ಕಾಂಗ್ರೆಸ್ ನಿಂದ ಹೊರ ಬರಲು ಕಾರಣ ಬಿಚ್ಚಿಟ್ಟ ಎಸ್ ಎಂ ಕೃಷ್ಣ

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಆಗಿರುವ ಎಸ್ ಎಂ ಕೃಷ್ಣ ರವರು ಕೆಲವೇ ಕೆಲವು ವರ್ಷಗಳ ಹಿಂದಷ್ಟೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡಿದ್ದರು. ಕರ್ನಾಟಕದಲ್ಲಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿ ಜನಪರ ಸರ್ಕಾರವನ್ನು ನಡೆಸಿದ ಎಸ್ ಎಂ ಕೃಷ್ಣ ರವರು ಇದ್ದಕ್ಕಿದ್ದ ಹಾಗೆ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷ ಸೇರಿಕೊಂಡಿದ್ದರು. ಎಸ್ ಎಂ ಕೃಷ್ಣ ರವರು ಹೀಗ್ಯಾಕೆ ಮಾಡಿದರು ಎಂಬ ಆಲೋಚನೆ ಎಲ್ಲರನ್ನು ಕಾಡತೊಡಗಿತು. ಆದರೆ ಇಂದು ಕಾಂಗ್ರೆಸ್ ನಿಂದ ಹೊರಬರಲು ಕಾರಣವೇನೆಂಬುದನ್ನು ಸ್ವತಹ ಎಸ್ ಎಂ ಕೃಷ್ಣ ರವರೆ ಬಹಿರಂಗಗೊಳಿಸಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚೆಗೆ ತೆರೆಕಂಡ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರದ ಕಥೆಯಲ್ಲಿ ಆರೋಪಿಸಿದಂತೆ ಮನಮೋಹನ್ ಸಿಂಗ್ ರವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಗಾಂಧಿ ಕುಟುಂಬವು ಪರೋಕ್ಷವಾಗಿ ಅಧಿಕಾರ ನಡೆಸುತ್ತಿದ್ದರು. ಈ ಮಾತು ಸತ್ಯವೆಂಬಂತೆ ಇಂದು ಎಸ್ ಎಂ ಕೃಷ್ಣ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

ಅಷ್ಟಕ್ಕೂ ಎಸ್ ಎಂ ಕೃಷ್ಣ ರವರು ಕಾಂಗ್ರೆಸ್ ಬಿಡಲು ಕಾರಣವೇನು ಗೊತ್ತಾ?

ಮನಮೋಹನ್ ಸಿಂಗ್ ಅವರ ಅಧಿಕಾರದ ವೇಳೆಯಲ್ಲಿ ಎಲ್ಲೋ ಕುಳಿತಿದ್ದ ರಾಹುಲ್ ಗಾಂಧಿ ರವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಮುಂದಾಗಿದ್ದರು. ಮನಮೋಹನ್ ಸಿಂಗ್ ಅವರಿಗೆ ಗೊತ್ತಿಲ್ಲದಂತೆ ಹಲವಾರು ವಿಚಾರಗಳು ಸರ್ಕಾರದ ಅಡಿಯಲ್ಲಿ ನಡೆಯುತ್ತಿದ್ದವು. ಪ್ರಧಾನಿ ರವರು ಜಾರಿಗೆ ತರಲು ನಿರ್ಧರಿಸಿದ್ದ ಯೋಜನೆಗಳ ವರದಿಗಳನ್ನು ರಾಹುಲ್ ಗಾಂಧಿ ರವರು ಹರಿದುಹಾಕಿದ್ದರು‌.

ಇದೇ ರೀತಿ ಹಲವಾರು ವಿದ್ಯಮಾನಗಳಿಂದ ನಾನು ಬೇಸತ್ತು ಕಾಂಗ್ರೆಸ್ ಪಕ್ಷದಿಂದ ಹೊರ ಬಂದೆ ಎಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ವೇಳೆಯಲ್ಲಿ ತಿಳಿಸಿದರು. ಹೀಗೆ ಮಾತನಾಡುತ್ತಾ ಮೋದಿ ಸರ್ಕಾರವು ಐದು ವರ್ಷಗಳಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನೀಡಿದೆ ಆದಕಾರಣ ಮತ್ತೊಮ್ಮೆ ಮೋದಿ ಅವರನ್ನು ಆಯ್ಕೆ ಮಾಡಿ ಎಂದು ಕಾರ್ಯಕರ್ತರಲ್ಲಿ ಕೇಳಿಕೊಂಡರು.

Post Author: Ravi Yadav