ಸಿಡಿದೆದ್ದ ಅಣ್ಣಮಲೈ , ಒಂದೇ ದಿನದಲ್ಲಿ ಮಾಡಿದ ಕೆಲಸ ಏನು ಗೊತ್ತಾ??

ಡಿಸಿಪಿ ಅಣ್ಣಾಮಲೈ ರವರು ತಮ್ಮ ಕಾರ್ಯವೈಖರಿಯಿಂದಲೇ ಪ್ರಸಿದ್ಧರು. ದಕ್ಷ ಅಧಿಕಾರಿ ಯಾಗಿರುವ ಡಿಸಿಪಿ ಅಣ್ಣಮಲೈ ರವರು ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಒಂದೇ ದಿನದಲ್ಲಿ ಯಾವ ಡಿಸಿಪಿ ಕೆಲಸ ಮಾಡದ ರೀತಿಯಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಂಡು ಆದೇಶ ಹೊರಡಿಸಿದ್ದಾರೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಡಿಸಿಪಿ ರವರು ನನ್ನ ನಿರ್ಧಾರವನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ ಎಂದು ಸಹ ಹೇಳಿದ್ದಾರೆ.

ಇತ್ತೀಚೆಗಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ವಿಡಿಯೋ ಬಹಿರಂಗಗೊಂಡಿತ್ತು. ಮಹಿಳೆಯ ಮೇಲೆ ಹಲ್ಲೆ ನಡೆಸಿ ಹೊರದಬ್ಬುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೊರಬೀಳುತ್ತಿದ್ದಂತೆ ಪೊಲೀಸ್ ಇಲಾಖೆಗೆ ಭಾರಿ ಮುಖಭಂಗವಾಗಿದೆ. ಇದನ್ನು ಕೂಡಲೇ ಅರಿತುಕೊಂಡ ಅಣ್ಣ ಮಲಗಿ ರವರು ಕಣಕ್ಕಿಳಿದು ಸ್ವತಃ ತಾವೇ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು.

ಈ ಪ್ರಕರಣದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡ ಅಣ್ಣಮಲೈ ರವರು ಕೇವಲ ಒಂದು ದಿನದಲ್ಲಿ ಪ್ರಕರಣವನ್ನು ಬೇಧಿಸಿ, ಸಿಬ್ಬಂದಿಗಳಿಗೆ ತಕ್ಕ ಶಿಕ್ಷೆಯನ್ನು ನೀಡಿದ್ದಾರೆ. ಈ ಮೂಲಕ ಮತ್ತೊಮ್ಮೆ ತಮ್ಮ ಕಾರ್ಯ ಸಾಧನೆಗೆ ಅಣ್ಣಮಲೈ ರವರು ಭೇಷ್ ಎನಿಸಿಕೊಂಡಿದ್ದಾರೆ.

ಪ್ರಕರಣವನ್ನು ಭೇಧಿಸಿದ ನಂತರ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಗುಂಪುಗಾರಿಕೆ ನಡೆಯುತ್ತಿದ್ದು ಬಹಿರಂಗವಾಗಿದೆ. ಮಹಿಳೆ ಮೇಲೆ ಹಲ್ಲೆ ನಡೆಸಿದಾಗ ಪಿಎಸ್ಐ ನರಸಿಂಹಯ್ಯ ರವರ ವಿರೋಧಿ ಗುಂಪು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು ಇನ್ನೂ ಕೆಲವು ಗುಂಪು ಠಾಣೆಯಲ್ಲಿದ್ದ ರೈಫಲ್ ಗಳನ್ನು ಬಚ್ಚಿಟ್ಟು ತಮಗಾದ ಸೇವೆಗಳ ಮೇಲೆ ಅಧಿಕಾರಿಗಳಿಗೆ ದೂರು ಕೊಡುವ ಮೂಲಕ ಸಂಚು ರೂಪಿಸುತ್ತಿದ್ದರು ಎಂದು ತಮ್ಮ ಮನೆಯಲ್ಲಿ ನಡೆಯುತ್ತಿದ್ದ ಪ್ರಕರಣವನ್ನು ಅಣ್ಣನವರು ಬಿದಿಸಿ ಒಂದೇ ದಿನದಲ್ಲಿ ಸಿಬ್ಬಂದಿಗಳ ಮಧ್ಯೆ ನಡೆಯುತ್ತಿದ್ದ ಜಗಳವನ್ನು ತಡೆಯುವ ನಿಟ್ಟಿನಲ್ಲಿ ಏಕಾಏಕಿ 71 ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿದ್ದಾರೆ.

Post Author: Ravi Yadav