ಮಮತಾ ಗೆ ಬಿಗ್ ಶಾಕ್: ಮಮತಾ ವಿರುದ್ಧ ಸಿಡಿದೆದ್ದು ಬಿಜೆಪಿ ಸೇರಿದ ಐಪಿಎಸ್ ಅಧಿಕಾರಿ

ಮಮತಾ ಗೆ ಬಿಗ್ ಶಾಕ್: ಮಮತಾ ವಿರುದ್ಧ ಸಿಡಿದೆದ್ದು ಬಿಜೆಪಿ ಸೇರಿದ ಐಪಿಎಸ್ ಅಧಿಕಾರಿ

ಕಳೆದ ಕೆಲವು ಗಂಟೆಗಳಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಳಾಗಿರುವ ಮಮತಾ ಬ್ಯಾನರ್ಜಿ ರವರು ಭಾರಿ ಸದ್ದು ಮಾಡುತ್ತಿದ್ದಾರೆ ತಮ್ಮ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತಿರುವ ಮಮತಾ ಬ್ಯಾನರ್ಜಿ ರವರು ಸಿಬಿಐ ಅಧಿಕಾರಿಗಳು ಬಂಧಿಸಿ ಇಡೀ ದೇಶವನ್ನು ಬೆಚ್ಚಿ ಬೀಳುವಂತೆ ಮಾಡಿದ್ದಾರೆ.

ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳದ ಅಧಿಕಾರಿಗಳನ್ನು ವಿಚಾರಿಸಲು ಅನುಮತಿ ನೀಡಿದರು ಸಹ ಕೇವಲ ಪಶ್ಚಿಮ ಬಂಗಾಳದಲ್ಲಿ ರಾಜ್ಯ ಸರ್ಕಾರ ಸಿಬಿಐ ಸಂಸ್ಥೆಯನ್ನು ನಿಷೇಧಿಸಿದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಸಿಬಿಐ ಅಧಿಕಾರಿಗಳನ್ನು ಬಂಧಿಸಿ  ಮೊಟ್ಟ ಮೊದಲ ಬಾರಿಗೆ ದೇಶಕ್ಕೆ ಮಸಿ ಬಳಿದಿದ್ದಾರೆ. ಇನ್ನು ಕೆಲವು ಕುತಂತ್ರಿ ರಾಜಕಾರಣಿಗಳು ಕೇವಲ ಮೋದಿ ಅವರನ್ನು ದೂಷಿಸುವುದು ಉದ್ದೇಶದಿಂದ  ಮಮತಾ ರವರ ಕಾರ್ಯಕ್ಕೆ ಬೆಂಬಲ ನೀಡುತ್ತಿದ್ದಾರೆ.

ಇನ್ನು ಈ ಎಲ್ಲಾ ವಿದ್ಯಮಾನಗಳ ನಡುವೆ ಮಮತಾ ರವರ ಪರ ಹಾಗೂ ವಿರೋಧದ ಹೇಳಿಕೆಗಳು ಭಾರಿ ಚರ್ಚೆಗೆ ಗ್ರಾಸವಾಗಿದೆ. ಮೊದಲಿನಿಂದಲೂ ತನ್ನ ಸರ್ವಾಧಿಕಾರಿ ಧೋರಣೆಯನ್ನು ಜನರ ಮೇಲೆ ಏರುತ್ತ ಬಂದಿರುವ ಮಮತಾ ಬ್ಯಾನರ್ಜಿ ರವರು ಮೋದಿ ಅವರ ಸಮಾರಂಭದಲ್ಲಿ ಜನ ಸೇರಿದ್ದನ್ನು ಕಂಡು ಒಂದು ಕ್ಷಣ ಬೆಚ್ಚಿ ಬೆರಗಾಗಿದ್ದಾರೆ,  ಸೋಲುತ್ತೇನೆ ಎಂದು ದೃಢಪಡಿಸಿಕೊಂಡು ಬೇರೆ ವಿಧಿಯಿಲ್ಲದೆ ವಾಮಮಾರ್ಗ ತುಳಿದು ನರೇಂದ್ರ ಮೋದಿ ಅವರನ್ನು ಸೋಲಿಸುವ ಯತ್ನ ಮಾಡುತ್ತಿದ್ದಾರೆ.

