ಅಖಾಡಕ್ಕೆ ಯಡಿಯೂರಪ್ಪ: ಸುಮಲತಾ ಬಿಜೆಪಿಗೆ? ಛಿದ್ರ ವಾಗುತ್ತಾ ಜೆಡಿಎಸ್ ಭದ್ರಕೋಟೆ

ಬಿಜೆಪಿ ಅಲೆಯನ್ನು ತಡೆಯಲಾಗದೆ ಮೈತ್ರಿ ಪಕ್ಷಗಳು ಲೋಕಸಭಾ ಚುನಾವಣೆಯನ್ನು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಎದುರಿಸಲು ಸಿದ್ಧವಾಗುತ್ತಿವೆ. ಆದರೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ದೊಡ್ಡ ದೊಡ್ಡ ಸವಾಲು ಎದುರಾಗುತ್ತಿವೆ.ಇದರಿಂದ ಮೈತ್ರಿ ಸರ್ಕಾರದ ನಡುವೆ ಭಿನ್ನಮತ ಸೃಷ್ಟಿಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ ಇದಕ್ಕೆ ಜೆಡಿಎಸ್ ಪಕ್ಷದ ಭದ್ರಕೋಟೆ ಎನಿಸಿಕೊಂಡಿರುವ ಮಂಡ್ಯ ಜಿಲ್ಲೆಗೆ ಹೊರತಲ್ಲ.

ಅಂಬರೀಶ ರವರ ಅಗಲಿಕೆಯಿಂದ ಆಗಿ ಮಂಡ್ಯ ಜಿಲ್ಲೆಯು ಮತ್ತಷ್ಟು ಚುನಾವಣಾ ರಂಗು ಪಡೆದುಕೊಂಡಿದೆ. ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡು ಕಳೆದ ಬಾರಿ ಬಿಜೆಪಿ ಪಕ್ಷವನ್ನು ಎದುರಿಸಿದ್ದವು ಹಾಗೂ ಬಹಳ ಸುಲಭದ ಗೆಲುವಿನ ಕನಸು ಕಾಣುತ್ತಿದ್ದರು. ಬಿಜೆಪಿ ಪಕ್ಷವು ಸೋಲನ್ನು ಕಂಡರು  ಮಾಜಿ ಡಿಸಿಎಂ ಅಶೋಕ್ ರವರು ಚುನಾವಣಾ ನೇತೃತ್ವವನ್ನು ವಹಿಸಿ ಕೊಂಡ ಕಾರಣ ಬಿಜೆಪಿ ಪಕ್ಷವು ಇಲ್ಲಿಯವರೆಗೂ ಗಳಿಸದ ಶೇಕಡವಾರು ಮತಗಳನ್ನು ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಗಳಿಸಿತ್ತು.

ಇದರಿಂದ ಸಾಮಾನ್ಯವಾಗಿ ಬಿಜೆಪಿ ಪಕ್ಷವು ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ.ಇದಕ್ಕೆ ಪೂರಕವೆಂಬಂತೆ ಈಗ ಬಿಜೆಪಿ ಪಕ್ಷಕ್ಕೆ ಮತ್ತೊಂದು ಬಲ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು ಅಂಬರೀಶ್ ರವರ ಧರ್ಮಪತ್ನಿ ಯಾಗಿರುವ ಸುಮಲತಾ ರವರು ಬಿಜೆಪಿ ಪಕ್ಷ ಸೇರುವ ಸೂಚನೆಗಳು ಕಂಡು ಬಂದಿದೆ, ಅಷ್ಟಕ್ಕೂ ನಡೆದಿದ್ದಾದರೂ ಏನು ಗೊತ್ತಾ?

ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿರುವ ಕಾರಣ ಕಾಂಗ್ರೆಸ್ ಪಕ್ಷವು ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲು ಸಿದ್ಧವಾಗಿದೆ. ಆದ ಕಾರಣದಿಂದ ಜೆಡಿಎಸ್ ಕುಟುಂಬದಿಂದ ಯಾರದರೂ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು ಇದಕ್ಕೆ ಪೂರಕ ಎಂಬಂತೆ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತೇನೆ ಎಂದು ಘೋಷಿಸಿದರು. ಒಂದು ವೇಳೆ ಅಂಬರೀಶ್ ರವರ ಪುತ್ರ ನನ್ನ ಎದುರಾಳಿ ಯಾದರೆ ನಾನು ಅವರ ವಿರುದ್ಧ ಪ್ರಚಾರ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಖಡಕ್ ವಾರ್ನಿಂಗ್ ನೀಡಿದ್ದರು.

ಇದರಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾ ರವರು ಬೇರೆ ದಾರಿಯಿಲ್ಲದೆ ಇನ್ನೊಂದು ಪಕ್ಷದ ಕಡೆ ಮುಖ ನೋಡುವಂತಹ ಪರಿಸ್ಥಿತಿ ಎದುರಾಗಿದೆ. ಮಂಡ್ಯ ಜಿಲ್ಲೆಯಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಅಂಬರೀಶ್ ರವರ ಕುಟುಂಬದಿಂದ ಯಾರಾದರೂ ಸ್ಪರ್ಧಿಸಿದರೆ ಖಂಡಿತವಾಗಿಯೂ ಗೆಲುವು ಖಚಿತ.

ಇದನ್ನು ಅರಿತುಕೊಂಡಿರುವ ಬಿಜೆಪಿ ಪಕ್ಷವು ಸುಮಲತಾ ರವರನ್ನು ಬಿಜೆಪಿ ಪಕ್ಷಕ್ಕೆ ಕರೆತರಲು ನಿರ್ಧರಿಸಿದೆ. ಇದನ್ನು ಅರಿತುಕೊಂಡ ಮಾಜಿ ಡಿಸಿಎಂ ಅಶೋಕ್ ರವರು ಹಾಗೂ ಬಿಜೆಪಿ ಪಕ್ಷದ ನಾಯಕ ಯೋಗೇಶ್ವರ್ ರವರು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಯಡಿಯೂರಪ್ಪನವರಿಗೆ ಕರೆ ನೀಡಿದ್ದಾರೆ ಹಾಗೂ ಸುಮಲತಾ ರವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡುವಂತೆ ಆಗ್ರಹಿಸಿ ದ್ದಾರೆ.

ಜೆಡಿಎಸ್ ಪಕ್ಷದ ಭದ್ರಕೋಟೆ ಎನಿಸಿಕೊಂಡಿರುವ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವು ತನ್ನ ಪಾರುಪತ್ಯವನ್ನು ಸ್ಥಾಪಿಸಲು ಇದೇ ಸರಿಯಾದ ಸಮಯ ಎಂದು ಅರಿತುಕೊಂಡಿರುವ ಯಡಿಯೂರಪ್ಪನವರು ಸ್ವತಹ ತಾವೇ ಅಖಾಡಕ್ಕೆ ಇಳಿಯಲು ನಿರ್ಧರಿಸಿದ್ದಾರೆ ಇದರಿಂದ ಲೋಕಸಭಾ ಚುನಾವಣಾ ಕಣಕ್ಕೆ ಮತ್ತಷ್ಟು ರಂಗು ಬಂದಿದ್ದು ಮೈತ್ರಿ ಸರ್ಕಾರ ತನ್ನ ಕುಟುಂಬ ಹೊರತುಪಡಿಸಿ ಬೇರೆಯವರಿಗೆ ಅಂದರೆ ಸುಮಲತಾ ರವರಿಗೆ ಟಿಕೆಟ್ ನೀಡಬಹುದು ಅಥವಾ ಸುಮಲತಾ ರವರು ಬಿಜೆಪಿ ಪಕ್ಷಕ್ಕೆ ಬರಲಿದ್ದಾರೆ ಎಂಬ ಎರಡು ಪ್ರಶ್ನೆಗಳು ಕಾಡತೊಡಗಿವೆ.

ಆದರೆ ಇಲ್ಲಿಯವರೆಗೂ ಜೆಡಿಎಸ್ ಪಕ್ಷವು ತನ್ನ ಕುಟುಂಬವನ್ನು ಹೊರತುಪಡಿಸಿ ಉಳಿದ ಯಾರಿಗೂ ಅಷ್ಟಾಗಿ ಮನ್ನಣೆ ನೀಡಿಲ್ಲ. ಕುಟುಂಬದ ತದನಂತರ ಉಳಿದ ಸೀಟುಗಳನ್ನು ಮಾತ್ರ ಬೇರೆ ನಾಯಕರಿಗೆ ಬಿಟ್ಟುಕೊಡುವ ಸ್ವಭಾವ ಜೆಡಿಎಸ್ ಪಕ್ಷದ್ದು ,ಆದ ಕಾರಣ ಸುಮಲತ ರವರಿಗೆ ಟಿಕೆಟ್ ಸಿಗುವುದು ಅನುಮಾನ ಇದರಿಂದ ಬಿಜೆಪಿ ಪಕ್ಷಕ್ಕೆ ಮತ್ತೊಂದು ಬಲ ಸೇರಿಕೊಳ್ಳಲಿದ್ದು ಬಿಜೆಪಿ ಪಕ್ಷವು ಮಂಡ್ಯ ಜಿಲ್ಲೆಯಲ್ಲಿ ಗೆದ್ದು ನೆಲೆಯೂರಲು ಇದೆ ಸರಿಯಾದ ಸಮಯ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.

Post Author: Ravi Yadav