ಕಾಂಗ್ರೆಸ್ ಗೆ ಮರ್ಮಾಘಾತ: ರಾಹುಲ್ ಗೆ ಛೀಮಾರಿ ಹಾಕಿ ಹೊರ ನಡೆದ ಹಿರಿಯ ಸಂಸದ: ಬಿಜೆಪಿಗೆ??

ಮುಂದಿನ ಲೋಕಸಭಾ ಚುನಾವಣೆ ಪ್ರತಿಕ್ಷಣವೂ ಕುತೂಹಲವನ್ನು ಗರಿಗೆದರಿ ಸುತ್ತಿದೆ. ಪ್ರತಿಯೊಬ್ಬ ನಾಯಕನೂ ಯಾವ ಸಮಯದಲ್ಲಿ ಯಾವ ಹೆಜ್ಜೆಯನ್ನೂ ಇಡುತ್ತಾನೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ ಬದಲಾಗಿ ಪ್ರತಿ ಕ್ಷಣವೂ ಒಂದಲ್ಲಾ ಒಂದು ಹೊಸ ರೀತಿಯ ಕಾರ್ಯಗಳಿಂದ ಮುಂದಿನ ಲೋಕಸಭಾ ಚುನಾವಣೆ ಭಾರೀ ಸದ್ದು ಮಾಡುತ್ತಿದೆ. ಒಬ್ಬ ನರೇಂದ್ರ ಮೋದಿ ಅವರನ್ನು ಸೋಲಿಸಲು ದೇಶದ 20ಕ್ಕೂ ಹೆಚ್ಚು ಪಕ್ಷಗಳು ಮೈತ್ರಿಯನ್ನು ರಚಿಸಿಕೊಂಡು ಚುನಾವಣೆ ಎದುರಿಸಲು ಭಯದಲ್ಲಿ ಮುನ್ನುಗ್ಗುತ್ತಿವೆ.

ಮೋದಿ ಅವರು ಏನು ಅಭಿವೃದ್ಧಿ ಮಾಡಿಲ್ಲ ಎಂದು ಬೊಬ್ಬೆ ಹೊಡೆಯುವ ವಿರೋಧ ಪಕ್ಷಗಳು ಒಂದು ವೇಳೆ ನರೇಂದ್ರ ಮೋದಿ ಅವರು ಅಭಿವೃದ್ಧಿ ಮಾಡದೇ ಇದ್ದರೆ, ನೀವು ಯಾಕೆ ಮೈತ್ರಿಯನ್ನು ರಚನೆ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತಿರೀ ಒಬ್ಬೊಬ್ಬರಾಗಿ ನರೇಂದ್ರ ಮೋದಿ ಅವರನ್ನು ಎದುರಿಸುವ ತಾಕತ್ತು ನಿಮಗಿಲ್ಲವೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ವೈರಲ್ ಆಗುತ್ತಿದೆ. ಈ ಎಲ್ಲಾ ವಿದ್ಯಮಾನಗಳ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಹಲವಾರು ಶಾಕ್ ಗಳ ಜೊತೆಗೆ ಈಗ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ, ಕಾಂಗ್ರೆಸ್ ಪಕ್ಷದ ಹಿರಿಯ ಸಂಸದ ರಾಹುಲ್ ಗಾಂಧಿ ರವರ ನಾಯಕತ್ವಕ್ಕೆ ಬೇಸತ್ತು ಪಕ್ಷದಿಂದ ಹೊರನಡೆದಿದ್ದಾರೆ.

ಅಷ್ಟಕ್ಕೂ ನಡೆಯುತ್ತಿರುವುದಾದರೂ ಏನು?

