ಆಟೋ ದಲ್ಲಿ ಪ್ರಯಾಣಿಸಿ ಮಮತಾಗೆ ಬಾರಿ ಗುದ್ದು ನೀಡಿದ ಚೌಹಾನ್

ಆಟೋ ದಲ್ಲಿ ಪ್ರಯಾಣಿಸಿ ಮಮತಾಗೆ ಬಾರಿ ಗುದ್ದು ನೀಡಿದ ಚೌಹಾನ್

ಕಳೆದ ಕೆಲವು ದಿನಗಳಿಂದ ತನ್ನನ್ನು ತಾನು ಮಹಾಘಟಬಂಧನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಲು ಮಮತಾ ರವರು ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತಾ ನರೇಂದ್ರ ಮೋದಿ ರವರ ಪ್ರತಿ ಹೆಜ್ಜೆಗೂ ಅಡ್ಡಗಾಲು ಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಆದರೆ ಮಮತಾ ರವರ ಎಲ್ಲಾ ಯೋಜನೆಗಳು ಟುಸ್ ಆಗಿದ್ದು ಮಮತಾ ಬ್ಯಾನರ್ಜಿ ರವರಿಗೆ ಭಾರಿ ಮುಖಭಂಗ ಉಂಟಾಗುತ್ತಿದೆ.

ಮೊನ್ನೆಯಷ್ಟೇ ಸಿಬಿಐ ಅಧಿಕಾರಿ ಗಳನ್ನು ಬಂಧಿಸಿ ನರೇಂದ್ರ ಮೋದಿ ರವರ ಮೇಲೆ ಆರೋಪ ಮಾಡಿದ ಮಮತಾ ರವರು ತಮ್ಮ ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳಲು ಸುಪ್ರೀಂಕೋರ್ಟ್ ವಿಚಾರಣೆಯ ವೇಳೆ ಉಲ್ಟಾ ಹೊಡೆದು ಬಂಧಿಸುವ ಪ್ರಯತ್ನ ಮಾಡಿದ್ದಾರೆ ಎಂದು ನಾವು ತಪ್ಪು ತಿಳಿದುಕೊಂಡೆವು ವಿಚಾರಣೆಗೆ ನಮಗೆ ಯಾವುದೇ ತೊಂದರೆ ಇಲ್ಲ ಎಂದು ಯು ಟರ್ನ್ ಹೊಡೆದು ಧರಣಿಯನ್ನು ಕೊನೆಗೊಳಿಸಿ ಏನು ಆಗಿಲ್ಲ ಎಂಬಂತೆ ಗೆದ್ದಿದ್ದೇನೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನಪಟ್ಟರು.

ಅಷ್ಟೇ ಅಲ್ಲದೆ ಬಿಜೆಪಿ ಪಕ್ಷದ ಚಾಣಕ್ಯ ಅಮಿತ್ ಶಾ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಗಳಾಗಿರುವ ಯೋಗಿ ಆದಿತ್ಯನಾಥ್ ರವರ ಹೆಲಿಕಾಪ್ಟರ್ ಗಳನ್ನು ರಾಜ್ಯದಲ್ಲಿ ಇಳಿಯಲು ಅನುಮತಿ ನಿರಾಕರಿಸುವ ಮೂಲಕ ಮೊಂಡುತನ ಪ್ರದರ್ಶಿಸುತ್ತಿದ್ದ ಮಮತಾ ರವರು ಅದೇ ರೀತಿಯ ದೋರಣೆಯನ್ನು ಶಾಂತ ಸ್ವರೂಪಿ ಎನಿಸಿಕೊಂಡಿರುವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರದರ್ಶಿಸಿದ್ದಾರೆ. ಆದರೆ ಶಾಂತ ಸ್ವರೂಪಿ ಯಾಗಿದ್ದರೂ, ರಾಜಕೀಯದಲ್ಲಿ ಚಾಣಾಕ್ಷ ನಡೆ ಇಡುವ ಶಿವರಾಜ್ ಸಿಂಗ್ ಚೌಹಾನ್ ರವರು ಮಮತಾ ರವರಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ.

ಹೌದು ಬಿಜೆಪಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಚೌಹಾಣ್ ಅವರು ಪಶ್ಚಿಮ ಬಂಗಾಳದಲ್ಲಿ ಎದುರಾಳಿಗಳನ್ನು ಉದ್ದೇಶಿಸಿ ಭಾಷಣ ಮಾಡಬೇಕಿತ್ತು. ಆದರೆ ಹೆಲಿಕ್ಯಾಪ್ಟರ್ ಇಳಿಸಲು ನಿರಾಕರಿಸಿದ ಪರಿಣಾಮ ಮೊದಲು ರ್ಯಾಲಿಯನ್ನು ರದ್ದು ಗೊಳಿಸದೆ ಬೇರೆ ದಾರಿ ಇರಲಿಲ್ಲ. ಆದ ಕಾರಣ ಮೊದಲ ರಾಲಿಯನ್ನು ರದ್ದುಗೊಳಿಸಲಾಯಿತು. ಇಷ್ಟಕ್ಕೆ ಸುಮ್ಮನೆ ಕೂರದ ಶಿವರಾಜ್ ಸಿಂಗ್ ಚೌಹಾಣ್ ಅವರು ತಕ್ಷಣವೇ ಎಚ್ಚೆತ್ತುಕೊಂಡು ಕಲ್ಕತ್ತಾ ಗೆ ವಿಮಾನದಲ್ಲಿ ಪ್ರಯಾಣಿಕರ ಜೊತೆ ಸಾಮಾನ್ಯವಾಗಿ ಪ್ರಯಾಣ ಮಾಡಿ ಕಲ್ಕತ್ತಾದಿಂದ 137 ಕಿಲೋಮೀಟರ್ ದೂರದಲ್ಲಿರುವ ಖರಗ್ಪುರ ಕ್ಕೆ ರಸ್ತೆ ಮೂಲಕ ಕಾರು ಸೇರಿದಂತೆ ಆಟೋದಲ್ಲಿ ಪ್ರಯಾಣ ಬೆಳೆಸಿದರು.

