ಹಿಟ್ಲರ್ ಮಾತನ್ನು ದೇಶಕ್ಕಾಗಿ ತಿರಸ್ಕರಿಸಿದ ಭಾರತದ ಹೆಮ್ಮೆಯ ಸೈನಿಕ ಯಾರು ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ಮೂರು ಅಡಿ ಉದ್ದವಿದ್ದರೂ ಇಡೀ ವಿಶ್ವವನ್ನೇ ನಡುಗಿಸಿದ್ದ ಸರ್ವಾಧಿಕಾರಿ ಹಿಟ್ಲರ್. ಎಲ್ಲಾ ದೇಶಗಳು ಆತನೊಬ್ಬ ಸರ್ವಾಧಿಕಾರಿ ಎಂದು ದೂಷಿಸಿದರೆ ಇಡೀ ಜರ್ಮನ್ ದೇಶವು ಅವರ ನಾಯಕತ್ವವನ್ನು ಕೊಂಡಾಡುತ್ತೀತ್ತು. ಅಷ್ಟರಮಟ್ಟಿಗೆ ಪ್ರಭಾವಿ ನಾಯಕರಾಗಿ ಹಿಟ್ಲರ್ ಬೆಳೆದಿದ್ದರು.

ಇಡೀ ವಿಶ್ವವನ್ನು ನಡುಗಿಸಿದ್ದ ಹಿಟ್ಲರ್ ರವರು ಕೇವಲ ಒಂದು ತಪ್ಪಿನಿಂದ ಸೋಲನ್ನು ಕಂಡಿದ್ದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ, ಎಲ್ಲಾ ವಿದ್ಯಮಾನಗಳ ನಡುವೆ ಸರ್ವಾಧಿಕಾರಿಯಾಗಿದ್ದ ಹಿಟ್ಲರ್ ಅವರ ಮಾತಿಗೆ ದೇಶಕ್ಕಾಗಿ ಭಾರತದ ಹೆಮ್ಮೆಯ ಸೈನಿಕ ಅಂದು ಸರಿಯಾದ ಉತ್ತರ ನೀಡಿದ್ದ. ಒಂದು ವೇಳೆ ಆ ಸೈನಿಕ ಹಿಟ್ಲರ್ ರವರ ಮಾತನ್ನು ಒಪ್ಪಿಕೊಂಡಿದ್ದರೆ ಜರ್ಮನ್ ದೇಶದಲ್ಲಿ ಭಾರತದ ಸೈನಿಕ ಅತಿ ಉನ್ನತ ಸ್ಥಾನದಲ್ಲಿ ಇರುತ್ತಿದ್ದ. ಆದರೆ ದೇಶಕ್ಕಾಗಿ ಭಾರತದ ಹೆಮ್ಮೆಯ ಸೈನಿಕ ಹಿಟ್ಲರ್ ಅವರ ಮಾತಿಗೆ ಸೊಪ್ಪು ಹಾಕಿರಲಿಲ್ಲ. ಅಷ್ಟಕ್ಕೂ ಆ ಸೈನಿಕ ಯಾರು ಗೊತ್ತಾ? ಮತ್ತು ವಿಷಯದ ಸಂಪೂರ್ಣ ಮೂಲವೇನು ಗೊತ್ತಾ? ತಿಳಿಯಲು ಕೆಳಗಡೆ ಓದಿ.

ಭಾರತವು ಸಾವಿರದ 1926 ರಿಂದ ಹಾಕಿಯಲ್ಲಿ ತನ್ನ ಪ್ರಾಬಲ್ಯವನ್ನು ಇಡೀ ವಿಶ್ವಕ್ಕೆ ಸಾರುತ್ತ ಮೆರೆದಿತ್ತು. ಎಷ್ಟರಮಟ್ಟಿಗೆ ಭಾರತ ಪ್ರಾಬಲ್ಯವನ್ನು ಮೆರೆದಿತ್ತು ಎಂದರೆ ಇಡೀ ವಿಶ್ವವೇ ಭಾರತದ ವಿರುದ್ಧ ಹಾಕಿ ಪಂದ್ಯಗಳನ್ನು ಆಡಲು ನಡಗುತ್ತಿತ್ತು. ಇಡೀ ಪ್ರಪಂಚವನ್ನು ತನ್ನ ಅತ್ಯುತ್ತಮ ಆಟದ ಕೌಶಲ್ಯ ಗಳಿಂದಾಗಿ ಗಾಬರಿ ಗೊಳಿಸಿತ್ತು ಭಾರತ.

