ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡ ರಾಜನಾಥ ಸಿಂಗ್: ಸೇನೆಗಿನ್ನು ಸಂಪೂರ್ಣ ಭದ್ರತೆ

ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡ ರಾಜನಾಥ ಸಿಂಗ್: ಸೇನೆಗಿನ್ನು ಸಂಪೂರ್ಣ ಭದ್ರತೆ

ಪುಲ್ವಾಮಾ ದಾಳಿಯಿಂದ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ, ಸೈನಿಕರಿಗೆ ಇನ್ನು ಮುಂದೆ ಯಾವ ತೊಂದರೆಯೂ ಆಗಲಾರದ ರೀತಿ ಕೇಂದ್ರ ಸರ್ಕಾರ ಹಲವಾರು ಕಾನೂನು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ. ಬೆನ್ನ ಹಿಂದೆ ಬರುವ ಕುತಂತ್ರಿ ಉಗ್ರರನ್ನು ತಡೆಗಟ್ಟಲು ಇನ್ನೂ ಹಲವಾರು ಮಹತ್ವದ ನಿರ್ಧಾರಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲು ಯಾವುದೇ ಹಿಂದೇಟು ಹಾಕುವುದಿಲ್ಲ ಎಂಬುದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ.  ನಿನ್ನೆಯಷ್ಟೇ  ಸೈನಿಕರಿಗೆ ಹೆಗಲು ಕೊಟ್ಟಿದ್ದ ರಾಜನಾಥ್ ಸಿಂಗ್ ರವರು ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ.

ಪ್ರಜೆಗಳಿಗೆ ಯಾವುದೇ ತೊಂದರೆ ಆಗಬಾರದು ಎಂದು ಜಮ್ಮು ಹಾಗೂ ಕಾಶ್ಮೀರದಲ್ಲಿ ಸೇನಾ ತುಕಡಿಗಳು ಪ್ರಯಾಣಿಸುವಾಗ ನಾಗರಿಕರ ಪ್ರಯಾಣಕ್ಕೆ ಯಾವುದೇ ನಿರ್ಬಂಧವಿರಲಿಲ್ಲ. ಸೇನಾ ತುಕಡಿಗಳು ಹಾದುಹೋಗುವ ದಾರಿಗಳಲ್ಲಿ ಸಾಮಾನ್ಯ ಭದ್ರತೆ ಇಂದ ಕೂಡಿದ ತಪಾಸಣೆಗಳು ಮಾತ್ರ ಇರುತ್ತಿದ್ದವು. ಆದರೆ ಈ ಎಲ್ಲಾ ಭದ್ರತೆಗಳನ್ನು ಭೇದಿಸುವುದು ಬಹಳ ಸುಲಭದ ಕೆಲಸವಾಗಿತ್ತು, ಈ ಭದ್ರತೆಗಳನ್ನು ಮೀರಿ ಅಡ್ಡದಾರಿಯಿಂದ ಬಂದ ಉಗ್ರರು ಹಲವಾರು ಯೋಧರನ್ನು ಬಲಿತೆಗೆದುಕೊಂಡಿದ್ದಾರೆ.

ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರವು ಇನ್ನು ಮುಂದೆ ಜಮ್ಮು ಹಾಗೂ ಕಾಶ್ಮೀರದಲ್ಲಿ ಸೇನಾ ತುಕಡಿಗಳು ಪ್ರಯಾಣಿಸುವಾಗ ನಾಗರಿಕರ ಪ್ರಯಾಣಕ್ಕೆ ನಿರ್ಬಂಧ ಹೇರಲು ನಿರ್ಧರಿಸಿದೆ. ಹಾಗೂ ಈ ಮೂಲಕ ಇನ್ನು ಮುಂದೆ ಸೈನಿಕರ ವಾಹನಗಳು ತೆರಳುವಾಗ ರಸ್ತೆಯಲ್ಲಿ ಜನ ಸಾಮಾನ್ಯರು ಹಾಗೂ ಅವರ ವಾಹನಗಳಿಗೆ ಯಾವುದೇ ಅವಕಾಶವಿರುವುದಿಲ್ಲ. ಭಾರತೀಯ ಸೈನಿಕರಿಗೆ ಇನ್ನೂ ಸಂಪೂರ್ಣ ಭದ್ರತೆ ಜಮ್ಮು ಹಾಗೂ ಕಾಶ್ಮೀರ ದಲ್ಲಿ ಸಿಗಲಿದೆ.

ಅಂದರೆ ಸೇನಾ ತುಕಡಿಗಳು ತೆರಳುವಾಗ ಇನ್ನು ಮುಂದೆ ಜೀರೋ ಟ್ರಾಫಿಕ್ ಜಮ್ಮು-ಕಾಶ್ಮೀರದಲ್ಲಿ ಜಾರಿಗೆ ಬರಲಿದೆ. ಈ ಮೂಲಕ ಯಾವುದೇ ವಾಹನಗಳು ಅಥವಾ ಸಾಮಾನ್ಯ ಜನರಾಗಲಿ ಸೇನಾ ತುಕಡಿಗಳ ಸುತ್ತಮುತ್ತ ಓಡಾಡುವುದು ಸಹ ಅಸಾಧ್ಯವಾಗಲಿದೆ. ಕೇಂದ್ರ ಸರ್ಕಾರದ ಈ ನಡೆಗೆ ಬಾರಿ ಪ್ರಶಸ್ತಿಗಳು ವ್ಯಕ್ತವಾಗಿದ್ದು, ಇದನ್ನು ವಿರೋಧ ಪಕ್ಷಗಳು ಯಾವ ರೀತಿ ಸ್ವಾಗ ಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.