ಮೈತ್ರಿ ಗೆ ಮತ್ತೊಂದು ಸೋಲು: ಜನರಿಗೆ ತುಸು ನೆಮ್ಮದಿ ನೀಡಿದ ಹೈಕೋರ್ಟ್

ಕಳೆದ ಸಿದ್ದರಾಮಯ್ಯರವರ ಅಧಿಕಾರದ ಅವಧಿಯಲ್ಲಿ ನಿರ್ಮಿಸಲಾಗುತ್ತದೆ ಎಂದಿದ್ದ ಬಹಳ ವಿವಾದವನ್ನೇ ಸೃಷ್ಟಿಸಿದ್ದ ಸ್ಟೀಲ್ ಬ್ರಿಡ್ಜ್ ಮತ್ತೊಮ್ಮೆ ಸುದ್ದಿ ಮಾಡಿದೆ. ಒಂದು ಸ್ಟೀಲ್ ಬ್ರಿಡ್ಜ್ ಕೇವಲ ಒಂದು ಹಗರಣ ಎಂದು ಧರಣಿ ಕೂತಿದ್ದ ಕುಮಾರಸ್ವಾಮಿ ಅವರು ಇಂದು ತಮ್ಮ ಅಧಿಕಾರದ ಆಸೆ ನೀಗಿಸಿಕೊಳ್ಳಲು ಸ್ಟೀಲ್ ಬ್ರಿಡ್ಜ್ ಪರ ನಿಂತಿದ್ದಾರೆ.

ಅಂದು ಯಾವ ರಾಜಕಾರಣಿಗಳು ಸ್ಟೀಲ್ ಬ್ರಿಡ್ಜ್ ಪರ ಧ್ವನಿ ಎತ್ತಿರಲಿಲ್ಲ ಯಾಕೆಂದರೆ ಇದು ಕೇವಲ ಕಾಂಗ್ರೆಸ್ ಸರ್ಕಾರದ ಯೋಜನೆಯಾಗಿದ್ದು ಬದಲಾಗಿ ಇದರಿಂದ ಸಾಕಷ್ಟು ತೊಂದರೆಗಳು ಎದುರಾಗುತ್ತಿದ್ದವು. ಇದನ್ನು ಮನಗಂಡ ಬೆಂಗಳೂರು ಜನತೆಯು ಕಾಂಗ್ರೆಸ್ ಸರ್ಕಾರವನ್ನು ತೀವ್ರ ವಿರೋಧಿಸಿ ತರಾಟೆಗೆ ತೆಗೆದುಕೊಂಡು ನಂತರ ಸ್ಟೀಲ್ ಬ್ರಿಡ್ಜ್ ಕಾಮಗಾರಿ ಯನ್ನು ಕೈ ಬಿಡುವಂತೆ ಮಾಡಿದ್ದರು.

ಆದರೆ ಇಂದು ಅಧಿಕಾರಕ್ಕೆ ಬಂದ ಮೇಲೆ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವು ಜೆಡಿಎಸ್ ಪಕ್ಷದ ಜೊತೆ ಸೇರಿಕೊಂಡು ಸ್ಟೀಲ್ ಬ್ರಿಡ್ಜ್ ನಿರ್ಮಿಸುತ್ತೇವೆ ಎಂದು ಹೇಳಿದಾಗ ಆಕ್ರೋಶ ವ್ಯಕ್ತವಾಗಿತ್ತು. ಅದರಲ್ಲಿಯೂ ಕುಮಾರಸ್ವಾಮಿರವರ ವಿರುದ್ಧವಾಗಿ ಬಾರಿ ಹೇಳಿಕೆಗಳು ಕೇಳಿ ಬಂದವು ಯಾಕೆಂದರೆ ಅಂದು ಸ್ಟೀಲ್ ಬ್ರಿಡ್ಜ್ ಕೇವಲ ಕಾಂಗ್ರೆಸ್ ಪಕ್ಷದ ಒಂದು ಹಣ ಹೊಡೆಯುವ ದಾರಿಯಷ್ಟೆ ಇದರಿಂದ ಯಾರಿಗೂ ಉಪಯೋಗವಾಗುವುದಿಲ್ಲ. ಕೇವಲ ಏಳು ನಿಮಿಷ ಸಮಯವನ್ನು ಉಳಿಸಲು ಸಾವಿರ ಎಂಟು ನೂರು ಕೋಟಿ ಖರ್ಚು ಮಾಡಿ ಬರೋಬ್ಬರಿ 600 ಮರಗಳನ್ನು ಕಡಿಯ ಬೇಕು ಅಷ್ಟೇ ಅಲ್ಲದೆ ಹಲವಾರು ಐತಿಹಾಸಿಕ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಸ್ವತಹ ಕುಮಾರಸ್ವಾಮಿ ರವರೇ ಹೇಳಿದ್ದರು.

ಆದರೆ ಇಂದು ಕುಮಾರಸ್ವಾಮಿ ರವರು ಸ್ಟೀಲ್ ಬ್ರಿಡ್ಜ್ ಪರ ನಿಂತಿರುವುದು ವಿಷಾದನೀಯ ಸಂಗತಿ ಎಂದು ಹಲವಾರು ಜನರು ಧ್ವನಿ ಎತ್ತಿದ್ದರು. ಈಗ ಎರಡು ಸರ್ಕಾರಗಳು ಅಧಿಕಾರದ ಗದ್ದುಗೆ ಇರುವುದರಿಂದ ಸ್ಟೀಲ್ ಬ್ರಿಡ್ಜ್ ನಿರ್ಮಾಣವಾಗುತ್ತದೆ ಎಂದು ಎಷ್ಟೋ ಜನ ನ್ಯಾಯಾಂಗದ ಮೇಲೆ ಭರವಸೆಯನ್ನು ಕಳೆದುಕೊಂಡಿದ್ದರು.

ಆದರೆ ವಿವಾದಿತ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡುವ ಮೂಲಕ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ತಾತ್ಕಾಲಿಕ ತಡೆ ನೀಡಿದೆ. ಇದರಿಂದ ಬೆಂಗಳೂರು ಜನರಿಗೆ ತಾತ್ಕಾಲಿಕವಾಗಿ ನೆಮ್ಮದಿ ದೊರಕಿದೆ. ಕಳೆದ ಬಾರಿ ಬಾರಿ ಬಾರಿ ಹೋರಾಟವನ್ನು ಮಾಡಿದ ಬೆಂಗಳೂರಿನ ಜನರು ಈ ನಿರ್ಧಾರಕ್ಕೆ ಹೈ ಕೋರ್ಟ್ ಗೆ ಹುಗೆ ಹುಗೆ ಎಂದಿದ್ದಾರೆ.

Post Author: Ravi Yadav