ಅಖಾಡಕ್ಕೆ ವಾಯುಪಡೆ: ಪಾಕ್-ಭಾರತ ಶುರುವಾಗಲಿದೆಯೇ ಯುದ್ಧ !

ಯೋಧರನ್ನು ಉಗ್ರರು ಬಲಿ ಪಡೆದ ಬಳಿಕ ಒಂದಾಗಿರುವ ಇಡೀ ಭಾರತೀಯ ಪಕ್ಷಗಳು ನರೇಂದ್ರ ಮೋದಿ ರವರಿಗೆ ಬೆಂಬಲ ಸೂಚಿಸಿದ ಬೆನ್ನಲ್ಲೇ ನರೇಂದ್ರ ಮೋದಿ ಅವರು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ಸೂಚನೆ ನೀಡಿದ್ದಾರೆ. ಉಗ್ರರ ಬೇಟೆಯಾಡಲು ಸಿದ್ಧವಾಗಿರುವ ಸೇನೆಗೆ ಸಂಪೂರ್ಣ ಸ್ವತಂತ್ರ ನೀಡಿದ ನರೇಂದ್ರ ಮೋದಿ ಅವರು ಸಭೆ ಮುಗಿದ ಕೆಲವೇ ಕೆಲವು ನಿಮಿಷಗಳಲ್ಲಿ ಮತ್ತೊಂದು ದಿಟ್ಟ ಹೆಜ್ಜೆ ತೆಗೆದುಕೊಂಡಿದ್ದಾರೆ.

ಮಧ್ಯಾಹ್ನ ವಷ್ಟೇ ಪಾಕಿಸ್ತಾನದ ಗಡಿಯಲ್ಲಿ ಬರೋಬ್ಬರಿ 240 ಯುದ್ಧ ಟ್ಯಾಂಕರ್ ಗಳನ್ನು ಕಳುಹಿಸಿ ಘರ್ಜಿಸಿದ ನರೇಂದ್ರ ಮೋದಿ ರವರ ದಿಟ್ಟ ಕ್ರಮ ಮತ್ತೊಮ್ಮೆ ಸದ್ದು ಮಾಡಿದ್ದು ವಾಯುಪಡೆಯ ಪ್ರಮುಖ ಅಸ್ತ್ರಗಳು ಭಾರತ ಹಾಗೂ ಪಾಕಿಸ್ತಾನದ ಗಡಿ ತಲುಪಿವೆ. ಇದರಿಂದ ಪಾಪಿ ಪಾಕಿಸ್ತಾನದಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದ್ದು ಈ ಬಾರಿ ಖಂಡಿತವಾಗಿ ಯಾವ ರಾಷ್ಟ್ರಗಳು ಪಾಕಿಸ್ತಾನಕ್ಕೆ ಬೆಂಬಲ ನೀಡಲು ಸಿದ್ಧರಿಲ್ಲ ಆದ ಕಾರಣ ಪಾಕಿಸ್ತಾನ ನಾಶವಾಗುವುದು ಖಚಿತ ಎಂದು ಎಲ್ಲರೂ ಅಂದು ಕೊಳ್ಳುತ್ತಿದ್ದಾರೆ.

ಅಷ್ಟಕ್ಕೂ ನಡೆದಿದ್ದೇನು ಗೊತ್ತಾ??

ಸರ್ವಪಕ್ಷಗಳ ಸಭೆಯಲ್ಲಿ ನರೇಂದ್ರ ಮೋದಿ ಅವರಿಗೆ ಸಂಪೂರ್ಣ ಬೆಂಬಲ ದೊರೆತ ಕೆಲವೇ ಕೆಲವು ನಿಮಿಷಗಳಲ್ಲಿ ಭಾರತೀಯ ವಾಯುಪಡೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಗಡಿಯಲ್ಲಿ ಏರ್ ಶೋ ನಡೆಸಲು ಹೋದ ಭಾರತೀಯ ವಾಯುಪಡೆಯು ಇದ್ದಕ್ಕಿದ್ದ ಹಾಗೆ ತನ್ನ ನಿಲುವನ್ನು ಬದಲಿಸಿ ಸಮರ್ಭ್ಯಾಸವನ್ನು ಆರಂಭಿಸಿದೆ. ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಸೈನಿಕರ ವಿಚಾರದಲ್ಲಿ ಹಲವಾರು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಇಷ್ಟೆಲ್ಲಾ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿರುವ ಭಾರತದ ಹೆಜ್ಜೆ ಯುದ್ಧ ದತ್ತ ಸಾಗಿದೆ ಎಂದು ಹಲವಾರು ಅಭಿಪ್ರಾಯಗಳು ಹೊರಬಂದಿವೆ.

