ಶುರುವಾಯಿತು ಉಗ್ರರ ಬೇಟೆ: ಪಾಕಿಸ್ತಾನದ ಕುತಂತ್ರ ನೀತಿ ಬಯಲು

ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಸಿಆರ್ಪಿಎಫ್ ವಾಹನದ ಮೇಲೆ ದಾಳಿ ಇಡೀ ದೇಶದ ಜನರನ್ನು ದುಃಖದಲ್ಲಿ ಮುಳುಗುವಂತೆ ಮಾಡಿದೆ. ಪ್ರತಿಯೊಬ್ಬ ರಕ್ತ ಇಂದು ಕುದಿಯುತ್ತಿದೆ ಪಾಕಿಸ್ತಾನದ ಕುತಂತ್ರ ನೀತಿಗೆ ತಕ್ಕ ಪಾಠ ಕಲಿಸಬೇಕು ಎಂದು ಸಾಮಾನ್ಯ ಜನರು ಸಹ ಒತ್ತಾಯ ಮಾಡುತ್ತಿದ್ದಾರೆ. ಇತ್ತ ಸೇನೆಯು ಭರ್ಜರಿ ಆಪರೇಷನ್ ನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಈಗಾಗಲೇ ಉಗ್ರರ ಬೇಟೆ ಆರಂಭಿಸಿದೆ.

ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಬೆನ್ನಲ್ಲೇ, ಅಖಾಡಕ್ಕಿಳಿದ ಸಿಆರ್ಪಿಎಫ್ ಯೋಧರು ಹಾಗೂ ರಾಷ್ಟ್ರೀಯ ತನಿಖಾ ದಳ ಈಗಾಗಲೇ ಏಳು ಮಂದಿ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ಆವಂತಿಪುರ ಸಮೀಪದಲ್ಲಿ ಏಳು ಮಂದಿ ವಶಕ್ಕೆ ಪಡೆದಿರುವ ಸೇನೆಯು ಉಗ್ರರಿಂದ ಬಹಳ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಸೇನೆಯು ಜೈಷ್ ಎ ಮೊಹಮ್ಮದ್ ಸಂಘಟನೆಯ ನಾಯಕನ  ನಾಯಕನನ್ನು ಹೊಡೆದುರುಳಿಸಲು ಸಿದ್ಧವಾಗಿ ನಿಂತಿದೆ.

ಇನ್ನು ಬಂಧಿಸಿರುವ 7 ಉಗ್ರರಿಂದ ಪಾಕಿಸ್ತಾನದ ಕುತಂತ್ರ ನೀತಿ ಬಯಲಾಗಿದೆ ಎಂಬುದು ತಿಳಿದುಬಂದಿದೆ. ದಾಳಿಯ ಸಂಪೂರ್ಣ ಯೋಜನೆಯನ್ನು ರೂಪಿಸಿದ್ದು ಪಾಕಿಸ್ತಾನದ ನಾಗರಿಕ ಎನ್ನಲಾಗುತ್ತಿದೆ. ಇನ್ನು ಈ ಪಾಕಿಸ್ತಾನದ ನಾಗರಿಕನ ಮೂಲವನ್ನು ಕೆದಕಿ ನೋಡಿದಾಗ ಆತನ ಜೈಷ್ ಎ ಮೊಹಮ್ಮದ್ ಸಂಘಟನೆಯ ಸದಸ್ಯ ಎಂಬುದು ಖಚಿತವಾಗಿದೆ. ಈ ಮೂಲಕ ಪಾಕಿಸ್ತಾನದಲ್ಲಿ ನೆಲೆಯೂರಿರುವ ಉಗ್ರರು ಈ ಕೃತ್ಯವನ್ನು  ಎಸೆದಿರುವುದು ಸಾಬೀತಾಗಿದೆ.

ಉಗ್ರ ಸಂಘಟನೆಯಲ್ಲಿ ಸಕ್ರಿಯರಾಗಿರುವ ಈ ವ್ಯಕ್ತಿ ದಕ್ಷಿಣ ಕಾಶ್ಮೀರದ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಎನ್ನುವ ಅಂಶ ಬಹಿರಂಗವಾಗಿದೆ. ಇದರಿಂದ ಭಾರತೀಯ ಸೇನೆಗೆ ಮತ್ತಷ್ಟು ಆಧಾರಗಳು ಸಿಕ್ಕಿದ್ದು ಪಾಕಿಸ್ತಾನವನ್ನು ಬೆರಳು ಮಾಡಿ ತೋರಿಸಿ ಹೊಡೆದುರುಳಿಸಲು ಮತ್ತಷ್ಟು ಆಧಾರಗಳು ಸೇರಿಕೊಂಡಿವೆ. ಇದೇ ರೀತಿ ಮುಂದುವರಿದರೆ ಗಡಿಯಲ್ಲಿ ನಿಂತಿರುವ 240 ಟ್ಯಾಂಕ್ಗಳು ಪಾಕಿಸ್ತಾನದ ಒಳನುಗ್ಗಿ ಒಂದು ದಿನದಲ್ಲಿ ಪಾಕಿಸ್ತಾನವನ್ನು ಸರ್ವನಾಶ ಮಾಡಿ ವಾಪಸಾಗುತ್ತದೆ ನೆನಪಿರಲಿ.

Post Author: Ravi Yadav