ಕಾಂಗ್ರೆಸ್ ಪಕ್ಷವು ಕಳೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ರವರನ್ನು ನಂಬಿ ಸೋಲನ್ನು ಕಂಡಿತ್ತು. ಚಂದ್ರಬಾಬು ನಾಯ್ಡು ರವರ ಜೊತೆಗಿನ ಮೈತ್ರಿ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯ ಸಹಾಯ ಮಾಡಲಿಲ್ಲ. ತದನಂತರ ಈ ಫಲಿತಾಂಶದಿಂದ ಎಚ್ಚೆತ್ತುಕೊಂಡ ಕಾಂಗ್ರೆಸ್ ಪಕ್ಷವು ಚಂದ್ರಬಾಬು ನಾಯ್ಡು ರವರ ಜೊತೆ ಪೂರ್ವ ಚುನಾವಣಾ ಮೈತ್ರಿ ಒಪ್ಪಿಕೊಳ್ಳದೆ ಛೀಮಾರಿ ಹಾಕಿ ಹೊರ ದಬ್ಬಿತ್ತು. ಸಾಮಾನ್ಯವಾಗಿ ಇದರಿಂದ ಚಂದ್ರಬಾಬು ನಾಯ್ಡು ರವರು ಕೆರಳಿದ್ದರು.

ಆದರೆ ಚಂದ್ರಬಾಬು ನಾಯ್ಡು ರವರನ್ನು ಹೊರದಬ್ಬಿದ ನಂತರ ಕಾಂಗ್ರೆಸ್ ಪಕ್ಷಕ್ಕೆ ಆಂಧ್ರಪ್ರದೇಶದಲ್ಲಿ ನೆಲೆಯೂರಲು ಯಾವುದೇ ಅವಕಾಶಗಳು ಸಾಧ್ಯವಿರಲಿಲ್ಲ. ಕಳೆದ ನಾಲ್ಕು ವರ್ಷಗಳಿಂದ ರಾಹುಲ್ ಗಾಂಧಿ ಅವರು ಆಂಧ್ರ ಪ್ರದೇಶ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಯಾವುದೇ ರೀತಿಯಲ್ಲೂ ಶ್ರಮಿಸಿಲ್ಲ. ಕೇವಲ ಸದಾ ನರೇಂದ್ರ ಮೋದಿ ಅವರನ್ನು ದೂಷಿಸುವುದು ರಲ್ಲಿ ನಿರತರಾಗಿರುವ ರಾಹುಲ್ ಗಾಂಧಿ ಅವರು ತಮ್ಮ ಪಕ್ಷ ಬಲವರ್ಧನೆಗೆ ಯಾವುದೇ ಒತ್ತು ನೀಡುತ್ತಿಲ್ಲ.

ಇದರಿಂದ ಬೇಸತ್ತಿರುವ ಮಾಜಿ ಕೇಂದ್ರ ಸಚಿವರಾಗಿರುವ ವಿ ಕಿಶೋರ್ ಚಂದ್ರ ರವರು ರಾಹುಲ್ ಗಾಂಧಿ ರವರಿಗೆ ಛೀಮಾರಿ ಹಾಕಿ ಕಾಂಗ್ರೆಸ್ ಪಕ್ಷದಿಂದ ಹೊರನಡೆದಿದ್ದಾರೆ. ತಾವು ಕಾಂಗ್ರೆಸ್ ಪಕ್ಷ ಬಿಡುತ್ತೇನೆಂದು ರಾಹುಲ್ ಗಾಂಧಿ ರವರಿಗೆ ಪತ್ರ ಬರೆದು ಪತ್ರದಲ್ಲಿ ಯೇ ತರಾಟೆಗೆ ತೆಗೆದುಕೊಂಡಿರುವ ಮಾಜಿ ಸಚಿವ ಕಿ ಕಿಶೋರ್ ಚಂದ್ರ ರವರು ಇಡೀ ದೇಶದ ಕಾಂಗ್ರೆಸ್ ನಾಯಕರಿಗೆ ಸ್ಪಷ್ಟ ಸಂದೇಶವನ್ನು ಸಾರಿದ್ದಾರೆ. ಇದರಿಂದ ಆಂಧ್ರ ಪ್ರದೇಶ ಕಾಂಗ್ರೆಸ್ ಮತ್ತೊಮ್ಮೆ ನೆಲ ಕಚ್ಚುವುದು ಖಚಿತ ವಾದಂತೆ ಕಾಣುತ್ತಿದೆ. ಅಷ್ಟಕ್ಕೂ ಆ ಪತ್ರದಲ್ಲಿ ಏನಿದೆ ಗೊತ್ತಾ?