ಭಾರತದ ಎದುರು ಜರ್ಮನಿ ತಂಡವು ಹಲವಾರು ಬಾರಿ ಮಣ್ಣು ಮುಕ್ಕಿತು, ಇದನ್ನು ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಹಿಟ್ಲರ್ ಅವರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ನನ್ನ ದೇಶ  ಎಲ್ಲಾ ವಿಷಯದಲ್ಲಿಯೂ ಮುಂದೆ ಇರಬೇಕು ಎಂಬ ಆಸೆಯ ಅವರದಾಗಿತ್ತು. ಅದರಂತೆಯೇ ಯುದ್ಧ, ಟೆಕ್ನಾಲಜಿ, ಎಲ್ಲಾ ವಿಷಯಗಳಲ್ಲೂ ಜರ್ಮನಿ ದೇಶವು ಮುಂದುವರೆಯುತ್ತಿತ್ತು, ಆದರೆ ಆ ದೇಶಕ್ಕೆ ಭಾರತ ತಂಡವನ್ನು ಹಾಕಿಯಲ್ಲಿ ಸೋಲಿಸಲು ಸಾಧ್ಯವಾಗುತ್ತಿರಲಿಲ್ಲ.

ಈ ವಿಷಯ ಹಿಟ್ಲರ್ ರವರ ನಿದ್ದೆಗೆಡಿಸಿತ್ತು,  ದುರಾದೃಷ್ಟವಶಾತ್ 1934 ರಲ್ಲಿ ನಡೆದ ಬರ್ಲಿಂಗ್ ಒಲಂಪಿಕ್ಸ್ ನಲ್ಲಿ ಜರ್ಮನಿ ತಂಡವು ಫೈನಲ್ ನಲ್ಲಿ ಭಾರತದ ವಿರುದ್ಧ ಸ್ಪರ್ಧಿಸಲು ಬೇಕಾದ ಸಂದರ್ಭ ಎದುರಾಯಿತು, ಸಾಮಾನ್ಯವಾಗಿ ಇದು ಹಿಟ್ಲರ್ ಅವರನ್ನು ಮತ್ತಷ್ಟು ಕೆಣಕಿತ್ತು. ಆದರೆ ತನ್ನ ದೇಶದ ಆಟಗಾರರ ಮೇಲೆ ನಂಬಿಕೆ ಇಟ್ಟುಕೊಂಡು ಫೈನಲ್ ಪಂದ್ಯವನ್ನು ನೋಡಲು ಕಾತರದಿಂದ ಹಿಟ್ಲರ್ ರವರು ಮೈದಾನಕ್ಕೆ ಬಂದಿದ್ದರು.

ಎಂದಿನಂತೆ ಜರ್ಮನಿ ದೇಶವು ಭಾರತ ತಂಡದ ವಿರುದ್ಧ ಹೀನಾಯ ಸೋಲನ್ನು ಕಂಡಿತ್ತು. 8-1 ಅಂತರದಲ್ಲಿ ಭಾರತ ಜಯಭೇರಿಯನ್ನು ಬಾರಿಸಿತು. ಇದನ್ನು ಕಂಡ ಹಿಟ್ಲರ್ ಅವರು ಅರಗಿಸಿಕೊಳ್ಳಲಾಗದೆ ಭಾರತದ ಸ್ಟಾರ್ ಆಟಗಾರರಾದ ಹಾಗೂ ನಾಯಕರಾಗಿದ್ದ ಧ್ಯಾನ್ ಚಂದ್ ರವರನ್ನು ಭೇಟಿಯಾಗಲು ತೆರಳುತ್ತಾರೆ.

ಧ್ಯಾನ್ ಚಂದ್ ರವರು ಹರಿದಿರುವ ಶೂಗಳನ್ನು ಧರಿಸಿ ಆಡುತ್ತಿರುವುದನ್ನು ಕಂಡ ಹಿಟ್ಲರ್ ಅವರು ನೀನು ಹರಿದಿರುವ ಶೂಗಳನ್ನು ಧರಿಸಿ ಆರು ಗೋಲುಗಳನ್ನು ಗಳಿಸಿದ್ದೀಯ, ಮುಂದೆ ನಿನ್ನ ಕಥೆ ಏನು ಎಂದು ಪ್ರಶ್ನಿಸಿದಾಗ ತನ್ನ ಜೀವನೋಪಾಯಕ್ಕೆ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸುತ್ತಾರೆ.

