ಮದುವೆಯಾಗಲಿದ್ದಾರೆ ಈ ಖ್ಯಾತ ನಾಯಕ ಹಾಗೂ ನಾಯಕಿ

ಕಳೆದ ಕೆಲವು ದಿನಗಳಿಂದ ತಮಿಳುನಾಡು ಚಿತ್ರರಂಗದಲ್ಲಿ ಕೇಳಿಬರುತ್ತಿದ್ದ ಗುಸುಗುಸುಗಳಿಗೆ ಇಂದು ಬ್ರೇಕ್ ಬಿದ್ದಿದೆ. ಹಲವಾರು ದಿನಗಳಿಂದಲೂ ತಮಿಳಿನ ಖ್ಯಾತ ನಟರಾಗಿರುವ ನಾಯಕ ನಟ ಆರ್ಯ ಹಾಗೂ ಇತ್ತೀಚೆಗೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ನಟಿ ಸಯ್ಯೇಶಾ ರವರು ಮದುವೆಯಾಗುವುದು ಖಚಿತವಾಗಿದೆ.

ತೆಲುಗಿನಲ್ಲಿ ಖ್ಯಾತ ನಟರಾಗಿರುವ ನಾಗಾರ್ಜುನ್ ರವರ ಕಿರಿಯ ಪುತ್ರ ಅಖಿಲ್ ರವರ ಮೊದಲ ಚಿತ್ರದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ ನಟಿ ಸೈಯ ಶಾ ರವರು, ಇತ್ತೀಚೆಗಷ್ಟೇ ತಮಿಳಿನ ಖ್ಯಾತ ನಟರಾಗಿರುವ ಆರ್ಯ ರವರ ಜೊತೆ ಚಿತ್ರವೊಂದರಲ್ಲಿ ನಟಿಸಿದ್ದರು.

ಚಿತ್ರ ಮುಗಿದ ಬಳಿಕ ಈ ಜೋಡಿ ಕೆಲವು ಬಾರಿ ಹೊರಗಡೆಡೇಟಿಂಗ್ ಮಾಡುತ್ತಿರುವುದು ಕಂಡು ಬಂದಿದ್ದು ಇದೀಗ ಇವರ ಇಬ್ಬರ ಮನೆಯವರು ಒಪ್ಪಿ ಕೊಂಡು ಮದುವೆ ನಡೆಸಲು ಸಿದ್ಧರಿದ್ದಾರೆ. ಇದಕ್ಕೆ ಜೋಡಿಗಳು ಸಹ ಒಪ್ಪಿಕೊಂಡಿದ್ದು ಘಜನಿಕಾಂತ್ ಚಿತ್ರದ ವೇಳೆ ಪ್ರೇಮಾಂಕುರವಾಗಿದ್ದ ಜೋಡಿಗಳು ಮದುವೆಯಾಗಲು ನಿರ್ಧರಿಸಿದ್ದಾರೆ.

ಬಾಲಿವುಡ್ ತಾರೆ ದಿಲೀಪ್ ಕುಮಾರ್ ಸಂಬಂಧಿ ಆಗಿರುವ ಹೈ ಯೆ ಶರ್ ಅವರು ಸದ್ಯ ಆರ್ಯ ಅವರ ಜೊತೆ ಕಾಪ್ಪನ್ ಚಿತ್ರದಲ್ಲಿ ನಟನೆ ಮಾಡುತ್ತಿದ್ದು ಮುಂಬರುವ ಮಾರ್ಚ್ 9 ಹಾಗೂ 10 ರಂದು ಹೈದರಾಬಾದ್ ಅಲ್ಲಿ ಮದುವೆ ನಡೆಯುತ್ತದೆ. ಈ ತಾರೆಗಳ ವೈವಾಹಿಕ ಜೀವನ ಸುಖವಾಗಿರಲಿ ಎಂದು ಆಶಿಸುತ್ತೇವೆ.

Post Author: Ravi Yadav