ಯೋಧರಿಗೆ ಅಗೌರವ ಸಲ್ಲಿಸಿದ ರಾಹುಲ್ ಗಾಂಧಿ: ಭಾರಿ ವಿವಾದ ಸೃಷ್ಟಿ ಮಾಡಿದ ಪಪ್ಪು

ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎನಿಸಿಕೊಂಡಿರುವ ರಾಹುಲ್ ಗಾಂಧಿ ರವರು ಯೋಧರಿಗೆ ಅವಮಾನ ಮಾಡಿದ್ದಾರೆ. ಕೆಲವೇ ಕೆಲವು ಗಂಟೆಗಳ ಹಿಂದೆ ಯೋಧರ ದಾಳಿಯನ್ನು ಖಂಡಿಸಿ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ಬೆಂಬಲಕ್ಕೆ ನಿಲ್ಲುವುದಾಗಿ ಘೋಷಿಸಿದ್ದರು. ನರೇಂದ್ರ ಮೋದಿ ಅವರು ಎಂತಹ ಕಠಿಣ ನಿರ್ಧಾರ ತೆಗೆದುಕೊಂಡರು ನಮ್ಮ ಬೆಂಬಲವಿದೆ ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು.

ಆದರೆ ಇದೀಗ ಹುತಾತ್ಮ ಯೋಧರಿಗೆ ರಾಹುಲ್ ಗಾಂಧಿ ರವರು ಹಾಗೂ ಗೌರವ ಸಲ್ಲಿಸಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡು ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಗುರುತಿಸಿಕೊಂಡಿರುವ ರಾಹುಲ್ ಗಾಂಧಿ ರವರು ಇಂತಹ ಕೆಲಸ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ.ಇನ್ನು ಅಂತಹ ಕೆಲಸ ಮಾಡಲು ಯಾಕೆ ಮುಂದೆ ಹೋಗಬೇಕಿತ್ತು ಮನೆಯಲ್ಲಿ ಕುಳಿತಿದ್ದರೆ,  ದೇಶದ ಮಾನ ಉಳಿಯುತ್ತಿತ್ತು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ನಡೆದಿದ್ದೇನು??

ನರೇಂದ್ರ ಮೋದಿ ರವರು ಹುತಾತ್ಮ ಯೋಧರನ್ನು ಸ್ಮರಿಸಿಕೊಳ್ಳಲು ಹಾಗೂ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲಾ ರಾಜಕೀಯ ನಾಯಕರು ಸಂಸದರು ಸೇರಿಕೊಂಡು ಮೌನ ಅಚರಣೆ ಮಾಡಿ ಹುತಾತ್ಮ ಯೋಧರ ವೀರ ಮರಣಕ್ಕೆ ನಮನ ಸಲ್ಲಿಸಿ ಸಂತಾಪ ಸೂಚಿಸಲು ಆದೇಶ ನೀಡಿದ್ದರು. ಅದರಂತೆಯೇ ಯಾವುದೇ ಪಕ್ಷಗಳ ಭೇದವಿಲ್ಲದೆ ದೇಶದ ಹಲವಾರು ರಾಜಕಾರಣಿಗಳು ಹಾಗೂ ಹಿರಿಯ ನಾಯಕರು ಒಟ್ಟಾಗಿ ಯೋಧರಿಗೆ ಸಂತಾಪ ಸೂಚಿಸಲು ಒಂದೇ ಸ್ಥಳದಲ್ಲಿ ಸೇರಿದ್ದರು.

ಎಲ್ಲಾ ಸಂಸದರು ಎದ್ದು ಹುತಾತ್ಮರಾದ ವೀರ ಯೋಧರಿಗೆ ನಮನ ಸಲ್ಲಿಸುವಾಗ ರಾಹುಲ್ ಗಾಂಧಿ ರವರು ಎಲ್ಲರಂತೆ ತಲೆ ಬಗ್ಗಿಸಿ ನಿಂತುಕೊಳ್ಳುತ್ತಾರೆ. ಆದರೆ ಪ್ರತಿಯೊಬ್ಬ ನಾಯಕರು ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುತ್ತಿದ್ದರೆ, ಇತ್ತ ರಾಹುಲ್ ಗಾಂಧಿ ರವರು ಮೊಬೈಲ್ ನಲ್ಲಿ ಮಗ್ನರಾಗಿರುತ್ತಾರೆ ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ರಾಹುಲ್ ಗಾಂಧಿ ಅವರ ಈ ನಡೆಗೆ ಬಾರಿ ಆಕ್ರೋಶ ವ್ಯಕ್ತವಾಗಿದೆ.

Post Author: Ravi Yadav