ್ಲೆಗಳ ನಡುವೆಯೂ ಬುಲೆಟ್ ರೈಲು ಸಂಚರಿಸಲಿದೆ. ಅಂದಾಜು 10 ಲಕ್ಷ ಕೋಟಿ ಹಣದ ಯೋಜನೆ ಇದಾಗಿದ್ದು ಕನ್ನಡಿಗರು ಬಂಪರ್ ಹೊಡೆದಿದ್ದಾರೆ.

Post Author: Ravi Yadav