ಕರ್ನಾಟಕಕ್ಕೆ 2 ವಂದೇ ಭಾರತ್ ರೈಲು: ಬಂಪರ್ ಘೋಷಿಸಿದ ಪಿಯೂಷ್ ಗೋಯಲ್

ಕರ್ನಾಟಕಕ್ಕೆ 2 ವಂದೇ ಭಾರತ್ ರೈಲು: ಬಂಪರ್ ಘೋಷಿಸಿದ ಪಿಯೂಷ್ ಗೋಯಲ್

ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ವಂದೇ ಭಾರತ್ ರೈಲು ಭಾರಿ ಸದ್ದು ಮಾಡುತ್ತಿದೆ. ಗಂಟೆಗೆ 180 ಕಿಲೋಮೀಟರ್ ಸ್ಪೀಡಿನಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುವ ವಂದೇ ಭಾರತ್ ರೈಲು ಕೆಲವು ದಿನಗಳ ಹಿಂದಷ್ಟೇ ಸಂಚಾರ ಆರಂಭಿಸಿತ್ತು. ಈ ಹೊಸ ರೈಲನ್ನು ಕರ್ನಾಟಕಕ್ಕೆ ಉಡುಗೊರೆಯನ್ನಾಗಿ ನೀಡಿದ್ದಾರೆ ಪಿಯೂಷ್ ಗೋಯಲ್.

ಹೌದು, ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂದು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ರವರು ಕರ್ನಾಟಕ ಪ್ರವಾಸ ಕೈಗೊಂಡಿದ್ದರು. ಮುಖ್ಯಮಂತ್ರಿಗಳನ್ನು ಭೇಟಿಯಾದ ಸಮಯದಲ್ಲಿ ಕರ್ನಾಟಕದ ಪ್ರತಿಯೊಂದು ರೈಲ್ವೇ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ಒದಗಿಸುತ್ತೇವೆ ಎಂಬ ಭರವಸೆ ನೀಡಿ ಕನ್ನಡಿಗರಿಗೆ ಶುಭ ಸುದ್ದಿ ನೀಡಿದ ಪಿಯೂಷ್ ಗೋಯಲ್ ರವರು ಮತ್ತೊಂದು ಘೋಷಣೆ ಮಾಡಿದ್ದಾರೆ.

ಅಷ್ಟಕ್ಕೂ ಘೋಷಣೆ ಏನು ಗೊತ್ತಾ?

ಕನ್ನಡಿಗರಿಗೆ ಎರಡು ವಂದೇ ಭಾರತ್ ರೈಲನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ ಪಿಯುಷ್ ಗೊಯಲ್. ಮೊದಲು ಮಂಗಳೂರು ಹಾಗೂ ಚೆನ್ನೈ ಮಾರ್ಗಗಳ ನಡುವೆ ವಂದೇ ಭಾರತ್ ರೈಲು ಇನ್ನು ಕೆಲವೇ ಕೆಲವು ದಿನಗಳಲ್ಲಿ ಸಂಚರಿಸಲಿದೆ. ಇನ್ನು ಮತ್ತೊಂದು ರೈಲು ಮಂಗಳೂರು ಹೈದರಾಬಾದ್ ನಡುವೆ ಸಂಚರಿಸಲಿದ್ದು, ಅದು ಸಹ ಇನ್ನು ಕೆಲವೇ ಕೆಲವು ದಿನಗಳಲ್ಲಿ ಸಂಚಾರವನ್ನು ಆರಂಭಿಸಲಿದೆ.

ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸಲು ಈ ರೈಲು ಬಳಸಲಾಗುತ್ತದೆ ಎಂಬ ಮಾಹಿತಿ ದೊರಕಿದ್ದು ಮಂಗಳೂರು ಹೈದರಾಬಾದ್ ಹಾಗೂ ಮಂಗಳೂರು ಚೆನ್ನೈ ನಡುವಿನ ಈ ಓಡಾಟ ಹಲವಾರು ಸಾಮಾನ್ಯ ಜನರಿಗೆ ಬಹಳ ಸಹಕಾರಿಯಾಗಲಿದೆ. ಸಂಪೂರ್ಣ ಹವಾ ನಿಯಂತ್ರಣ ವಿರುವ ಈ ರೈಲು ಇನ್ನು ಕೆಲವೇ ಕೆಲವು ದಿನಗಳಲ್ಲಿ ಕರ್ನಾಟಕದಲ್ಲಿ ತನ್ನ ಆರ್ಭಟವನ್ನು ಆರಂಭಿಸಲಿದೆ. ಯೋಜನೆ ಘೋಷಿಸಿ ದಕ್ಕಾಗಿ ಪಿಯೂಷ್ ಗೋಯಲ್ ರವರಿಗೆ ಕನ್ನಡಿಗರ ಪರವಾಗಿ ವಂದನೆಗಳು ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ ಬೆಂಬಲಿಸಿ.