ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿದ ವಿಶೇಷ ಅತಿಥಿಗಳು ಯಾರು ಗೊತ್ತಾ?

ಕಳೆದ ಹಲವಾರು ವರ್ಷಗಳಿಂದಲೂ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಹಲವಾರು ಗಣ್ಯರಿಗೆ ಅದೆಷ್ಟು ಸರ್ಕಾರಗಳು ಗೌರವವನ್ನು ನೀಡುತ್ತಿರಲಿಲ್ಲ ಆದರೆ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ನಿಜವಾಗಲೂ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಹೋರಾಟಗಾರರಿಗೆ ತಕ್ಕ ಪ್ರತಿಫಲ ದೊರೆಯುತ್ತದೆ.

ದೇಶಕ್ಕಾಗಿ ದುಡಿದ ಅದೆಷ್ಟು ನಾಯಕರನ್ನು ಕಡೆಗಣಿಸಿದ್ದ ಕಳೆದ ಸರ್ಕಾರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಮೋದಿ ರವರ ಆಡಳಿತ ವೈಖರಿ ನೋಡಿ ಬೆಚ್ಚಿ ಬೆರಗಾಗಿ ದೆ. ಮಹಾನ್ ನಾಯಕರನ್ನು ತಿರಸ್ಕರಿಸಿ ತನ್ನ ಆಡಳಿತವನ್ನು ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷದ ನೀತಿಗಳನ್ನು ಬದಲಿಸಿ ನಿಜವಾದ ಹೋರಾಟಗಾರರಿಗೆ ಹಾಗೂ ನಾಯಕರಿಗೆ ನರೇಂದ್ರ ಮೋದಿ ಅವರು ಗೌರವ ಸಲ್ಲಿಸುತ್ತಿದ್ದಾರೆ ಈಗ ಮತ್ತೊಮ್ಮೆ ನರೇಂದ್ರ ಮೋದಿ ಅವರು ಇದೇ ರೀತಿಯ ಕಾರ್ಯದ ಮಾಡಿ ಸದ್ದು ಮಾಡಿದ್ದಾರೆ.

ಪ್ರತಿವರ್ಷದಂತೆ ನವದೆಹಲಿಯ ರಾಜ ಪತ್ ನಲ್ಲಿ ಇಂದು ಭಾರತದ 70 ನೇ ಗಣರಾಜ್ಯೋತ್ಸವ ಪರೇಡ್ ನಡೆಸಲಾಗಿದೆ. ಪ್ರತಿ ಬಾರಿಯೂ ಮುಖ್ಯ ಅತಿಥಿಗಳನ್ನು ಒಳಗೊಂಡ ಹಲವಾರು ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಆದರೆ ಈ ಬಾರಿ ನರೇಂದ್ರ ಮೋದಿ ರವರು ವಿಶೇಷ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಗೌರವ ಸಲ್ಲಿಸಿದ್ದಾರೆ. ಅಷ್ಟಕ್ಕೂ ಅವರು ಯಾರು ಗೊತ್ತಾ??

ಹುಟ್ಟು ಹೋರಾಟಗಾರ ಸುಭಾಷ್ ಚಂದ್ರ ಬೋಸ್ರವರು ಸ್ವಾತಂತ್ರ್ಯ ಹೋರಾಟಕ್ಕಾಗಿ ಸ್ಥಾಪಿಸಿದ ಇಂಡಿಯನ್ ನ್ಯಾಷನಲ್ ಆರ್ಮಿಯ ನಾಲ್ವರು ಸೈನಿಕರನ್ನು ಇಂದು ಮೋದಿ ರವರು ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸುವಂತೆ ಆಹ್ವಾನಿಸಿ ಗೌರವ ಸಲ್ಲಿಸಿದ್ದಾರೆ. ಈ ನಾಲ್ವರು ಮಹಾ ನಾಯಕರಿಗೆ ಸುಮಾರು 97 ರಿಂದ 100 ವರ್ಷ ವಯಸ್ಸಾಗಿದೆ.ಹರಿಯಾಣದ 100 ವರ್ಷದ ಮನೆಸಾರ್ ನಿವಾಸಿ ಭಗ್ಮಾಲ್, ಪಂಚಕುಲದ ಲಲ್ತಿ ರಾಮ್, ಹರಿಯಾಣದ ನಾರ್ನಾಲ್‍ನ ಹಿರಾ ಸಿಂಗ್ ಹಾಗೂ ಚಂಡೀಗಢದ ಪರ್ಮಾನಂದ ಯಾದವ್ ಪರೇಡ್‍ನಲ್ಲಿ ಭಾಗವಹಿಸಲಿದ್ದಾರೆ.

ಇದೇ ಮೊದಲ ಸಲ ಐಎನ್‍ಎದಲ್ಲಿ ಸೈನಿಕರಾಗಿದ್ದವರು ಪರೇಡ್‍ನಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನೂ ನಾಲ್ವರು ಮಾತ್ರ ಪಾಲ್ಗೊಳ್ಳುತ್ತಿರುವುದಕ್ಕೆ ಕಾರಣವೂ ಇದೆ. ಇಂಡಿಯನ್​ ನ್ಯಾಷನಲ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದ್ದವರನ್ನು ಗುರುತು ಹಿಡಿಯುವುದು ಕಷ್ಟಸಾಧ್ಯವಾಗಿದ್ದು, ಆ ಪೈಕಿ ಈ ನಾಲ್ವರ ಬಗ್ಗೆ ಅಧಿಕೃತವಾಗಿ ಮಾಹಿತಿ ಸ್ಪಷ್ಟವಾಗಿದೆ. ಅಲ್ಲದೆ ಅವರು ಪರೇಡ್​ನಲ್ಲಿ ಪಾಲ್ಗೊಳ್ಳಲು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.

Image and news credits: YuvaKesari

Post Author: Ravi Yadav