ಆಪರೇಷನ್ ಕಮಲ ಇಲ್ಲ ಖಚಿತಪಡಿಸಿದ ಬಿಎಸ್ ವೈ: ಹಾಗಾದರೆ ಮುಂದಿನ ನಡೆಯೇನು??

ಕಳೆದ ಕೆಲವು ದಿನಗಳಿಂದ ಬಿಜೆಪಿ ಪಕ್ಷದ ಮೇಲೆ ಇನ್ನಿಲ್ಲದ ಆರೋಪಗಳು ಕೇಳಿ ಬರುತ್ತಿವೆ. ಮೈತ್ರಿಯ ಯಾವ ಶಾಸಕರನ್ನು ಮಾಧ್ಯಮದವರು ಪ್ರಶ್ನೆ ಮಾಡಿದ ತಕ್ಷಣ ಮೊದಲು ಬರುವ ಮಾತೇ ಬಿಜೆಪಿ ಪಕ್ಷವು ಆಪರೇಷನ್ ಕಮಲ ಮಾಡುತ್ತಿದೆ ಎಂದು. ಆದರೆ ಬಿಜೆಪಿ ಪಕ್ಷವು ಮೊದಲಿನಿಂದಲೂ ಇದಕ್ಕೆ ಸೊಪ್ಪು ಹಾಕುತ್ತಿಲ್ಲ. ಅಷ್ಟೇ ಅಲ್ಲದೆ ತಾನು ಆಪರೇಷನ್ ಕಮಲ ಮಾಡುತ್ತಿಲ್ಲ ಎಂಬುದನ್ನು ಹಲವಾರು ಬಾರಿ ಮಾಧ್ಯಮದವರ ಮುಂದೆ ಒಪ್ಪಿಕೊಂಡಿದೆ.

ಇಷ್ಟಾದರೂ ಸುಮ್ಮನಾಗದ ಮಾಧ್ಯಮಗಳು ಸುಖಾಸುಮ್ಮನೆ ಬಿಜೆಪಿಯವರು  ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಪಕ್ಷದ ಶಾಸಕರಿಗೆ ಗಾಳ ಹಾಕುತ್ತಿದ್ದಾರೆ ಎಂದು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಈಗ ಸಂಕ್ರಾಂತಿ ಹಬ್ಬದ ನಂತರ ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಕ್ರಾಂತಿ ಉಂಟಾಗುತ್ತದೆ ಎಂದು ಮೈತ್ರಿ ಸರ್ಕಾರದ ನಾಯಕರು ಹಬ್ಬಿಸುತ್ತಿರುವ ಊಹಾಪೋಹಗಳಿಗೆ ಯಡಿಯೂರಪ್ಪನವರು  ಇಂದು ತೆರೆ ಎಳೆದಿದ್ದಾರೆ.

ದೆಹಲಿಯಲ್ಲಿ ರಾಜ್ಯದ ಬಿಜೆಪಿ ಶಾಸಕರು ಹಾಗೂ ಹಲವಾರು ಸಂಸದರು ಸಭೆ ನಡೆಸುತ್ತಿರುವುದನ್ನು ಆಪರೇಷನ್ ಕಮಲ ಎಂದು ಬಿಂಬಿಸುತ್ತಿರುವ ವಿರೋಧ ಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಯಡಿಯೂರಪ್ಪನವರು ನಾವು ಯಾವುದೇ ಶಾಸಕರನ್ನು ಬಿಜೆಪಿ ಪಕ್ಷಕ್ಕೆ ಬನ್ನಿ ಎಂದು ಕರೆಯುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ನಾನು ಸಹ ಹಲವಾರು ಮಾಧ್ಯಮಗಳ ಸುದ್ದಿಯನ್ನು ನೋಡಿದ್ದೇನೆ ಸಂಕ್ರಾಂತಿಯ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ ಬಿಜೆಪಿ ಪಕ್ಷದ ಕಡೆಯಿಂದ ಸರ್ಕಾರ ಬೀಳಿಸುವ ಕೆಲಸಕ್ಕೆ ಕೈ ಹಾಕುವುದಿಲ್ಲ ಒಂದು ವೇಳೆ ಸರ್ಕಾರ ತಾನಾಗಿಯೇ ಉರುಳಲಿದೆರೆ, ಖಂಡಿತವಾಗಿಯೂ ನಾವು ಸರ್ಕಾರ ರಚಿಸುತ್ತೇವೆ ಎಂದು ತಮ್ಮ ಮುಂದಿನ ನಡೆಯನ್ನು ಬಹಿರಂಗಪಡಿಸಿದ್ದಾರೆ.ಈ ಮೂಲಕ ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿಲ್ಲ ಎಂಬುದನ್ನು ಖಚಿತ ಪಡಿಸಿದ್ದಾರೆ ಆದರೆ ಬಿಜೆಪಿಯವರಿಗೆ ಇನ್ನೂ ಸರ್ಕಾರ ರಚಿಸುವ ಆಸಕ್ತಿ ಇದೆ ಎಂಬುದು ಸಾಬೀತಾಗಿದೆ.

Post Author: Ravi Yadav