ಹೌದು ಭಾರತ ಹಾಗು ಪಾಕಿಸ್ತಾನದ ಗಡಿಯಲ್ಲಿ ಪ್ರೋಕ್ರಾನ್ ವಾಯುನೆಲೆಯಲ್ಲಿ ಭಾರತದ ವಾಯು ಸೇನಾ ಶಕ್ತಿ ಪ್ರದರ್ಶನದ ಇದರಲ್ಲಿ ಸಮರಭ್ಯಾಸ ನಡೆಸುತ್ತಿದೆ . ಯೋಜನೆಗೂ ಹೆಚ್ಚು ವಿಮಾನಗಳು ಪೋಕ್ರಾನ್ ವಾಯುನೆಲೆಯಲ್ಲಿ ಶಸ್ತ್ರಾಭ್ಯಾಸ ಆರಂಭಿಸಿವೆ. ಕೆಲವ ಹಾರಾಟವಷ್ಟೇ ಅಲ್ಲದೆ ಸಿಡಿ ಮದ್ದುಗಳ ಆರ್ಭಟ ಕೂಡ ಜೋರಾಗಿದೆ.  ಇದನ್ನು ಕಂಡು ಖಂಡಿತವಾಗಿಯೂ ಪಾಪಿ ಪಾಕಿಸ್ತಾನಕ್ಕೆ ನಡುಕ ಆರಂಭವಾಗಿದೆ . ಒಂದು ವೇಳೆ ಭಾರತೀಯ ಸೇನೆಯು ಪಾಕಿಸ್ತಾನದ ಮೇಲೆ ಮುಗಿಬಿದ್ದ ಲ್ಲಿ ಕೇವಲ ಒಂದು ಗಂಟೆಯಲ್ಲಿ ಇಡೀ ಪಾಕಿಸ್ತಾನವೇ ಸ್ಮಶಾನವಾಗಿ ಬದಲ್ ಆಗುವುದರಲ್ಲಿ ಅನುಮಾನವೇ ಇಲ್ಲ.

ರಾಜಸ್ಥಾನದ ಪಾಕ್-ಭಾರತ ಗಡಿಯಲ್ಲಿ ಈ ಪ್ರದರ್ಶನ ಆರಂಭವಾಗಿದ್ದು ಭಾರತದ ವಾಯುಪಡೆ ತನ್ನ ಸಂಪೂರ್ಣ ಪ್ರಮಾಣದ ಯುದ್ಧ ಹಾಗೂ ಶಸ್ತ್ರ ಮದ್ದುಗುಂಡುಗಳನ್ನು ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ಸಾರಿದಂತೆ ಕಾಣುತ್ತಿದೆ. ತೇಜಸ್, ಅಡ್ವಾನ್ಸ್ ಹೆಲಿಕ್ಯಾಪ್ಟರ್, ಆಕಾಶ್ ವಿಮಾನಗಳು ಈಗಾಗಲೇ ಗಡಿಯನ್ನು ತಲುಪಿದ್ದು ಅಭ್ಯಾಸ ಆರಂಭಿಸಿದೆ. ಸಿಡಿಮದ್ದು ಗಳ ಜೊತೆ ಆರಂಭವಾಗಿರುವ ಶಕ್ತಿ ಪ್ರದರ್ಶನದ ಹೆಸರಲ್ಲಿ ನಡೆಯುತ್ತಿರುವ ಸಮರಾಭ್ಯಾಸದಲ್ಲಿ ಮತ್ತಷ್ಟು ವಿಮಾನಗಳು ಸೇರಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದ್ದು ಅಗತ್ಯವಿದ್ದರೆ ಬೆಂಗಳೂರಿನಲ್ಲಿ ಈಗಾಗಲೇ ಟಿಕಾಣಿ ಹೂಡಿರುವ ರಫೆಲ್ ಯುದ್ಧ ವಿಮಾನಗಳು ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ.


ಈ ಸಮರಾಭ್ಯಾಸದಲ್ಲಿ ಜೆಟ್ ವಿಮಾನಗಳು, ಮಿಗ್-29, ಮಿಗ್ 27, ಎಎನ್-32 ವಿವಿಧ ವಿಮಾನಗಳ ಶಕ್ತಿ ಪ್ರದರ್ಶನ ಈಗಾಗಲೇ ಆರಂಭಗೊಂಡಿದ್ದು ಸೇನಾ ಮುಖ್ಯಸ್ಥ ರಾಗಿರುವ ಬಿಪಿನ್ ರಾವತ್ ಹಾಗೂ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರು ಸಹ ಈ ಕಾರ್ಯಕ್ರಮದಲ್ಲಿ ಭಾಗಿ ಯಾಗಿದ್ದಾರೆ. ಕೇವಲ ಹಾರಾಟ ಪ್ರದರ್ಶನ ಎಂದು ಯೋಜನೆ ಸಿದ್ಧವಿದ್ದ ಈ ಕಾರ್ಯಕ್ರಮ ಸಮರಾಭ್ಯಾಸ ವಾಗಿ ಮಾರ್ಪಟ್ಟಿದೆ.

ಉಗ್ರರ ದಾಳಿಯ ಬೆನ್ನಲ್ಲಿ ಗಡಿಯಲ್ಲಿ ಈ ರೀತಿಯ ಯುದ್ಧ ವಿಮಾನಗಳ ಹಾರಾಟ ಯುದ್ಧದ ಮುನ್ಸೂಚನೆ ಎಂದು ಭಾವಿಸಲಾಗುತ್ತಿದೆ. ಪ್ರದರ್ಶನ ಎಂಬ ಹೆಸರಿನಲ್ಲಿ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಲು ಭಾರತೀಯ ಸೇನೆ ಪ್ರಯತ್ನಿಸುತ್ತಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

Post Author: Ravi Yadav