ಘರ್ಜಿಸಿದ ಸೇನೆ: ಮತ್ತೆ ಇಬ್ಬರು ಉಗ್ರರು ಫಿನಿಶ್

ಘರ್ಜಿಸಿದ ಸೇನೆ: ಮತ್ತೆ ಇಬ್ಬರು ಉಗ್ರರು ಫಿನಿಶ್

ಪುಲ್ವಾಮ ದಾಳಿಗೆ ಭಾರತೀಯ ಸೇನೆಯು ಪ್ರತೀಕಾರ ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾದು ಕುಳಿತಿದೆ. ಇಂತಹ ಸಮಯದಲ್ಲಿ ಗಡಿಯಾಚೆ ನೆಲೆಯೂರಿರುವ ಉಗ್ರರನ್ನು ಮಟ್ಟ ಹಾಕುವ ಮುನ್ನ ದೇಶದೊಳಗೆ ಶಾಂತಿ ಕದಡುತ್ತಿರುವ ಉಗ್ರರನ್ನು ಮಟ್ಟ ಹಾಕುವುದು ಬಹಳ ಮುಖ್ಯವೆನಿಸಿದೆ. ಆದ ಕಾರಣದಿಂದಲೇ, ಉಗ್ರರ ಜಾಲವನ್ನು ಪತ್ತೆ ಮಾಡಲು ಭಾರತೀಯ ಸೇನೆಯು ಹೊರಟಿದೆ.

ಪುಲ್ವಾಮ ದಾಳಿಯ ಮಾಸ್ಟರ್ ಮೈಂಡ್ ಅನ್ನು ದಾಳಿ ನಡೆದ ಮೂರು ದಿನಗಳಲ್ಲಿ ಮುಗಿಸಿ ಸೇಡು ತೀರಿಸಿಕೊಂಡಿದ್ದ ಭಾರತೀಯ ಸೇನೆಯು ಇಷ್ಟಕ್ಕೆ ಸುಮ್ಮನಾಗದೆ, ಜೈಶ್-ಇ-ಮೊಹಮ್ಮದ್ಸಂ ಘಟನೆಯನ್ನು ಜಮ್ಮು ಹಾಗೂ ಕಾಶ್ಮೀರ ದಿಂದ ಕಿತ್ತು ಹಾಕಬೇಕೆಂದು ಪಣತೊಟ್ಟಿದೆ. ಉಗ್ರರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಮುಂದಾಲೋಚನೆ ಮಾಡದೆ ನೇರವಾಗಿ ಸೈನಿಕರು ದಾಳಿ ನಡೆಸಲು ಮುಂದಾಗಿದ್ದಾರೆ.

ಕೇಂದ್ರ ಸರ್ಕಾರವು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿರುವುದರಿಂದ ಯಾವುದೇ ಅಧಿಕಾರಿಗಳ ಒಪ್ಪಿಗೆಗಾಗಿ ಕಾಯದೆ ನೇರವಾಗಿ ಉಗ್ರರ ಮೇಲೆ ದಾಳಿ ಮಾಡಲು ಸೇನಾ ಪಡೆಗಳು ಹೊರಡುತ್ತೇವೆ. ಇದರ ಫಲವಾಗಿ ಇಂದು ಮತ್ತೊಮ್ಮೆ ಭರ್ಜರಿ ಎನ್ಕೌಂಟರ್ ನಡೆದಿದ್ದು ಭಾರತೀಯ ಸೈನಿಕರಿಗೆ ಒಂದು ಗಾಯವಾಗಿದೆ ಉಗ್ರರನ್ನು ಬೇಟೆಯಾಡಿ ವಾಪಸಾಗಿದ್ದಾರೆ.

ಹೌದು, ದಕ್ಷಿಣ ಕಾಶ್ಮೀರದಲ್ಲಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಭಾರತದ ಭದ್ರತಾ ಸಿಬ್ಬಂದಿಗೆ ಯಾವುದೇ ಪ್ರಾಣ ಹಾನಿ ಯಾಗಲಿ ಅಥವಾ ಗಾಯಗಳಾಗಲಿ ಆಗಿಲ್ಲ ಎಂಬ ಮಾಹಿತಿಯೂ ಹೊರಬಿದ್ದಿದೆ. ದಕ್ಷಿಣ ಕಾಶ್ಮೀರದ ಡಿಐಜಿ ಕುಮಾರ್ ರವರು ಈ ದಾಳಿಯನ್ನು ಖಚಿತಪಡಿಸಿದ್ದಾರೆ ಹಾಗೂ ಪರಿಸ್ಥಿತಿ ಇನ್ನು ಉದ್ವಿಗ್ನವಾಗಿದ್ದು ಸಾರ್ವಜನಿಕರು ಆ ಪ್ರದೇಶದಲ್ಲಿ ಅಳಬಾರದು ಎಂದು ಕೋರಿಕೊಂಡಿದ್ದಾರೆ.