ಎಸ್ ಎಂ ಕೃಷ್ಣ ಭರ್ಜರಿ ಬೇಟೆ: ಸುಮಲತಾ ಬಿಜೆಪಿಗೆ !!

ಕಳೆದ ಕೆಲವು ದಿನಗಳಿಂದ ಮಂಡ್ಯ ಲೋಕಸಭಾ ಕ್ಷೇತ್ರವು ಭಾರಿ ಸದ್ದು ಮಾಡುತ್ತಿದೆ. ಈ ಹಿಂದೆ ಯಾವ ಚುನಾವಣೆಯಲ್ಲಿಯೂ ಸಹ ಇಷ್ಟು ಸದ್ದು ಮಾಡದ ಮಂಡ್ಯ ಲೋಕಸಭಾ ಕ್ಷೇತ್ರವು ಪ್ರತಿಷ್ಠಾ ಕಣವಾಗಿ ಮಾರ್ಪಟ್ಟಿದೆ. ಅಂಬರೀಶ್ ಅಣ್ಣನವರ ಪತ್ನಿ ಸುಮಲತಾ ಅಂಬರೀಶ್ ರವರು ಮಂಡ್ಯ ಲೋಕಸಭಾ ಕ್ಷೇತ್ರವನ್ನು ಭಾರಿ ಕುತೂಹಲ ಮನೆ ಮಾಡುವಂತೆ ಮಾರ್ಪಡಿಸಿದ್ದಾರೆ.

ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುವ ನಿರ್ಧಾರ ಮಾಡಿರುವುದರಿಂದ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ಕುಮಾರಸ್ವಾಮಿ ರವರ ಮಗ ನಿಖಿಲ್ ಕುಮಾರಸ್ವಾಮಿ ರವರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿರುವುದರಿಂದ ಸಾಮಾನ್ಯವಾಗಿ ಇದು ಅಂಬರೀಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಎಲ್ಲಾ ಅಭಿಮಾನಿಗಳು ಸುಮಲತಾ ರವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡುತ್ತಾ ಬಂದಿದ್ದಾರೆ.

ಆದರೆ ಕೇವಲ ಟಿಕೆಟ್ ನೀಡಲು ನಿರಾಕರಿಸಿ ಸುಮ್ಮನಾಗದ ಜೆಡಿಎಸ್ ಪಕ್ಷದ ನಾಯಕರು ಸುಮಲತಾ ರವರ ಬಗ್ಗೆ ಮನಬಂದಂತೆ ಹಲವಾರು ಹೇಳಿಕೆಗಳನ್ನು ನೀಡಿದ್ದಾರೆ ಮೊದಲು ಸುಮಲತಾ ರವರು ಮಂಡ್ಯ ಜಿಲ್ಲೆಯ ವರೆ ಅಲ್ಲ ಎಂದು ನಾಯಕರು ಆರೋಪಿಸಿದರೇ, ಇನ್ನು ಕೆಲವು ನಾಯಕರು ಸುಮಲತಾ ರವರು ಗೌಡತಿ ಅಲ್ಲ ಎಂದು ಜಾತಿಯ ವಿಷಯ ಎಳೆದು ತಂದಿದ್ದಾರೆ ಇಷ್ಟು ಸಾಲದು ಎಂಬಂತೆ ಕುಮಾರಸ್ವಾಮಿ ರವರು ಮಂಡ್ಯ ಜಿಲ್ಲೆಗೆ ಸುಮಲತಾ ರವರ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.

ಈ ಎಲ್ಲ ಹೇಳಿಕೆಗಳಿಗೆ ಈಗಾಗಲೇ ಅಂಬರೀಶ್ ಅವರ ಅಭಿಮಾನಿಗಳು ಜೆಡಿಎಸ್ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟು ಸಾಲದು ಎಂಬಂತೆ ಹಲವಾರು ಕಾಂಗ್ರೆಸ್ ನಾಯಕರು ಸಹ ಜೆಡಿಎಸ್ ಪಕ್ಷದ ವಿರುದ್ಧ ತಿರುಗಿಬಿದ್ದಿದ್ದು ಸುಮಲತಾ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದರು. ಆದರೆ ಕುಟುಂಬ ಪಕ್ಷ ಎಂದೇ ಹೆಸರಾಗಿರುವ ಜೆಡಿಎಸ್ ಪಕ್ಷವು ಸುಮಲತಾ ರವರಿಗೆ ಟಿಕೆಟ್ ನೀಡಲು ಒಪ್ಪುತ್ತಿಲ್ಲ. ಇದೇ ಕಾರಣಕ್ಕಾಗಿ ಹಲವಾರು ನಾಯಕರು ಸುಮಲತಾ ರವರನ್ನು ಬಿಜೆಪಿ ಪಕ್ಷಕ್ಕೆ ಕರೆತರಲು ಪ್ರಯತ್ನ ಮಾಡುತ್ತಿದ್ದಾರೆ.

