ಮತ್ತೊಂದು ಐತಿಹಾಸಿಕ ಆದೇಶ ಹೊರಡಿಸಿದ ರಕ್ಷಣಾ ಸಚಿವೆ: ಉಗ್ರರ ದಮನ ಖಚಿತ

ಮತ್ತೊಂದು ಐತಿಹಾಸಿಕ ಆದೇಶ ಹೊರಡಿಸಿದ ರಕ್ಷಣಾ ಸಚಿವೆ: ಉಗ್ರರ ದಮನ ಖಚಿತ

ಭಾರತೀಯ ಸೈನಿಕರಿಗೆ ನರೇಂದ್ರ ಮೋದಿ ಅವರು ಕೆಲವೇ ಕೆಲವು ಗಂಟೆಗಳ ಹಿಂದಷ್ಟೇ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲು ಆದೇಶಿಸಿದ್ದರು. ಬಹಿರಂಗವಾಗಿ ಇಡೀ ದೇಶದ ಜನತೆಯ ಮುಂದೆ ಸೇನೆಗೆ ಸಂಪೂರ್ಣ ಸ್ವತಂತ್ರ ನೀಡಲಾಗುತ್ತಿದೆ ಎಂದು ನರೇಂದ್ರ ಮೋದಿ ಅವರು ಆದೇಶ ನೀಡಿದ ಬೆನ್ನಲ್ಲೇ ಮತ್ತೊಂದು ಬೃಹತ್ ಆದೇಶವನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರವರು ಭಾರತೀಯ ಸೇನೆಗೆ ಹೊರಡಿಸಿದ್ದಾರೆ.

ಉಗ್ರರ ಪೈಶಾಚಿಕ ಕೃತ್ಯವನ್ನು ಕಂಡುಹಿಡಿ ದೇಶದ ಇಂದು ದುಃಖದಲ್ಲಿ ಮುಳುಗಿದೆ. 44 ಸಿಆರ್ಪಿಎಫ್ ಯೋಧರನ್ನು ಕಳೆದುಕೊಂಡ ಇಡೀ ಭಾರತ ಅನಾಥವಾದಂತೆ ಭಾಸವಾಗುತ್ತಿದೆ. ಇಂತಹ ಸಂದಿಗ್ಧ ಸಮಯದಲ್ಲಿ ನಿರ್ಮಲಾ ಸೀತಾರಾಮನ್ ರವರ ಈ ಆದೇಶ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇನ್ನು ಮುಂದೆ ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟ ಹಾಕುವುದಕ್ಕೆ ಸೇನೆಗೆ ಯಾವುದೇ ಕಾನೂನು ಅಡ್ಡ ಬರುವುದಿಲ್ಲ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾನೂನಿನ ಚೌಕಟ್ಟನ್ನು ಸೇವೆಯನ್ನು ನಿರ್ವಹಿಸುತ್ತಿದ್ದ ಭಾರತೀಯ ಸೇನೆಗೆ ಉಗ್ರರನ್ನು ಹೊಡೆದುರುಳಿಸುವುದು ಕಷ್ಟವಾಗಿರಲಿಲ್ಲ ಆದರೆ ಕಾನೂನು ಎಂಬುದು ಅವರನ್ನು ಕಾಡುತಿತ್ತು. ಕಾಶ್ಮೀರದಲ್ಲಿ ಅದೆಷ್ಟು ಜನ ಕಲ್ಲು ತೂರಾಟ ನಡೆಸಿ ಸೇನೆಗೆ ಇನ್ನಿಲ್ಲದ ಉಪಟಳವನ್ನು ನೀಡುತ್ತಿದ್ದರು. ಅನುಮಾನ ಬಂದ ವ್ಯಕ್ತಿಯನ್ನು ವಿಚಾರಣೆ ಮಾಡಬೇಕು ಎಂದರು ಸಹ ಹಲವಾರು ಕಾನೂನುಗಳು ಅಡ್ಡ ಬರುತ್ತಿದ್ದವು. ಕಲ್ಲಿನ ಏಟುಗಳನ್ನು ತಿಂದು ಸೇನೆ ವಿಚಾರಣೆಗೆ ಅವಕಾಶ ಮಾಡಿಕೊಡುವಂತೆ ಬೇಡಬೇಕಿತ್ತು.

ಅದಕ್ಕೆ ಕೆಲವು ರಾಜಕೀಯವನ್ನು ಬೆರೆಸಿ ಪ್ರತಿಯೊಂದು ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರು ಆದರೆ ನಿರ್ಮಲಾ ಸೀತಾರಾಮನ್ ರವರು ಇಡೀ ಕಾಶ್ಮೀರದಲ್ಲಿ ಯಾವುದೇ ಅನುಮಾನಾಸ್ಪದ ನಡೆ ಕಂಡುಬಂದರೂ ಯಾವುದೇ ವಿಚಾರಣೆಯಿಲ್ಲದೆ ನೇರವಾಗಿ ಗುಂಡಿಟ್ಟು ಕೊಲ್ಲಿ ಎಂಬ ಆದೇಶವನ್ನು ಹೊರಡಿಸಿದ್ದಾರೆ. ವಿಚಾರಣೆ ಅಗತ್ಯವೇ ಇಲ್ಲ ಶಂಕಿತರ ಎಂದು ಗೊತ್ತಾದರೆ ಸಾಕು ಗುಂಡಿಟ್ಟು ಕೊಲ್ಲಿ ಎಂಬ ಆದೇಶವನ್ನು ಭಾರತೀಯ ಸೇನೆಗೆ ನೀಡಿ ಸಂಪೂರ್ಣ ಸ್ವಾತಂತ್ರ್ಯ ಕ್ಕೆ ಮತ್ತೊಂದು ಹೊಸ ಅಧ್ಯಾಯ ಬರೆದಿದ್ದಾರೆ.