ಭಾರತದ ಬೆಂಬಲಕ್ಕೆ ಬಂತು ಜಗತ್ತು: ವಿಶ್ವದ ಮುಂದೆ ಬೆತ್ತಲಾದ ಪಾಕಿಸ್ತಾನಕ್ಕೆ ಕಾದಿದೆ ಆಪತ್ತು

ಇಂದು ವಿಶ್ವದೆಲ್ಲೆಡೆ ಪುಲ್ವಾಮಾ ದಾಳಿಯ ಸದ್ದು ಮಾಡುತ್ತಿದೆ. ನಲವತ್ತಕ್ಕೂ ಹೆಚ್ಚು ಯೋಧರನ್ನು ಕಳೆದುಕೊಂಡ ಭಾರತ ಅನಾಥ ವಾದಂತೆ ಭಾಸವಾಗುತ್ತಿದೆ. ಈ ಎಲ್ಲಾ ಕೃತಿಗಳಿಗೂ ಉಗ್ರರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ಕಾರಣ ಎಂದು ಎಲ್ಲರಿಗೂ ತಿಳಿದಿದೆ. ಹಾಗೂ ಇದಕ್ಕೆ ಪಾಕಿಸ್ತಾನ ತಕ್ಕ ಬೆಲೆ ಎನ್ನು ಇನ್ನು ಕೆಲವೇ ಕೆಲವು ದಿನಗಳಲ್ಲಿ ಬರಲಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ಮಹತ್ವದ ಬೆಳವಣಿಗೆಯಲ್ಲಿ ಪುಲ್ವಾಮ ದಾಳಿಯನ್ನು ವಿಶ್ವದ ಬಲಾಢ್ಯ ರಾಷ್ಟ್ರಗಳು ಖಂಡಿಸಿದ್ದು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ಪರ ನಿಲ್ಲುವುದಾಗಿ ಭರವಸೆಯನ್ನು ನೀಡಿದ್ದಾರೆ. ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದಿರುವ ಅಮೆರಿಕ ಹಾಗೂ ಬಲಾಢ್ಯ ದೇಶವಾದ ಫ್ರಾನ್ಸ್ ರಷ್ಯಾ ಸೇರಿದಂತೆ ಇನ್ನೂ ಹತ್ತು ಹಲವಾರು ರಾಷ್ಟ್ರಗಳು ಭಾರತದ ಪರ ನಿಲ್ಲಲಿದ್ದಾರೆ.

ಪುಲ್ವಾಮ ದಾಳಿಯನ್ನು ಖಂಡಿಸಿರುವ ಫ್ರಾನ್ಸ್ ಅಧ್ಯಕ್ಷ ರು ಉಗ್ರರನ್ನು ಮಟ್ಟಹಾಕಲು ಭಾರತಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ. ಇನ್ನು ನೆರೆಯ ಮಿತ್ರ ರಾಷ್ಟ್ರವಾದ ನೇಪಾಳ ದೇಶವು ಭಾರತ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಲಾಗಿದೆ. ನೇಪಾಳ ಪ್ರಧಾನಿ ಯು ನೇರವಾಗಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಭಾರತದ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ.

ಇನ್ನು ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ದೇಶವು ಭಾರತಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧರಿರುವುದಾಗಿ ಘೋಷಿಸಿದೆ. ಅಗತ್ಯ ಬಿದ್ದರೆ ಅಮೆರಿಕ ಸೈನ್ಯವು ಭಾರತದ ಸೇನೆಯೊಂದಿಗೆ ಪಾಕಿಸ್ತಾನದಲ್ಲಿರುವ ಉಗ್ರರ ನ್ನು ಶಮನ ಮಾಡಲು ಸಿದ್ಧರಿರುವುದಾಗಿ ಅಮೇರಿಕಾ ದೇಶ ಘೋಷಿಸಿದೆ. ಫ್ರಾನ್ಸ್ ದೇಶವು ಸಹ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಘೋಷಿಸಿದ್ದು ಉಗ್ರರ ದಮನ ಮಾಡಲು ಭಾರತ ಸೇನೆಯು ಸನ್ನದ್ಧವಾಗಿದೆ.

Post Author: Ravi Yadav