ಚೀನಾ ಬೆದರಿಕೆಗೆ ಖ್ಯಾರೇ ಎನ್ನದ ನಮೋ: 56 ಇಂಚಿನ ಎದೆಗಾರಿಕೆ ಇದು

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಚೀನಾದ ಯಾವುದೇ ಬೆದರಿಕೆ ಗಳಿಗೂ ಭಾರತ ಜಗ್ಗುತ್ತಿಲ್ಲ. ಭಾರತದ ಸಾಮರ್ಥ್ಯ ಏನು ಎಂಬುದು ಚೆನ್ನಾಗಿ ಈಗಾಗಲೇ ತಿಳಿದಿದ್ದರೂ ಸಹ ಪದೇ ಪದೇ ಚೀನಾ ದೇಶವು ಭಾರತದ ವಿರುದ್ಧ ಕಾಲು ಕೆರೆದು ಜಗಳಕ್ಕೆ ಬರುತ್ತಿದೆ. ಕಳೆದ ಡೋಕ್ಲಾಮ್ ವಿವಾದ ದಲ್ಲಿ ಚೀನಾ ದೇಶಕ್ಕೆ ಸರಿಯಾದ ಉತ್ತರ ನೀಡಿದ 56 ಇಂಚಿನ ಎದೆಗಾರಿಕೆ ಇಂದು ಮತ್ತೊಮ್ಮೆ ಚೀನಾ ವಿರುದ್ಧ ಸೆಟೆದು ನಿಂತಿದೆ.

ನರೇಂದ್ರ ಮೋದಿ ಅವರು ಭಾರತದ ಗಡಿ ರಾಜ್ಯ ಅರುಣಾಚಲ ಪ್ರದೇಶ ಭೇಟಿಯನ್ನು ಚೀನಾ ದೇಶವು ವಿರೋಧಿಸಿತ್ತು ಇಲ್ಲಿ ಯಾವುದೇ ಯೋಜನೆಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಶಿಲಾನ್ಯಾಸ ಗೊಳಿಸುವುದು ಅಪರಾಧವಾಗುತ್ತದೆ ಎಂದು ಚೀನಾ ದೇಶವು ಭಾರತಕ್ಕೆ ಎಚ್ಚರಿಕೆ ನೀಡಿತ್ತು ಆದರೆ ಇದ್ಯಾವುದಕ್ಕೂ ನರೇಂದ್ರ ಮೋದಿ ಅವರು ಕ್ಯಾರೆ ಎನ್ನಲಿಲ್ಲ.

ಬದಲಾಗಿ ಎಂದಿನಂತೆ ಯಾವುದೇ ಭದ್ರತೆಯ ಗಾಜುಗಳನ್ನು ಬಳಸದೆ ನೇರವಾಗಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿ ಚೀನಾ ವಿರುದ್ಧ ಗುಡುಗಿದ್ದಾರೆ. ನರೇಂದ್ರ ಮೋದಿ ರವರು ಹಲವಾರು ಯೋಜನೆಗಳನ್ನು ಸಹ ಜಾರಿಗೊಳಿಸಿ ಚೀನಾಗೆ ನೇರವಾಗಿ ತಾವು ಯಾವುದಕ್ಕೂ ಜಗ್ಗುವುದಿಲ್ಲ ಎಂಬ ಸಂದೇಶವನ್ನು ಮತ್ತೊಮ್ಮೆ ಸಾರಿದ್ದಾರೆ. ವಿಷಯದ ಬಗ್ಗೆ ಸಂಪೂರ್ಣ ತಿಳಿಯಲು ಕೆಳಗಡೆ ಓದಿ.

ಅಷ್ಟಕ್ಕೂ ವಿಷಯದ ಮೂಲವೇನು??

ನರೇಂದ್ರ ಮೋದಿ ರವರು ಭೇಟಿ ನೀಡುತ್ತಾರೆ ಎಂಬ ವಿಷಯ ಕೇಳಿದ ತಕ್ಷಣ ಚೀನಾ ದೇಶವು ಗಡಿ ರಾಜ್ಯದ ಸೂಕ್ಷ್ಮತೆಯನ್ನು ಭಾರತ ಪರಿಗಣಿಸಬೇಕು ಗಡಿ ಪ್ರಶ್ನೆ ಉದ್ಭವಿಸುತ್ತದೆ ಯಾವುದೇ ಚಟುವಟಿಕೆಗಳನ್ನು ಭಾರತ ಪ್ರೋತ್ಸಾಹಿಸಬಾರದು. ಚೀನಾ- ಭಾರತ ಗಡಿ ವಿಚಾರದಲ್ಲಿ ನಮ್ಮ ನಿಲುವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಆ ಪ್ರದೇಶವನ್ನು ಅರುಣಾಚಲ ಪ್ರದೇಶ ಎಂದು ಕರೆಯಲು ನಾವು ಒಪ್ಪುವುದಿಲ್ಲ ಚೀನಾ-ಭಾರತ ಗಡಿ ಪ್ರದೇಶದ ಪೂರ್ವ ಭಾಗದಲ್ಲಿ ಭಾರತದ ನಾಯಕರು ಯಾವುದೇ ಚಟುವಟಿಕೆಗಳನ್ನು ನಡೆಸಬಾರದು ಎಂದು ಚೀನಾ ವಿದೇಶಾಂಗ ಇಲಾಖೆ ತಿಳಿಸಿತ್ತು.

ಗಡಿ ರಾಜ್ಯ ಅರುಣಾಚಲ ಪ್ರದೇಶ ರಾಜ್ಯವನ್ನು  ಟಿಬೆಟ್ ಭಾಗ ಎಂದು ಹೇಳಿಕೊಂಡಿರುವ ಚೀನಾ ದೇಶವು ಪದೇ ಪದೇ ಈ ವಿಷಯವನ್ನು ಪ್ರಸ್ತಾಪಿಸುತ್ತ ಬಂದಿತ್ತು. ಆದರೆ ನರೇಂದ್ರ ಮೋದಿ ಅವರು ತಾವೇ ಖುದ್ದು ಭೇಟಿ ನೀಡಿ ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ಇದನ್ನು ಯಾರು ಕಸಿಯಲು ಸಾಧ್ಯವಿಲ್ಲ ಎಂದು ಗುಡುಗಿ ಬರೋಬರಿ ನಾಲ್ಕು ಸಾವಿರ ಕೋಟಿ ಯೋಜನೆಗಳಿಗೆ ಅಡಿಗಲ್ಲು ಹಾಕಿ ಬಂದಿದ್ದಾರೆ. ಈ ಮೂಲಕ ಚೀನಾ ದೇಶಕ್ಕೆ ಮತ್ತೊಮ್ಮೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ ಭಾರತ ದೇಶವು ನರೇಂದ್ರ ಮೋದಿ ರವರ ನೇತೃತ್ವದಲ್ಲಿ ದೇಶದ ಯಾವುದೇ ಭದ್ರತೆಯ ಹಾಗೂ ಗಡಿಯ ವಿಷಯದಲ್ಲಿಯೂ ಸಹ ರಾಜಿ ಆಗುವುದಿಲ್ಲ ಎಂಬ ಸ್ಪಷ್ಟ ನಿಲುವು ಚೀನಾ ದೇಶಕ್ಕೆ ಅರ್ಥವಾದರೆ ಒಳಿತು.

Post Author: Ravi Yadav