ಬಜೆಟ್ ಅಖಾಡಕ್ಕೆ ಜೇಟ್ಲಿ: ರೈತರಿಗೆ ಬಂಪರ್, ವಿರೋಧಿಗಳಿಗೆ ಶಾಕ್

ಕೇಂದ್ರದ ಮಧ್ಯಂತರ ಬಜೆಟ್ ಭಾರಿ ಸದ್ದು ಮಾಡುತ್ತಿದೆ. ವಿರೋಧ ಪಕ್ಷಗಳಿಗೆ ಕೇಂದ್ರ ಸರ್ಕಾರ ಸಮಾಜದ ಪ್ರತಿ ವರ್ಗದ ಜನರನ್ನು ಸಂತೃಪ್ತಿಗೊಳಿಸುವಂತೆ ಬಜೆಟ್ ಬಿಡುಗಡೆ ಮಾಡಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಂದಿನ ಎರಡು ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯುವುದರಿಂದ ಮೋದಿ ಭಯ ಈಗಾಗಲೇ ವಿರೋಧ ಪಕ್ಷಗಳಿಗೆ ಶುರುವಾಗಿದೆ.

ಇದೀಗ ಬಜೆಟ್ ಅಕಾಡಕ್ಕೆ ಅನಾರೋಗ್ಯದಿಂದ ಬಜೆಟ್ ಸಮಯದಲ್ಲಿ ಸಂಸತ್ತಿನಲ್ಲಿ ಬಜೆಟ್ ಘೋಷಿಸಲಾಗದೆ, ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅರುಣ್ ಜೇಟ್ಲಿ ರವರು ಅಖಾಡಕ್ಕೆ ಇಳಿದಿದ್ದು, ರೈತರಿಗೆ ಸಿಹಿ ಸುದ್ದಿಯನ್ನು ನೋಡಿ ಚಿಂತೆಗೆ ಒಳಗಾಗಿದ್ದ ವಿರೋಧ ಪಕ್ಷಗಳಿಗೆ ಮತ್ತೊಂದು ಶಾಕ್ ನೀಡಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಡ ರೈತರಿಗೆ ಪ್ರತಿ ವರ್ಷಕ್ಕೆ ಆರು ಸಾವಿರ ರೂ ಘೋಷಿಸಲಾಗಿದೆ. ಕಾಂಗ್ರೆಸ್ ತನ್ನ ಆಡಳಿತ ಅವಧಿಯಲ್ಲಿ ಎಂದಿಗೂ ಉಳಿಸಿಕೊಳ್ಳದ ಘೋಷಣೆಯನ್ನು ಬಿಜೆಪಿ ಪಕ್ಷವು ಮಾಡಿರುವುದರಿಂದ ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷವು ಇದರಲ್ಲಿ ಹುಳುಕು ಹುಡುಕಿ ಪ್ರತಿಯೊಬ್ಬ ರೈತರಿಗೆ ದಿನಕ್ಕೆ ಕೇವಲ 17 ರೂ ನೀಡುತ್ತಿದೆ ಎಂದು ಟೀಕಿಸುತ್ತಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅರುಣ್ ಜೇಟ್ಲಿ ರವರು, ಕಾಂಗ್ರೆಸ್ ಪಕ್ಷವು ತಾನು ಯಾವುದು ಕಾಲೇಜು ಯೂನಿಯನ್ ಚುನಾವಣೆಯನ್ನು ಎದುರಿಸುತ್ತಿದ್ದೇನೆ ಎಂದು ಅರ್ಥವಿಲ್ಲದ ಮಾತುಗಳನ್ನು ಹಾಡುತ್ತಿದೆ ದೇಶದ 12 ಕೋಟಿ ಜನರಿಗೆ ಪ್ರತಿ ವರ್ಷ ಆರು ಸಾವಿರ ಹಣ ನೀಡಿ ರೈತರ ಆದಾಯವನ್ನು ಹೆಚ್ಚಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಕೇಂದ್ರ ಸರ್ಕಾರದ ಸಂಪನ್ಮೂಲಗಳು ಹೆಚ್ಚಾಗುತ್ತಿದ್ದಂತೆ ರೈತರಿಗೆ ಮತ್ತಷ್ಟು ಹಣ ಜಾಸ್ತಿ ಮಾಡುತ್ತೇನೆ, ಸದ್ಯಕ್ಕೆ ದೇಶದ ಖಜಾನೆಯಲ್ಲಿ ಇರುವ ಹಣವನ್ನು ಬಳಸಿಕೊಂಡು ಈ ಬಜೆಟ್ ತಯಾರಿಸಲಾಗಿದೆ.

ಸಾಲವನ್ನು ಪಡೆದು ರೈತರ ಮನವೊಲಿಸುವುದು ನಮ್ಮ ಉದ್ದೇಶವಲ್ಲ ಬದಲಾಗಿ ಇರುವ ಹಣದಲ್ಲಿ ರೈತರನ್ನು ಸಂತೃಪ್ತಿ ಗೊಳಿಸಿ ಅವರ ಆದಾಯವನ್ನು ಹೆಚ್ಚಿಸುವುದು ಯೋಜನೆಯ ಪ್ರಮುಖ ಗುರಿಯಾಗಿದೆ ಖಂಡಿತವಾಗಿಯೂ ಮತ್ತೊಮ್ಮೆ ನಾವು ಅಧಿಕಾರಕ್ಕೆ ಬರುತ್ತೇವೆ ಆಗ ಮತ್ತೊಮ್ಮೆ ರೈತರಿಗೆ ಸಹಾಯ ಧನವನ್ನು ಹೆಚ್ಚು ಮಾಡುತ್ತೇವೆ ಎಂದು ಹೇಳಿದ್ದಾರೆ.

ಈ ಹೇಳಿಕೆಯಿಂದ ಸಾಮಾನ್ಯವಾಗಿಯೇ ಮತ್ತಷ್ಟು ರೈತರು ಅರುಣ್ ಜೇಟ್ಲಿ ರವರ ಮೇಲೆ ನಂಬಿಕೆ ಇಡುತ್ತಾರೆ ಎಂಬುದು ಕಾಂಗ್ರೆಸ್ ಪಕ್ಷಕ್ಕೆ ತಿಳಿದುಬಂದಿದೆ. ತಾವು ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಸಹ ವಿರೋಧ ಪಕ್ಷಗಳ ಟೀಕೆಗಳಿಗೆ ಅಲ್ಲಿಂದಲೇ ಉತ್ತರ ನೀಡಿ ಅರುಣ್ ಜೇಟ್ಲಿ ರವರು  ರೈತರಿಗೆ ಮತ್ತಷ್ಟು ಭರವಸೆಯನ್ನು ನೀಡಿದ್ದಾರೆ. ಒಟ್ಟಿನಲ್ಲಿ  ರೈತರಿಗೆ ಮತ್ತಷ್ಟು ಒಳ್ಳೆಯ ದಿನಗಳು ಬರಲಿದೆ ಎಂಬ ಆಶಾಭಾವನೆ ಮತ್ತೊಮ್ಮೆ ಮೂಡಿದೆ.

Post Author: Ravi Yadav