ಖರಗ್ಪುರ ರದಲ್ಲಿ ಮಾತನಾಡಿರುವ ಶಿವರಾಜ್ ಸಿಂಗ್ ಚೌಹಾನ್ ರವರು ತಮ್ಮ ಶಾಂತ ಸ್ವರೂಪಿ ಮಾತುಗಳನ್ನು ಪಕ್ಕಕ್ಕಿಟ್ಟು ಮಮತಾ ಬ್ಯಾನರ್ಜಿ ಅವರ ವಿರುದ್ಧ ಗುಡುಗಿದ್ದಾರೆ. ನಾವು ಕೈಕಟ್ಟಿ ಕೂರುವ ವರಲ್ಲ ಮಮತಾ ಬ್ಯಾನರ್ಜಿ ರವರ ದುರಾಡಳಿತವನ್ನು ಕೊನೆಗಾಣಿಸುವ ವರೆಗೆ ನಾನು ನಿದ್ದೆ ಮಾಡುವುದಿಲ್ಲ. ಬಿಜೆಪಿ ಪಕ್ಷವು ತನ್ನ ಹೋರಾಟವನ್ನು ಎಂದಿನಂತೆ ಮುಂದುವರಿಸಲಿದೆ.

ನೀವು ನಮ್ಮನ್ನು ಎಷ್ಟೇ ತಡೆಯಲು ಪ್ರಯತ್ನಿಸಿದರು ಬಿಜೆಪಿ ಪಕ್ಷದ ಪ್ರತಿಯೊಬ್ಬ ನಾಯಕರು ಮತ್ತೆ ಮತ್ತೆ ಬರುತ್ತೇವೆ ಮಹಾಘಟಬಂಧನ್ ಎಂಬುವುದು ವಧುವೇ ಇಲ್ಲದ ಒಂದು ಮದುವೆ ಪಾರ್ಟಿ ಎಂದು ಮಮತಾ ರವರ ಕಾಲೆಳೆದಿದ್ದಾರೆ. ಇದೇ ಸಮಯದಲ್ಲಿ ಮಹಾ ಘಟಬಂಧನ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಯೋಚಿಸಬೇಕು ಎಂದು ಮಮತಾ ರವರಿಗೆ ಬಹಿರಂಗ ಸವಾಲು ಎಸೆದಿದ್ದಾರೆ.

ಇನ್ನು ಈ ಮಾತುಗಳನ್ನು ಕೇಳಲು ಬಂದಿದ್ದ ಜನಸಾಗರವನ್ನು ಕಂಡು ಒಂದು ಕ್ಷಣ ಮಮತಾ ರವರು ದಿಗ್ಬ್ರಮೆ ಕೊಂಡಿದ್ದಾರೆ. ಕೆಲವು ಅಂಕಿ ಅಂಶಗಳ ಪ್ರಕಾರ ಅಮಿತ್ ಶಾ ರವರ ಭಾಷಣಕ್ಕಿಂತಲೂ ಹೆಚ್ಚು ಜನ ಶಿವರಾಜ್ ಸಿಂಗ್ ಚೌಹಾನ್ ರವರ ಭಾಷಣ ಕೇಳಲು ಹಾಜರಿದ್ದರು ಎಂಬ ಮಾಹಿತಿ ಹೊರ ಬಿದ್ದಿದ್ದು ದಿನೇ ದಿನೇ ಬಿಜೆಪಿ ಪಕ್ಷದ ವರ್ಚಸ್ಸು ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗುತ್ತಿದೆ. ಈ ಮೂಲಕ ಮತ್ತೊಂದು ರಾಜ್ಯವನ್ನು ಕೇಸರಿಮಯ ವನ್ನಾಗಿ ಮಾಡಲು ಬಿಜೆಪಿ ಪಕ್ಷವು ಇನ್ನಿಲ್ಲದ ಪ್ರಯತ್ನ ವನ್ನು ನಡೆಸುತ್ತಿದ್ದು, ಆ ಪ್ರಯತ್ನಕ್ಕೆ ಜನರೂ ಸಹ ಸರಿಯಾಗಿ ಸ್ಪಂದಿಸುತ್ತಿದ್ದಾರೆ ಎಂದು ಅನಿಸುತ್ತಿದೆ.