ಇನ್ನು ಇದರ ಬಗ್ಗೆ ಮಾತನಾಡಿರುವ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ರವರು ಆಧಾರಸಹಿತ ಮಮತಾ ಬ್ಯಾನರ್ಜಿ ರವರ ವಿರುದ್ಧ ವಾಗ್ದಾಳಿ ನಡೆಸಿದ್ದು 2013 ರಲ್ಲಿ ಈ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರಿದಂತೆ ಇನ್ನೂ ಹಲವಾರು ಪಕ್ಷಗಳು ಇದನ್ನು ಬೆಂಬಲಿಸಿದ್ದವು ಆದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಮತಾ ರವರಿಗೆ ಸಿಬಿಐ ಸಂಸ್ಥೆಯ ಮೇಲೆ ಭಯ ಆರಂಭವಾಗಿದೆ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶ ನೀಡಿದರೂ ಸಹ ಸುಪ್ರೀಂ ಕೋರ್ಟ್ ಆದೇಶಕ್ಕೆ ಕ್ಯಾರೇ ಎನ್ನದ ಮಮತಾ ಬ್ಯಾನರ್ಜಿ ರವರ ಸರ್ಕಾರದ ಮೇಲೆ ಕೇಂದ್ರ ಸರ್ಕಾರವು ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಎಲ್ಲರೂ ಆಗ್ರಹಿಸುತ್ತಾ ಬಂದಿದ್ದಾರೆ. ಯಾಕೆಂದರೆ ದೇಶದಲ್ಲಿ ಸುವ್ಯವಸ್ಥೆ ಕಾಪಾಡುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿರುತ್ತದೆ. ಕೇವಲ ಕೇಂದ್ರ ಸರ್ಕಾರವನ್ನು ಧೂಷಿಸುವ ಉದ್ದೇಶದಿಂದ ಸಿಬಿಐ ಅಧಿಕಾರಿಗಳನ್ನು ಬಂಧಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಎಲ್ಲರ ಅಭಿಪ್ರಾಯ ವಾಗಿದೆ.

ಇಷ್ಟೆಲ್ಲಾ ವಿದ್ಯಮಾನಗಳ ನಡುವೆ ಮೊದಲಿನಿಂದಲೂ ಮಮತಾ ಬ್ಯಾನರ್ಜಿ ರವರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಐಪಿಎಸ್ ಅಧಿಕಾರಿಯಾಗಿರುವ ಭಾರತಿ ಘೋಷ ಎಂಬುವವರು ಧ್ವನಿ ಎತ್ತುತ್ತ ಬಂದಿರುವುದು ನಿಮಗೆ ತಿಳಿದಿರುವ ವಿಷಯ. ಈಗ ಮತ್ತೊಮ್ಮೆ ಬ್ಯಾನರ್ಜಿ ರವರು ತಮ್ಮ ಸರ್ವಾಧಿಕಾರಿ ಧೋರಣೆಯನ್ನು ತೋರಿಸಿದ ಕಾರಣ ಬೇಸತ್ತು, ದೀದಿ ಅವರಿಗೆ ಸರಿಯಾದ ಪಾಠ ಕಲಿಸಬೇಕೆಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದಾರೆ.

ಈ ಮೂಲಕ ಬಿಜೆಪಿ ಪಕ್ಷಕ್ಕೆ ಪಕ್ಷಿಮ ಬಂಗಾಳ ದಲ್ಲಿ ಮತ್ತೊಂದು ಬಲ ಸೇರಿದಂತಾಗಿದೆ ನೂರಕ್ಕೆ ನೂರರಷ್ಟು ಖಚಿತವಾಗಿ ಮಮತಾ ಬ್ಯಾನರ್ಜಿ ಅವರು ಮುಂದಿನ ಚುನಾವಣೆಯಲ್ಲಿ ಮಣ್ಣುಮುಕ್ಕ ಲಿದ್ದಾರೆ.