ಇದರ ನಡುವೆ ಯೋಗೇಶ್ವರ್ ಹಾಗೂ ಆರ್ ಅಶೋಕ್ ರವರು ಮಂಡ್ಯ ಜಿಲ್ಲೆಯಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಕಾರಣ ಯಡಿಯೂರಪ್ಪನವರಿಗೆ ಸುಮಲತಾ ಅವರನ್ನು ಬಿಜೆಪಿಗೆ ಕರೆತರುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ಯಡಿಯೂರಪ್ಪನವರು ಸಹ ಗ್ರೀನ್ ಸಿಗ್ನಲ್ ನೀಡಿದ್ದು, ಸುಮಲತಾ ಅವರ ಮನವೊಲಿಸುವುದು ರಲ್ಲಿ ನಿರತರಾಗಿದ್ದಾರೆ ಈ ಎಲ್ಲಾ ವಿದ್ಯಮಾನಗಳ ನಡುವೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಶಾಕ್ ನೀಡುವಂತೆ ಕಳಂಕವೇ ಇಲ್ಲದ ನಾಯಕ ಎಂದು ಹೆಸರು ಪಡೆದಿರುವ ಮಾಜಿ ಮುಖ್ಯಮಂತ್ರಿ ಗಳ್ಆಗಿರುವ ಎಸ್ ಎಂ ಕೃಷ್ಣ ಅವರು ಕಣಕ್ಕೆ ಇಳಿದಿದ್ದಾರೆ.

ಸುಮಲತಾ ಅಂಬರೀಶ್ ಅವರು ಭಾರತೀಯ ಜನತಾ ಪಕ್ಷವನ್ನು ಸೇರಿಕೊಳ್ಳುವ ಎಲ್ಲಾ ಸಾಧ್ಯತೆಗಳು ಇವೆ ಎಂದು ಮಾತುಗಳು ಕೇಳಿ ಬರುತ್ತಿದ್ದ ಸಮಯದಲ್ಲಿ ಮಾಜಿ ಮುಖ್ಯಮಂತ್ರಿಗಳು ಸುಮಲತಾ ಅವರನ್ನು ತಮ್ಮ ಮನೆಗೆ ಬರುವಂತೆ ಆಹ್ವಾನಿಸಿದ್ದಾರೆ. ಎಸ್ ಎಂ ಕೃಷ್ಣ ರವರ ಆಹ್ವಾನವನ್ನು ಸ್ವೀಕರಿಸಿರುವ ಸುಮಲತಾ ರವರು ಮನೆಗೆ ಬರುತ್ತೇನೆ ಎಂದು ಒಪ್ಪಿಗೆ ನೀಡಿದ್ದಾರೆ.

ಇದೇ ಇದೇ ವೇಳೆ ಸುಮಲತಾ ರವರನ್ನು ಬಿಜೆಪಿ ಪಕ್ಷದಿಂದ ಸ್ಪರ್ಧಿಸುವಂತೆ ಎಸ್ ಎಂ ಕೃಷ್ಣ ರವರು ಮನವೊಲಿಸಲು ಇದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ ಒಂದು ವೇಳೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಸುಮಲತಾ ರವರು ಒಪ್ಪದೇ ಇದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಾಯ ಮಾಡಲಿದ್ದಾರೆ .ಒಂದು ವೇಳೆ ಸುಮಲತಾ ರವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು ಬಿಜೆಪಿ ಪಕ್ಷವೂ ಸಹ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿ ತನ್ನ ಸ್ಪರ್ಧೆ ಯನ್ನು ಹಿಂತೆಗೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ.

ಇದುವರೆಗೂ ಬಿಜೆಪಿ ಪಕ್ಷದ ನೆಲೆಯೇ ಕಂಡು ಬರೆದ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಬಿಜೆಪಿ ತಯಾರಿ ನಡೆಸಿದೆ. ಇತ್ತ ಕುಮಾರಸ್ವಾಮಿ ರವರು ತಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ಮಂಡ್ಯ ಜಿಲ್ಲೆ ಸೂಕ್ತ ಎಂದು ಆಯ್ಕೆ ಮಾಡಿರುವ ಸಂದರ್ಭದಲ್ಲಿ ಬೇರೆಯವರಿಗೆ ಟಿಕೆಟ್ ದೊರಕುವುದು ಕಷ್ಟ. ಇನ್ನು ಅಂಬರೀಶ್ ಅಭಿಮಾನಿಗಳ ಮಾತನ್ನು ಕೇಳಿದರೆ ಸುಮಲತಾ ರವರು ಯಾವ ಪಕ್ಷದಿಂದ ಸ್ಪರ್ಧೆ ಮಾಡಿದರೂ ಸಹ ಗೆದ್ದು ಬರುತ್ತಾರೆ ಎಂದು ಅನಿಸುತ್ತಿದೆ.

Post Author: Ravi Yadav