ಇದನ್ನು ಕೇಳಿದ ಹಿಟ್ಲರ್ ಅವರು ಭಾರತೀಯ ಸೇನೆಯಲ್ಲಿ ನಿನ್ನ ಸ್ಥಾನಮಾನ ಏನು ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸಿದ ಧ್ಯಾನ್ ಚಂದ್ ರವರು ನಾನು ಲ್ಯಾನ್ಸ್ ನಾಯಕ್ ಎಂದು ಉತ್ತರಿಸುತ್ತಾರೆ ಆದರೆ ಇದ್ದಕ್ಕಿದ್ದ ಹಾಗೆ ಹಿಟ್ಲರ್ ಅವರು ಈ ವಿಷಯವನ್ನು ಕೇಳಿ ಒಂದು ಕ್ಷಣ ದಂಗಾಗಿ ನಿನ್ನ ಆಟವನ್ನು ನಾನು ಮೆಚ್ಚಿದ್ದೇನೆ ನೀನು ಭಾರತೀಯ ಸೇನೆಯನ್ನು ಬಿಟ್ಟು ಜರ್ಮನಿ ದೇಶಕ್ಕೆ ಬಂದು ಬಿಡು ನಿನಗೆ ಇನ್ನು ಉನ್ನತ ಸ್ಥಾನವನ್ನು ನೀಡಿ ಗೌರವ ಸಲ್ಲಿಸುತ್ತೇನೆ ಎಂದು ಹೇಳುತ್ತಾರೆ.

ಈ ಮಾತನ್ನು ಕೇಳಿದ ಧ್ಯಾನ್ ಚಂದ್ ರವರು ಕೆಲವು ಸೆಕೆಂಡುಗಳ ಕಾಲ ದಂಗ್ ಆಗುತ್ತಾರೆ. ಆದರೆ ಧ್ಯಾನ್ ಚಂದ್ ರವರು ಇವರ ಆಫರ್ ಗೆ ಒಪ್ಪುವುದಿಲ್ಲ ಬದಲಾಗಿ ಭಾರತವು ನನ್ನ ದೇಶ ನಾನು ಅಲ್ಲಿ ಹೇಗೆ ಇದ್ದರೂ ಚೆನ್ನಾಗಿರುತ್ತೇನೆ ಎಂದು ಉತ್ತರಿಸುತ್ತಾರೆ. ಈ ಉತ್ತರ ಹಿಟ್ಲರ್ ಅವರಿಗೂ ಸಹ ಒಂದು ಕ್ಷಣ ಶಾಕ್ ಆಗುತ್ತದೆ.

ಈ ವಿಷಯವನ್ನು ತಿಳಿದ ಇಡಿ ವಿಶ್ವವೇ ಬೆರಗಾಗಿ ನೋಡುತ್ತದೆ ಯಾಕೆಂದರೆ ಹಿಟ್ಲರ್ ನಂತರ ಸರ್ವಾಧಿಕಾರಿಗೆ ಆತನ ದೇಶದಲ್ಲಿಯೇ, ಅವರ ಮಾತನ್ನು ತಿರಸ್ಕರಿಸುವ ಧೈರ್ಯ ಇಲ್ಲಿಯವರೆಗೂ ಯಾರು ಮಾಡಿರಲಿಲ್ಲ. ಆದರೆ ಕೇವಲ ದೇಶಕ್ಕಾಗಿ ತಾನು ಯಾವ ದೇಶದಲ್ಲಿ ಹಾಗೂ ಯಾರ ಮುಂದೆ ನಿಂತಿದ್ದೇನೆ ಎಂಬ ಯಾವುದೇ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ನೇರವಾಗಿ ಭಾರತ ನನ್ನ ದೇಶ ಅಲ್ಲಿ ಹೇಗೆ ಇದ್ದರೂ ನಾನು ಚೆನ್ನಾಗಿ ಇರುತ್ತೇನೆ ಎಂಬ ಉತ್ತರ ನೀಡಿದ ಹೆಮ್ಮೆಯ ಸೈನಿಕ ನಮ್ಮ ಹಾಕಿ ತಂಡದ ದಂತಕತೆ ಎನಿಸಿಕೊಂಡಿರುವ ಧ್ಯಾನ್ ಚಂದ್. ದುರದೃಷ್ಟವಶಾತ್ ಇಲ್ಲಿಯವರೆಗೂ ಇವರಿಗೆ ಯಾವ ಸರ್ಕಾರವೂ ಭಾರತ ರತ್ನ ಪ್ರಶಸ್ತಿಯನ್ನು ನೀಡಿಲ್ಲ. ನಮ್ಮ ಪ್ರಕಾರ ಭಾರತ ರತ್ನ ಪ್ರಶಸ್ತಿಗೆ ಇವರು ಅರ್ಹರು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Post Author: Ravi Yadav