ಕಾಂಗ್ರೆಸ್ ಪಕ್ಷವು ಆಂಧ್ರಪ್ರದೇಶದಲ್ಲಿ ಅವನತಿಯತ್ತ ಸಾಗುತ್ತಿದೆ ರಾಹುಲ್ ಗಾಂಧಿ ರವರು ಕಳೆದ 4 ವರ್ಷಗಳಲ್ಲಿ ಯಾವುದೇ ದಿಟ್ಟ ಹೆಜ್ಜೆಯನ್ನು ತೆಗೆದುಕೊಂಡಿಲ್ಲ. ಇದರಿಂದ ಸಾಮಾನ್ಯವಾಗಿಯೇ ಕಾಂಗ್ರೆಸ್ ಪಕ್ಷವು ಇಡೀ ಆಂಧ್ರಪ್ರದೇಶದಲ್ಲಿ ಅವನತಿ ಕಾಣುವುದು ಖಚಿತವಾಗಿದೆ ಆದ ಕಾರಣದಿಂದ ನಾನು ಕಾಂಗ್ರೆಸ್ ಪಕ್ಷದಿಂದ ದೂರ ಸರಿಯುತ್ತೀದ್ದೇನೆ, ಎಂದು ತಮ್ಮ ಪತ್ರದ ಮೂಲಕ ರಾಹುಲ್ ಗಾಂಧಿ ಅವರಿಗೆ ತಿಳಿಸಿದ್ದಾರೆ.

ಆಂಧ್ರಪ್ರದೇಶದ ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ವಹಿಸಿದ್ದ ಸಚಿವ ವಿ ಕಿಶೋರ್ ಚಂದ್ರ ರವರು ಕಾಂಗ್ರೆಸ್ ಪಕ್ಷವನ್ನು ತೊರೆದಿರುವ ಕಾರಣ ಕಾಂಗ್ರೆಸ್ ಪಕ್ಷವು ಅನಾಥ ವಾದಂತೆ ಭಾಸವಾಗುತ್ತಿದೆ. ತಮ್ಮದೇ ಆದ ವರ್ಚಸ್ಸನ್ನು ಬೆಳೆಸಿಕೊಂಡಿದ್ದ ಕಿಶೋರ್ ಚಂದ್ರ ರವರು ಬಿಜೆಪಿಗೆ ಸೇರುವ ಸಾಧ್ಯತೆಗಳು ಹೆಚ್ಚಾಗಿದ್ದು ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಒಂದು ವೇಳೆ ಅದೇ ನಡೆದಲ್ಲಿ ಆಂಧ್ರಪ್ರದೇಶದಲ್ಲಿ ನೆಲೆಯೂರಲು ಇನ್ನಿಲ್ಲದ ಸಾಹಸವನ್ನು ಮಾಡುತ್ತಿರುವ ಬಿಜೆಪಿ ಪಕ್ಷಕ್ಕೆ ಮತ್ತಷ್ಟು ಬಲ ತುಂಬಿಕೊಳ್ಳಲಿದ್ದು, ದಿನೇದಿನೇ ನರೇಂದ್ರ ಮೋದಿ ರವರ ವಿರೋಧಿಗಳು ಹೆಚ್ಚಾಗುತ್ತಿದ್ದಂತೆ ಅವರ ಬೆಂಬಲಿಗರು ಸಹ ಹೆಚ್ಚಾಗಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಎಲ್ಲಾ ರೀತಿಯ ಶ್ರಮ ವಹಿಸಿದ್ದಾರೆ ಎಂಬ ಆಶಾಭಾವನೆ ನಮೋ ಭಕ್ತರಲ್ಲಿ ಮೂಡಿದೆ.

Post Author: Ravi Yadav