ಬಿಗ್ ಬ್ರೇಕಿಂಗ್:ಕ್ಷೇತ್ರದ ಮೇಲೆ ಆಸೆ ಇಟ್ಟಿಕೊಂಡಿದ್ದ ಮೈತ್ರಿ ಗೆ ಶಾಕ್ ನೀಡಿದ ಚಾಣಕ್ಯ. ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಅಭ್ಯರ್ಥಿ ಫಿಕ್ಸ್ ??

ಬಿಗ್ ಬ್ರೇಕಿಂಗ್:ಕ್ಷೇತ್ರದ ಮೇಲೆ ಆಸೆ ಇಟ್ಟಿಕೊಂಡಿದ್ದ ಮೈತ್ರಿ ಗೆ ಶಾಕ್ ನೀಡಿದ ಚಾಣಕ್ಯ. ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಅಭ್ಯರ್ಥಿ ಫಿಕ್ಸ್ ??

2019 ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರತಿಕ್ಷಣವೂ ಕುತೂಹಲವನ್ನು ಕೆರಳಿಸುತ್ತಾ ಮುಂದೆ ಸಾಗುತ್ತಿದೆ. ಇಪ್ಪತ್ತಕ್ಕೂ ಹೆಚ್ಚು ಪ್ರಾದೇಶಿಕ ಪಕ್ಷಗಳು ಹಾಗೂ ರಾಷ್ಟ್ರೀಯ ಪಕ್ಷ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿರುವ ಕಾರಣ ಪ್ರತಿಯೊಂದು ಕ್ಷೇತ್ರಗಳು ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇದಕ್ಕೆ ಬಿಜೆಪಿ ಪಕ್ಷದ ಭದ್ರಕೋಟೆ ಎನಿಸಿಕೊಂಡಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಹೊರತಲ್ಲ.

ಬಿಜೆಪಿ ಪಕ್ಷದ ಭದ್ರಕೋಟೆ ಎನಿಸಿಕೊಂಡಿರುವ ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಹೇಗಾದರೂ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಇನ್ನಿಲ್ಲದ ಪ್ರಯತ್ನ ವನ್ನು ಮಾಡುತ್ತಿದ್ದವು. ಇದರ ನಡುವೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಹೊಸ ಸಮಗ್ರ ನಾಯಕನ ಅಗತ್ಯವಿದೆ ಎಂಬ ಕೂಗು  ಜನರಿಂದ ಕೇಳಿಬಂದಿತ್ತು. ಆದರೆ ಈ ಎಲ್ಲಾ ಚರ್ಚೆಗಳಿಗೆ ತೆರೆ ಎಳೆಯುವ ಹೆಜ್ಜೆಯನ್ನು ಅಮಿತ್ ಶಾ ರವರು ಇಟ್ಟಂತೆ ಕಾಣುತ್ತಿದೆ. ಈ ಒಂದು ಹೆಜ್ಜೆಯಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಕನಸು ಮತ್ತಷ್ಟು ಕಗ್ಗಂಟಾಗಿದೆ.

ಅಷ್ಟಕ್ಕೂ ನಡೆದಿದ್ದೇನು ಗೊತ್ತಾ?? ಅಮಿತ್ ಶಾ ರವರ ಆಸಕ್ತಿ ಯಾರ ಮೇಲೆ ಇದೆ ಗೊತ್ತಾ??

ಉಡುಪಿ ಚಿಕ್ಕಮಗಳೂರು ಜಿಲ್ಲೆಗೆ ಸಮರ್ಥ ನಾಯಕನ ಅಗತ್ಯವಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಹಲವಾರು ಸಂಭಾವ್ಯ ಅಭ್ಯರ್ಥಿಗಳ ಹೆಸರು ಬಿಜೆಪಿ ಪಕ್ಷದಿಂದ ಕೇಳಿ ಬಂದರೂ ಸಹ ಒಬ್ಬ ನಾಯಕನ ಹೆಸರು ಬಾರಿ ಜೋರಾಗಿ ಸದ್ದು ಮಾಡುತ್ತಿದೆ. ಇದಕ್ಕೆ ಮತ್ತಷ್ಟು ಪೂರಕ ಎಂಬಂತೆ ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದಲ್ಲಿ ತನ್ನ ಕ್ರಿಯಾಶೀಲ ವ್ಯಕ್ತಿತ್ವ, ಪಕ್ಷ ಸಂಘಟನೆ, ಹೋರಾಟ ಮನೋಭಾವದಿಂದ ತನ್ನದೇ ಆದ ವರ್ಚಸ್ಸನ್ನು ಹೊಂದಿರುವ ಶ್ರೀ ಯಶಪಾಲ್ ಸುವರ್ಣ ರವರು ಇದ್ದಕ್ಕಿದ್ದ ಹಾಗೆ ಅಮಿತ್ ಷಾ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದಾರೆ.

ಹೌದು, ನಿನ್ನೆ ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣರು ಹಾಗೂ ಬಿಜೆಪಿ ಪಕ್ಷದ ಚಾಣಕ್ಯ ಎಂದೇ ಖ್ಯಾತರಾಗಿರುವ ಅಮಿತ್ ಶಾ ರವರು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಬೆಳವಣಿಗೆ ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದಲ್ಲಿ ತೀವ್ರ ಸಂಚಲನವನ್ನು ಉಂಟು ಮಾಡಿದೆ. ಇದನ್ನು ಕಂಡ ಕೆಲವು ರಾಜಕೀಯ ಪಂಡಿತರು ಯಶಪಾಲ್ ಸುವರ್ಣ ರವರ ಕ್ರಿಯಾಶೀಲತೆ, ಹೋರಾಟ ಮನೋಭಾವ ಹಾಗೂ ಕಾರ್ಯಕರ್ತರ ಸಂಘಟನೆ ಎಲ್ಲಾ ಕೆಲಸಗಳಿಗೂ ಪ್ರತಿಫಲ ಸಿಕ್ಕಂತೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಹಾಗೂ ಈ ಬಾರಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಯಶಪಾಲ್ ಸುವರ್ಣ ಅವರ ಆಯ್ಕೆ ಬಹುತೇಕ ಖಚಿತವಾಗಿದೆ.

ಕಳೆದ ಬಾರಿಯೂ ಸಹ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅಮಿತ್ ಶಾ ರವರ ನೇತೃತ್ವದಲ್ಲಿ ನಡೆದಿದ್ದ ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರ ಸಮಾವೇಶದ ಸಂಚಾಲಕರ ಜವಾಬ್ದಾರಿಯನ್ನು ತನ್ನ ಹೆಗಲಮೇಲೆ ಹೊರಿಸಿಕೊಂಡು ಯಶಸ್ವಿಯಾಗಿದ್ದ ಯಶಪಾಲ್ ಸುವರ್ಣ ರವರ ನಾಯಕತ್ವದ ಗುಣವನ್ನು ಅಮಿತ್ ಷಾ ಅವರು ಅಂದೇ ಗುರುತಿಸಿ ಮುಕ್ತಕಂಠದಿಂದ ಹೊಗಳಿದ್ದರು.ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸಿದರೆ ಈ ಬಾರಿ ಉಡುಪಿ ಹಾಗೂ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಒಬ್ಬ ಯುವ ಸಂಸದರು ಸಂಸತ್ತಿಗೆ ಕಾಲಿಡಲು ಸಜ್ಜಾಗುತ್ತಿದ್ದಾರೆ ಎಂದೆನಿಸುತ್ತದೆ.